Asianet Suvarna News Asianet Suvarna News

ವಾಲ್ಮೀಕಿ ನಿಗಮ ಹಗರಣದ ತನಿಖೆಗೆ ಶೀಘ್ರವೇ ಸಿಬಿಐ ಎಂಟ್ರಿ; ರಾಜ್ಯದ ಮತ್ತಷ್ಟು ಪ್ರಭಾವಿಗಳಿಗೆ ಜೈಲು ಸೇರುವ ಭೀತಿ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣದ ತನಿಖೆಗೆ ಸಿಬಿಐ ಎಂಟ್ರಿಯಾಗಲಿದ್ದು, ರಾಜ್ಯದ ಪ್ರಭಾವಿ ರಾಜಕಾರಣಿಗಳಿಗೆ ಜೈಲು ಸೇರುವ ಭೀತಿ ಶುರುವಾಗಿದೆ. 

Maharshi Valmiki development Corporation scam CBI Entry Soon to Investigation sat
Author
First Published Jul 3, 2024, 5:10 PM IST

ಬೆಂಗಳೂರು (ಜು.03): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಹಗರಣದ ತನಿಖೆಗೆ ಶೀಘ್ರವಾಗಿ ಕೇಂದ್ರೀಯ ತನಿಖಾ ದಳ -ಸಿಬಿಐ (Central Bureau Of Investigation- CBI) ಎಂಟ್ರಿ ಆಗುವ ಸಾಧ್ಯತೆಯಿದೆ.  ಇದರ ಬೆನ್ನಲ್ಲಿಯೇ ರಾಜ್ಯದ ಮತ್ತಷ್ಟು ಪ್ರಭಾವಿ ರಾಜಕಾರಣಿಗಳಿಗೆ ಜೈಲು ಸೇರುವ ಭೀತಿ ಶುರುವಾಗಿದೆ. 

ಹೌದು, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರದಲ್ಲಿ ನಡೆದ ದೊಡ್ಡ ಮಟ್ಟದ ಹಗರಣ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ. ನಿಗಮದ ಅಧಿಕಾರಿಗಳೇ ಶಾಮೀಲಾಗಿ ಬ್ಯಾಂಕ್ ಸಿಬ್ಬಂದಿಯೊಂದಿಗೆ ಸೇರಿಕೊಂಡು ಬರೋಬ್ಬರೊ 187 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹಣ ವರ್ಗಾವಣೆ ಮಾಡಿದ ಹಗರಣಕ್ಕೆ ಸಂಬಂಧಪಟ್ಟ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಚಿವರ ಮೌಖಿಕ ಆದೇಶವೂ ಇತ್ತು ಎಂದು ನಿಗಮದ ಅಕೌಂಟೆಂಟ್ ಸೂಪರಿಡೆಂಟ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದರ ಬೆನ್ನಲ್ಲಿಯೇ ಸರ್ಕಾರದ ವಿರುದ್ಧ ವಿಪಕ್ಷಗಳು ಹಾಗೂ ಸಾರ್ವಜನಿಕರು ತೀವ್ರ ಟೀಕೆ ಮಾಡಿದ್ದರಿಂದ ಸಂಬಂಧಪಟ್ಟ ಇಲಾಖೆಯ ಸಚಿವ ಬಿ. ನಾಗೇಂದ್ರ ಅವರು ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಇನ್ನು ನಿಗಮದಲ್ಲಿ ನಡೆದ ಹಗರಣದ ಬಗ್ಗೆ ಸಿಐಡಿ ತಂಡದಿಂದ ತನಿಖೆ ನಡೆಯುತ್ತಿದೆ. ಈವರೆಗೆ ಹಲವು ಮಾಹಿತಿಗಳನ್ನು ಕಲೆ ಹಾಕಿರುವ ಈ ತಂಡವು ನಿಗಮದ ಅಧಿಕಾರಿಗಳು, ಹಣ ವರ್ಗಾವಣೆ ಮಾಡಲು ಸಹಕರಿಸಿದ ಬ್ಯಾಂಕ್ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗ ಈ ಪ್ರಕರಣದ ತನಿಖೆ ಮಾಡಲು ಕೇಂದ್ರೀಯ ತನಿಖಾ ದಳ ಎಂಟ್ರಿ ಆಗುವ ಸಾಧ್ಯತೆಯಿದೆ.

Actor Darshan: ಪುಟ್ಟ ಮಗುವಿಗೆ ಕೈದಿ ನಂಬರ್ 6106 ಕೊಟ್ಟು ಫೋಟೋ ಶೂಟ್ ಮಾಡಿಸಿದವರಿಗೆ ನೊಟೀಸ್ ಜಾರಿ

ಸರ್ಕಾರದಲ್ಲಿ ನಡೆದ 100 ಕೋಟಿ ರೂ.ಗಿಂತ ಅಧಿಕ ಮೊತ್ತದ ಹಗರಣ ನಡೆದಲ್ಲಿ ನೇರವಾಗಿ ಸಿಬಿಐ ಈ ಪ್ರಕರಣವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದು ತನಿಖೆ ನಡೆಸಬಹುದು. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರದ ತನಿಖೆಗೆ ಯಾವುದೇ ಕ್ಷಣದಲ್ಲಾದರೂ ಕೂಡ ಸಿಬಿಐ ಎಂಟ್ರಿ ಸಾಧ್ಯತೆಯಿದೆ. ಲೋಕಸಭಾ ಅಧಿವೇಶನ ಮುಕ್ತಾಯವಾಗಿರುವ ಹಿನ್ನಲೆಯಲ್ಲಿ ಸಿಬಿಐ ತನಿಖೆಗೆ ವೇಗ ಸಿಗಲಿದೆ. ರಾಜ್ಯದ ಪ್ರಭಾವಿಗಳನ್ನ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಈಗಾಗಲೇ ಸಿಬಿಐ ಒಂದು ಹಂತದ ವಿಚಾರಣೆಗಳನ್ನು ಮಾಡಿದೆ.

ವಾಲ್ಮೀಕಿ ನಿಗಮದ ಹಗರಣ ಕೇಸಿನಲ್ಲಿ ಅಮಾನತುಗೊಂಡಿರುವ ರಾಜ್ಯದ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಈಗ ಯಾವುದೇ ಕ್ಷಣದಲ್ಲಿ ತನಿಖೆಯ ವೇಗವನ್ನು ಹೆಚ್ಚಿಸಲು ಸಿಬಿಐ ಮುಂದಾಗಿದೆ. ಈ ವೇಳೆ ರಾಜ್ಯದ ಸಿಐಡಿ ತನಿಖೆಯನ್ನು ಕೂಡ ಪರಿಶೀಲಿಸಲಾಗುತ್ತಿದೆ. ತನಿಖೆಯ ಹಂತದಲ್ಲಿ ಎಷ್ಟು ಪ್ರಮಾಣದಲ್ಲಿ ಹಣ ವಾಪಸ್ ಬರಲಿದೆ ಅನ್ನೋದನ್ನ ಸಿಬಿಐ ಕಾಯುತ್ತಿದೆ. ಹಣಕಾಸು ಇಲಾಖೆಯ ಕಾರ್ಯ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಇದು ಆರ್ಥಿಕ ಅಪರಾಧ ಸಂಬಂಧಿತ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಸೂಕ್ಷ್ಮ ಹೆಜ್ಜೆ ಇಡುತ್ತಿದೆ.

ವಾಲ್ಮೀಕಿ ಕೇಸ್‌: ಲ್ಯಾಂಬೋರ್ಗಿನಿ ಕಾರು ನೀಡಿ ಹಣ ಪಡೆದ ಎಸ್‌ಐಟಿ..!

ಸಿಬಿಐ ಅಧಿಕಾರಿಗಳ ತನಿಖೆ ತೀವ್ರಗೊಳ್ಳುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಸುಳಿವು ಸಿಕ್ಕಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಮಾಜಿ ಸಚವ ಬಿ. ನಾಗೇಂದ್ರ ಮತ್ತು ಇತರ ಪ್ರಮುಖ ಮುಖಂಡರು ಸಿಬಿಐ ತನಿಖೆಗೆ ಬಂದರೆ ತನಿಖೆಯಿಂದ ಬಚಾವಾಗುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸುವಂತೆ ಮನವಿ ಮಾಡಿದ್ದಾರಂತೆ. ಇನ್ನು ಸಿಐಡಿ ತನಿಖೆಯು ನಿರೀಕ್ಷಿತ ಪ್ರಮಾಣದಲ್ಲಿ ಆಗದಿರುವ ಸಿಬಿಐ ಕೂಡ ಗಮನಹರಿಸಿದ್ದು, ಉನ್ನತ ಮಟ್ಟದ ಸಭೆಯಲ್ಲೂ ಈ ಬಗ್ಗೆ ಚರ್ಚೆ ಮಾಡಿದೆಯಂತೆ. ಲೋಕಸಭಾ ಅಧಿವೇಶನದ ಬಳಿಕ ತನಿಖೆಗೆ ಮುಂದಾಗಲು ಲೆಕ್ಕಾಚಾರ ಹಾಕಿರುವ ಸಿಬಿಐ ಅಧಿಕಾರಿಗಳು, ಈಗ ಯಾವುದೇ ಕ್ಷಣದಲ್ಲಿ ರಾಜ್ಯದ ಪ್ರಭಾವಿಗಳನ್ನ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

Latest Videos
Follow Us:
Download App:
  • android
  • ios