Asianet Suvarna News Asianet Suvarna News

Coronavirus Updates: ಸದ್ಯಕ್ಕೆ ಓಮಿಕ್ರಾನ್ ಆತಂಕ ಇಲ್ಲ‌: ಗಡಿಭಾಗದಲ್ಲಿ ಕಟ್ಟೆಚ್ಚರ: ಸಚಿವ ಸುಧಾಕರ್‌

Karnataka Covid 19 Updates: ರಾಜ್ಯದಲ್ಲಿ ಸದ್ಯಕ್ಕೆ ಓಮಿಕ್ರಾನ್ ಆತಂಕ ಇಲ್ಲ‌, ನಮ್ಮಲ್ಲಿ ಓಮಿಕ್ರಾನ್ ರೂಪಾಂತರ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್‌ ಹೇಳಿದ್ದಾರೆ 

Maharashtra reports new sub variants of Omicron will Tighten Karnataka Borders K Sudhakar mnj
Author
First Published Oct 27, 2022, 12:38 PM IST

ಮೈಸೂರು (ಅ. 27): ದೇಶದಲ್ಲಿ ಮತ್ತೆ ಕೊರೋನಾ (Covid 19) ಭೀತಿ ಆರಂಭವವಾಗಿದ್ದು ಮಹಾರಾಷ್ಟ್ರದಲ್ಲಿ (Maharashtra) ಕೊರೋನಾ ವೈರಸ್‌ನ ಒಮಿಕ್ರೋನ್‌ ತಳಿಯ ಹೊಸ ರೂಪಾಂತರಿ ಬಿಕ್ಯು.1 ಪತ್ತೆಯಾಗಿದೆ. ಈ ಬೆನ್ನಲ್ಲೆ ಮೈಸೂರಿನಲ್ಲಿ (Mysuru) ಮಾತಾನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್‌ (K Sudhakar) ಸದ್ಯಕ್ಕೆ ಓಮಿಕ್ರಾನ್ (Omicron) ಆತಂಕ ಇಲ್ಲ‌, ನಮ್ಮಲ್ಲಿ ಓಮಿಕ್ರಾನ್ ರೂಪಾಂತರ ಪತ್ತೆಯಾಗಿಲ್ಲ ಎಂದರು. ಅಮೆರಿಕಾದಲ್ಲಿ ತೀವ್ರತರವಾದ ಕೇಸ್‌ಗಳು ಕಂಡುಬಂದಿವೆ. ಮಹಾರಾಷ್ಟ್ರದಲ್ಲಿ ಒಂದು ಕೇಸ್ ಪತ್ತೆಯಾಗಿದೆ.  ನಮ್ಮಲ್ಲಿ ಕೇಸ್ ಪತ್ತೆಯಾಗಿಲ್ಲ‌, ಆದರೂ ಗಡಿ ಜಿಲ್ಲೆಗಳಿಗೆ ವಿಸ್ತೃತವಾದ ಮಾರ್ಗಸೂಚಿ ನೀಡಿದ್ದೇವೆ ಎಂದು ಅವರು ತಿಳಿಸಿದರು. 

ಜಿಲ್ಲಾಧಿಕಾರಿಗಳಿಗೆ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿನೆ ನೀಡಲಾಗಿದ್ದು ಮಾಸ್ಕ್ ಕಡ್ಡಾಯಗೊಳಿಸುವ ಸಂದರ್ಭ ಬಂದಿಲ್ಲ ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕನ ಮಾಡುತ್ತಿದ್ದೇವೆ, ಮೂರನೇ ಡೋಸ್ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು. 

ಆರೋಗ್ಯ ಇಲಾಖೆ ಅಲರ್ಟ್:‌ ಇನ್ನು ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಹೊಸ ತಳಿ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ (Health Department) ಅಲರ್ಟ್‌ ಆಗಿದ್ದು ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಸೂಚಿಸಿದೆ.  ಗುಂಪು ಸೇರುವಿಕೆಯಿಂದ ದೂರ ಇರುವುದು, ಮೂರನೇ ಡೋಸ್‌ ಲಸಿಕೆ ಪಡೆಯುವುದ ಹಾಗೂ ಮಾಸ್ಕ್‌ ಧರಿಸುವುದು ಸೇರಿಂತೆ ಕೋವಿಡ್‌ ನಿಯಮಗಳನ್ನು ಪಾಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.  

ಲಸಿಕೆ ಹಾಕಿಸಿಕೊಂಡವರಿಗೂ ಮತ್ತೆ ವಕ್ಕರಿಸುತ್ತೆ ಕೋವಿಡ್, ರೋಗ ಲಕ್ಷಣಗಳೇನು ?

ಹೊಸ ತಳಿ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ನೆಗಡಿ,  ಗಂಟಲು ಕೆರೆತ, ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ಹತ್ತಿರದ ಆಸ್ಪತ್ರೆ, ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್‌ ಟೆಸ್ಟ್ ನಡೆಸಿ ಫಲಿತಾಂಶ ದೊರೆಯುವವರೆಗೂ ಸ್ವಯಂ ಪ್ರತ್ಯೇಕವಾಸ ಇರಬೇಕು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ತಕ್ಷಣವೇ ಹತ್ತಿರದ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಲಾಗಿದೆ.

Follow Us:
Download App:
  • android
  • ios