Asianet Suvarna News Asianet Suvarna News

ಸೋಲಾಪುರ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಿಕ್ಸ್ ವೇ ಯಾಗಿ ಮೇಲ್ದರ್ಜೆಗೆರಿಸಲು ಕ್ರಮ: ಸಂಸದ ಜಿಗಜಿಣಗಿ

45 ವರ್ಷಗಳಿಂದ ನಮ್ಮ ನಿಮ್ಮ ಸಂಬಂಧವಿದೆ. ನೀವು ಪ್ರೀತಿಯಿಂದ ನನ್ನನ್ನು ಬಿಳಿಸಿದ್ದೀರಿ. ನಿಮ್ಮ ಸಹಕಾರದಿಂದ 9 ವರ್ಷದಲ್ಲಿ ಜಿಲ್ಲೆಗೆ ಒಂದು ಲಕ್ಷ ಕೋಟಿ ಅನುದಾನ ತಂದಿದ್ದೇನೆ. ನಿಮ್ಮ ಬೇಡಿಕೆಗಳನ್ನು ಕ್ರಮೇಣ ಪೂರೈಸುತ್ತೇನೆ ಎಂದು ಭರವಸೆ ನೀಡಿದ ಸಂಸದ ರಮೇಶ ಜಿಗಜಿಣಗಿ 

Action to upgrade Solapur Vijaypura National Highway to Six Way Says MP Ramesh Jigajinagi grg
Author
First Published Nov 18, 2023, 9:00 PM IST

ಚಡಚಣ(ನ.18):  ಸೋಲಾಪುರ -ವಿಜಯಪುರ ರಾಷ್ಟ್ರೀಯ ಹೆದ್ದಾರಿ ಸಿಕ್ಸ್ ವೇ ಯಾಗಿ ಮೇಲ್ದರ್ಜೆಗೆರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ತಾಲೂಕಿನ ಜೀರಂಕಲಗಿ ಗ್ರಾಮದಲ್ಲಿ ಗ್ರಾಮಕ್ಕೆ ನೂತನವಾಗಿ ನಿರ್ಮಿಸಲಾದ ದ್ವಾರಬಾಗಿಲು (ಅಗಸಿ ) ಉದ್ಘಾಟನಾ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದ ಅವರು, 45 ವರ್ಷಗಳಿಂದ ನಮ್ಮ ನಿಮ್ಮ ಸಂಬಂಧವಿದೆ. ನೀವು ಪ್ರೀತಿಯಿಂದ ನನ್ನನ್ನು ಬಿಳಿಸಿದ್ದೀರಿ. ನಿಮ್ಮ ಸಹಕಾರದಿಂದ 9 ವರ್ಷದಲ್ಲಿ ಜಿಲ್ಲೆಗೆ ಒಂದು ಲಕ್ಷ ಕೋಟಿ ಅನುದಾನ ತಂದಿದ್ದೇನೆ. ನಿಮ್ಮ ಬೇಡಿಕೆಗಳನ್ನು ಕ್ರಮೇಣ ಪೂರೈಸುತ್ತೇನೆ ಎಂದು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪುರುಷೋತ್ತಮ ಜೋಶಿ, ದ್ವಾರಬಾಗಿಲು(ಅಗಸಿ )ನಿರ್ಮಾಣಕ್ಕೆ ನಡೆದಾಡುವ ದೇವರು ಸಿದ್ದೇಶ್ವರ ಮಹಾಸ್ವಾಮೀಜಿ ಪ್ರೇರಣೆಯಾಗಿದ್ದಾರೆ. ಅವರು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಳಿದ ₹1.75 ಲಕ್ಷ ಹಣ ಹಾಗೂ ಗ್ರಾಮಸ್ಥರು ಸಹಾಯದಿಂದ ಭವ್ಯ ಅಗಸಿ ನಿರ್ಮಾಣವಾಗಿದೆ. ಗ್ರಾಮಕ್ಕೆ ಒಂದು ಪ್ರೌಢಶಾಲೆ, ರಸ್ತೆ, ಪ್ರಾಥಮಿಕ ಅರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಶಾಲೆಯನ್ನು ಶಾಸಕರು ದತ್ತು ಪಡೆದು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

ಪಂಚಸಾಲಿ ನಾಯಕರಿಗೆ ತಪ್ಪಿದ ವಿರೋಧ ಪಕ್ಷದ ನಾಯಕ ಸ್ಥಾನ; ಸಿಡಿದೆದ್ದ ಜಯಮೃತ್ಯುಂಜಯಶ್ರೀ

ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಜನರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದರು. ರೈತರು ಸ್ವಾಭಿಮಾನಿಗಳಾಗಳು. ಅವರಿಗೆ ನೀರು ಅವಶ್ಯಕ ಆದ್ದರಿಂದ ಚಡಚಣ ಏತ ನೀರಾವರಿ ಮೂಲಕ ನೀರು ತರುವ ಕೆಲಸ ಮೊದಲು ಮಾಡುತ್ತೇನೆ ಎಂದರು. ಕರೆಂಟ್ ಅಭಾವ ನಿಗಿಸಲು 4ಸಬ್ ಸ್ಟೇಷನ್ ಗಳ ಕಾಮಗಾರಿಗಳು ಶೀಘ್ರದಲ್ಲಿ ಪ್ರಾರಂಭವಾಗಲಿವೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ಬಿ ಎಂ ಕೋರೆ ಮಾತನಾಡಿ, ಜೀರಂಕಲಗಿ ಗ್ರಾಮದಸ್ಥರಿಗೂ ನನಗು ಅವಿನಾಭವ ಸಂಬಂಧವಿದೆ. ಅವರು ನನಗೆ ಪ್ರೀತಿಯಿಂದ ಮತ ನೀಡಿದ್ದರಿಂದ ನಾನು ಗೆದ್ದಿದ್ದೇನೆ. ಅವರು ನನ್ನ ಮನಸ್ಸು ಗೆದ್ದಿದ್ದಾರೆ ಎಂದು ಹೇಳಿದರು.

ಕಾತ್ರಾಳದ ಅಮೃತಾನಂದ ಸ್ವಾಮೀಜಿ, ಹಾವಿನಳದ ವಿಜಯಮಹಾಂತೇಶ ಸ್ವಾಮೀಜಿ, ನಾಗಠಾಣದ ಪ್ರಜ್ಞಾನಂದ ಮಹಾಸ್ವಾಮೀಜಿ, ಸಿದ್ದರಾಮ ಪಟ್ಟದೇವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಭೀಮುಗೌಡ ಬಿರಾದಾರ, ಮುಖಂಡ ಸಂಗಮೇಶ ಅವಜಿ, ಚಂದ್ರಶೇಖರ ಅವಜಿ, ಮಹಾದೇವ ಕರ್ಲಮಳ, ಕಂತುಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಅಪ್ಪಸಾಬ ಹಾವಿನಾಳ, ಬಸವರಾಜ ಇಂಗಳೆ, ಜಿ ಎಸ್ ಕುಲಕರ್ಣಿ, ಚಿದಾನಂದ ಕಟ್ಟಿಮನಿ, ಶ್ರೀಶೈಲ ದಂದರಗಿ ಇದ್ದರು. ಕಾರ್ಯಕ್ರಮದ ಮುಂಚಿತವಾಗಿ ಅಗಸಿಯಲ್ಲಿ ಹೋಮ ಹವನ ಹಾಗೂ 101 ಮಹಿಳೆಯರಿಂದ ಕುಂಭ ಮೇಳ ಜರುಗಿತು.

Follow Us:
Download App:
  • android
  • ios