Asianet Suvarna News Asianet Suvarna News

ದೇಶದಲ್ಲಿ ಮೋದಿ ಆಯ್ಕೆ ಮಾಡಿದ್ರೆ ಉಳಿತೀರಿ, ಇಲ್ಲಾಂದ್ರೆ ಯಾರೂ ಉಳಿಯೊಲ್ಲ: ಮಹಾಲಿಂಗೇಶ್ವರ ಸ್ವಾಮೀಜಿ ಭವಿಷ್ಯ!

ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಎಲ್ಲರೂ ಉಳಿಯುತ್ತೀರಿ, ಮೋದಿಯನ್ನ ಆರಿಸಿ ತರಲಿಲ್ಲವೆಂದರೆ ಯಾರೂ ಉಳಿಯೋದಿಲ್ಲ.

Mahalingeshwar Swamiji Prediction If Modi is elected you will stay otherwise no one will stay sat
Author
First Published Oct 16, 2023, 5:51 PM IST

ಬಾಗಲಕೋಟೆ (ಅ.16): ದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಎಲ್ಲರೂ ಉಳಿಯುತ್ತೀರಿ, ಮೋದಿಯನ್ನ ಆರಿಸಿ ತರಲಿಲ್ಲವೆಂದರೆ ಯಾರೂ ಉಳಿಯೋದಿಲ್ಲ ಎಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದ ಮಹಾಲಿಂಗೇಶ್ವರ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಮಹಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಹಿನ್ನೆಲೆ ನಡೆದ ವಿಶೇಷ ಪೂಜೆಯ ನಂತರ ಜಟ ಹಿಡಿದು ಭವಿಷ್ಯ ನುಡಿದಿರುವ ಮಹಲಿಂಗೇಶ್ವರ ಸ್ವಾಮೀಜಿ ಅವರು, ಜಟ ಹಿಡಿದು ಪ್ರದರ್ಶನ ಮಾಡಿದ ಅವರು ಇದರ ಮೇಲೆ ಏನಾದ್ರೂ ವ್ಯತ್ಯಾಸ ಮಾಡಿದ್ರಿ ಅಂದ್ರ ಉಳಿತೀರಿ, ಮೋದಿನ ಆರಿಸಿ ತರ್ಲಿಲ್ಲಾಂದ್ರ ನೀವ್ಯಾರೂ ಉಳಿಯಲ್ಲ ಎಂದು ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಇದರಿಂದ ರಾಜಕೀಯ ವಲಯದಲ್ಲಿ ಭಾರಿ ಸಂಚಲನವೇ ಸೃಷ್ಟಿಯಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಈ ವೀಡಿಯೋ ಭಾರಿ ವೈರಲ್‌ ಆಗುತ್ತಿದೆ. 

ಹಾಸನದ ಮದ್ಯದಂಗಡಿ ವಿಚಾರಕ್ಕೆ ಜನತಾದರ್ಶನ ವೇದಿಕೆಯಲ್ಲಿ ಕಿತ್ತಾಡಿಕೊಂಡ ಶಾಸಕರು

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಮಹಾಲಿಂಗೇಶ್ವರ ಮಠದ ಮಹಾಲಿಂಗೇಶ್ವರ ಸ್ವಾಮೀಜಿ ಜಟ ಹಿಡಿದು ಭವಿಷ್ಯ ನುಡಿದಿರುವ ವಿಡಿಯೋ ವೈರಲ್ ಆಗುತ್ತಿದೆ. ನವರಾತ್ರಿ ಹಿನ್ನೆಲೆ  ನಡೆದ ವಿಶೇಷ ಪೂಜೆ ನೆರವೇರಿಸಿ ಜಟ ಹಿಡಿದು ಭವಿಷ್ಯ ಹೇಳಿದ್ದಾರೆ. ಜಟ ಪ್ರತಿವರ್ಷ ಬೆಳೆಯುತ್ತೆ ಅನ್ನೋದು ಇಲ್ಲಿನ ಭಕ್ತರ ನಂಬಿಕೆಯಾಗಿದೆ. ಜಟ ಭವಿಷ್ಯವೂ ನಿಜವಾಗುತ್ತೆ ಅನ್ನೋದು ನಂಬಿಕೆ ಭಕ್ತರಲ್ಲಿದೆ.

ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ? ಜಗತ್ತಿನಲ್ಲಿ ಕಣ್ಮರೆಯಾಗಲಿರುವ ದೇಶ ಯಾವುದು?
ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ಯುದ್ಧವನ್ನು ನೋಡುತ್ತಿದ್ದರೆ, ಕೋಡಿ ಮಠದ ಸ್ವಾಮೀಜಿ ಕಳೆದ ಎರಡು ತಿಂಗಳ ಹಿಂದೆ ನುಡಿದ ಜಗತ್ತಿನಲ್ಲಿ ಒಂದು ದೇಶ ಕಣ್ಮರೆಯಾಗಲಿದೆ ಎಂಬ ಭವಿಷ್ಯ ನಿಜವಾಗುವುದೇ ಎಂಬ ಅನುಮಾನ ಕಂಡುಬರುತ್ತಿವೆ. 'ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ. ಜಾಗತಿಕ ಭೂಪಟದಲ್ಲಿ ಒಂದು ದೇಶ ಕಣ್ಮರೆಯಾಗುತ್ತದೆ ಎಂದು ಹಾಸನ ಕೋಡಿಮಠದ  ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಆದರೆ, ಈ ಭವಿಷ್ಯ ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ಯುದ್ಧದಲ್ಲಿ ಒಂದು ದೇಶ ಭೂಪಟದಿಂದ ಕಣ್ಮರೆಯಾಗುವ ಭವಿಷ್ಯವನ್ನು ನಿಜ ಮಾಡುವುದೇ ಎಂಬ ಅನುಮಾನ ಕಾಡುತ್ತಿದೆ.

ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ? ಜಗತ್ತಿನಲ್ಲಿ ಕಣ್ಮರೆಯಾಗಲಿರುವ ದೇಶ ಇಸ್ರೇಲ್‌ ಅಥವಾ ಪ್ಯಾಲೆಸ್ತೇನ್‌?

ಕಾಲಜ್ಞಾನದ ಯಾವುದೇ ಭವಿಷ್ಯ ಸುಳ್ಳಾಗಿಲ್ಲವೆಂದು ಆಗಾಗ ಭವಿಷ್ಯ ನುಡಿಯುವ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ  ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಕಳೆದ ಎರಡು ತಿಂಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದರು. ಶ್ರಾವಣ ಮಾಸದ ಮಧ್ಯಂತರದಲ್ಲಿ ಜಾಗತಿಕ ಮಟ್ಟದಲ್ಲಿ ವಿಪರೀತ ಮಳೆಯಾಗಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಭೀತಿಯಿದೆ. ಭೂಕಂಪನಗಳು, ಸುನಾಮಿಗಳಿಂದ ಹೆಚ್ಚಿನ ಜನರ ಸಾವು ನೋವು ಸಂಭವಿಸಲಿವೆ. ವಿಷಾನೀಲ ಬೀಸುವ ಪ್ರಸಂಗವೂ ಇದೆ, ಅದು ಎಲ್ಲ ಕಡೆಯೂ ವ್ಯಾಪಿಸಲಿದೆ. ಯುದ್ಧದ ಭೀತಿಯಿಂದ ಹಾಗೂ ಮಳೆಯಿಂದ ಎರಡು ದೇಶಗಳು ಭೂಪಟದಿಂದ ಕಣ್ಮರೆಯಾಗಲಿವೆ ಎಂದು ಹೇಳಿದ್ದರು. ಕೋಡಿ ಶ್ರೀಗಳ ಭವಿಷ್ಯ ಮತ್ತೆ ನಿಜವಾಗುತ್ತಿದೆ ಎಂಬಂತೆ ಇಸ್ರೇಲ್‌- ಪ್ಯಾಲೆಸ್ತೇನ್‌ ಯುದ್ಧ ಆರಂಭವಾಗಿದೆ.

Follow Us:
Download App:
  • android
  • ios