Asianet Suvarna News Asianet Suvarna News

ನೋಡೋಕೆ ಆ ಶಾಸಕನೇ ಬ್ರಿಟಿಷ್ ಇದ್ದಂಗೆ ಅದಾನ; ಮಾಗಡಿ ಶಾಸಕ ಬಾಲಕೃಷ್ಣಗೆ ಸಂಸದ ಜಿಗಜಿಣಗಿ ತಿರುಗೇಟು!

ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ. ಆ ಶಾಸಕನ ಬಗ್ಗೆ ಹೆಚ್ಚು ಮಾತಾಡಿ ಪ್ರಯೋಜನ ಇಲ್ಲ ಎಂದು ಬಿಜೆಪಿಯವ್ರನ್ನು ಬ್ರಿಟಿಷರಿಗೆ ಹೋಲಿಸಿದ್ದ ಮಾಗಡಿ ಶಾಸಕ ಬಾಲಕೃಷ್ಣಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದರು.

Magadi MLA Balakrishna controversy statement about bjp MP Ramesh jigajinagi reaction at vijayapur rav
Author
First Published Nov 27, 2023, 1:39 PM IST

ವಿಜಯಪುರ (ನ.27): ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ. ಆ ಶಾಸಕನ ಬಗ್ಗೆ ಹೆಚ್ಚು ಮಾತಾಡಿ ಪ್ರಯೋಜನ ಇಲ್ಲ ಎಂದು ಬಿಜೆಪಿಯವ್ರನ್ನು ಬ್ರಿಟಿಷರಿಗೆ ಹೋಲಿಸಿದ್ದ ಮಾಗಡಿ ಶಾಸಕ ಬಾಲಕೃಷ್ಣಗೆ ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದರು.

ಇಂದು ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಪುಲ್ವಾಮಾದಲ್ಲಿ ಸೈನಿಕರು ಸಾಯಲು ಮೋದಿ ಯಾಕೆ ಕಾರಣರಾಗುತ್ತಾರೆ? ನಮ್ಮ ಸೈನಿಕರಿಗೆ ಉಗ್ರರು ತೊಂದರೆ ಮಾಡಿದ್ದಕ್ಕೆ ಮೋದಿ ಅವರು ಸರ್ಜಿಕಲ್ ಸ್ಟ್ರೈಕ್ ಮಾಡಿ ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರು ಇದು ತಪ್ಪಾ? ಎಂದು ಪ್ರಶ್ನಿಸಿದರು.

 

ಬಿಜೆಪಿಯವ್ರು ಬ್ರಿಟಿಷರಿಗಿಂತ ಡೇಂಜರ್; ಮಾಗಡಿ ಶಾಸಕ ಬಾಲಕೃಷ್ಣ ವಿವಾದಾತ್ಮಕ ಹೇಳಿಕೆ!

ಇನ್ನು ಬಿಜೆಪಿಯವರು ಬ್ರಿಟಿಷರಿಗಿಂತ ಡೇಂಜರ್ ಇದ್ದಾರೆ ಎಂಬ ಮಾಗಡಿ ಶಾಸಕನ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ಆ ಶಾಸಕನ ಬಗ್ಗೆ ನಾನೇನು ಮಾತಾನಾಡುವದಿಲ್ಲ. ನೋಡೋದಕ್ಕೆ ಆ ಮಾಗಡಿ ಶಾಸಕನೇ ಬ್ರಿಟಿಷ ಇದ್ದಂಗೆ ಅದಾನ. ಬಿಜೆಪಿ ಜೆಡಿಎಸ್ ಸಮಿಶ್ರ ಸರ್ಕಾರವಾದ್ರೆ ಉತ್ತರ ಪ್ರದೇಶದಲ್ಲಿ ಬಿಎಸ್ ಪಿ ಗೆ ಆದ ಗತಿ ಜೆಡಿಎಸ್ ಗೆ ಆಗತ್ತೆ ಎಂಬ ಹೇಳಿಕೆ ನೀಡಿರುವ ಆ ಶಾಸಕನ ಬಾಯಿ ಇರೋದೇ ಹಾಗೆ ಅದಕ್ಕೆ ಹಾಗೆ ಹೇಳಿಕೊಂಡು ತಿರುಗಾಡ್ತಾರೆ. ನಮ್ಮ ನಾಯಕರು ಏನು ತೀರ್ಮಾನ ಮಾಡಿದ್ದಾರೆ ಅದಕ್ಕೆ ನಾವು ಬದ್ದರಾಗಿರುತ್ತೇವೆ ಎಂದರು.

ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಿಕ್ಸ್ ವೇ ಯಾಗಿ ಮೇಲ್ದರ್ಜೆಗೆರಿಸಲು ಕ್ರಮ: ಸಂಸದ ಜಿಗಜಿಣಗಿ

ಮಾಗಡಿ ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ಬಾಲಕೃಷ್ಣ ಬಿಜೆಪಿಯವ್ರನ್ನು ಬ್ರಿಟಿಷರಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.  ಬಿಜೆಪಿಯವರು ಬ್ರಿಟಿಷರಿದ್ದಂಗೆ ಯಾರು ಪ್ರಬಲರಾಗಿರುತ್ತಾರೆ. ಅವರ ಮಧ್ಯೆ ಗುಂಪು ಕಟ್ಟಿ ಎತ್ತಿಕಟ್ಟುವ ಕೆಲಸ ಬಿಜೆಪಿ ಮಾಡ್ತಿದೆ. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಗೆ ಬಂದಿರುವ ಸ್ಥಿತಿ ಕರ್ನಾಟಕದಲ್ಲಿ ಜೆಡಿಎಸ್ ಗೆ ಬರುತ್ತದೆ. ಈಗಲೇ ಜೆಡಿಎಸ್ ಪಕ್ಷದವರು ಎಚ್ಚೆತ್ತುಕೊಳ್ಳದಿದ್ದರೆ ಅವರ ಅಸ್ಥಿತ್ವವನ್ನು ಸಂಪೂರ್ಣ ಮುಗಿಸುವ ಕೆಲಸ ಬಿಜೆಪಿ ಮಾಡುತ್ತದೆ ಎನ್ನುವ ಮೂಲಕ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದಕ್ಕೆ ಕಿಡಿಕಾರಿದ್ದರು.

Follow Us:
Download App:
  • android
  • ios