ಆನೆಗೆ ಕಬ್ಬು ನೀಡಿ 75 ಸಾವಿರ ದಂಡ ತೆತ್ತ ಲಾರಿ ಚಾಲಕ!
ರಾಷ್ಟ್ರೀಯ ಹೆದ್ದಾರಿಯಲ್ಲಿ ಗಜರಾಜನಿಗೆ ಕಬ್ಬು ನೀಡಿದ ಲಾರಿ ಚಾಲಕನಿಗೆ ತಮಿಳುನಾಡು ಪೊಲೀಸರು ಬರೋಬ್ಬರಿ .75 ಸಾವಿರ ದಂಡ ಹಾಕಿರುವ ಘಟನೆ ಭಾನುವಾರ ನಡೆದಿದೆ.
ಚಾಮರಾಜನಗರ (ಡಿ.07): ರಾಷ್ಟ್ರೀಯ ಹೆದ್ದಾರಿಯಲ್ಲಿ ಗಜರಾಜನಿಗೆ ಕಬ್ಬು ನೀಡಿದ ಲಾರಿ ಚಾಲಕನಿಗೆ ತಮಿಳುನಾಡು ಪೊಲೀಸರು ಬರೋಬ್ಬರಿ .75 ಸಾವಿರ ದಂಡ ಹಾಕಿರುವ ಘಟನೆ ಭಾನುವಾರ ನಡೆದಿದೆ. ಮೈಸೂರು ಜಿಲ್ಲೆಯ ನಂಜನಗೂಡು ಮೂಲದ ಚಾಲಕ ಸಿದ್ದರಾಜು ದಂಡ ಶಿಕ್ಷೆಗೆ ಗುರಿಯಾದಾತ. ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಆಸನೂರು ಸಮೀಪ ರಸ್ತೆ ಬದಿ ನಿಂತಿದ್ದ ಆನೆಗೆ ಕಬ್ಬಿನ ಕಂತೆಗಳನ್ನು ಎಸೆಯಲಾಗಿತ್ತು.
ಇದನ್ನು ನೋಡಿದ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಪೂರ್ವಾಪರ ವಿಚಾರಿಸಿ ದಂಡ ಹಾಕಿದ್ದಾರೆ. ದಂಡ ಕಟ್ಟುವ ತನಕ ಲಾರಿ ಬಿಡುವುದಿಲ್ಲ ಎಂದು ಸೂಚಿಸಿದ್ದರಿಂದ ಅನಿವಾರ್ಯವಾಗಿ ಚಾಲಕ ದಂಡ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಬ್ಬಿನ ರುಚಿಗಾಗಿ ಆನೆಗಳು ಆಗಾಗ್ಗೆ ಲಾರಿಗಳಿಗೆ ಅಡ್ಡ ಹಾಕುವುದು ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಆಸನೂರು ಭಾಗದಲ್ಲಿ ಸಾಮಾನ್ಯವಾಗಿದೆ. ಇದೀಗ ಲಾರಿ ಚಾಲಕನಿಗೆ ಈ ಪರಿ ದಂಡ ವಿಧಿಸಿರುವ ಅರಣ್ಯ ಇಲಾಖೆ ಕ್ರಮ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.
ರಾಮುಲು ಪಂಚವಟಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ದೇಗುಲಗಳಿಗೆ ಭೇಟಿ
ಬಾಲಕ ವಾಹನ ಚಲಾವಣೆ, ದಂಡ: ಬಾಲಕನಿಗೆ ದ್ವಿಚಕ್ರ ವಾಹನ ಚಾಲನೆಗೆ ಅವಕಾಶ ನೀಡಿದ ಮಾಲೀಕಗೆ ದಾಂಡೇಲಿ ಜೆಎಂಎಫ್‌ಸಿ ನ್ಯಾಯಾಲಯ .30 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ. ಇತ್ತೀಚೆಗೆ ನಗರದ ಬರ್ಚಿ ರಸ್ತೆಯ ಹತ್ತಿರ ಪೊಲೀಸರು ವಾಹನ ಪರಿಶೀಲನೆಯ ಸಂದರ್ಭದಲ್ಲಿ ದ್ವಿಚಕ್ರ ವಾಹನವೊಂದನ್ನು ಬಾಲಕ ಚಲಾಯಿಸುತ್ತಿದುದ್ದು ಕಂಡುಬಂದಿತ್ತು.
ಈ ಕುರಿತು ದ್ವಿಚಕ್ರ ವಾಹನ ಮಾಲೀಕನಿಗೆ ನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಕೊಂಡು ಚಾಲನಾ ಪರವಾನಿಗೆ ಪತ್ರ ಹೊಂದಿರದ ಬಾಲಕನಿಗೆ ದ್ವಿಚಕ್ರ ವಾಹನ ಚಲಾವನೆಗೆ ಅವಕಾಶ ನೀಡಿದ್ದ ವಾಹನ ಮಾಲೀಕ ಹಳೆದಾಂಡೇಲಿಯ ನವೀನ ನಾಗಯ್ಯ ಮುನಿಗಟ್ಟಿವಿರುದ್ಧ ವಾಹನ ಕಾನೂನು ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪತ್ರವನ್ನು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಐ.ಆರ್. ಗಡ್ಡೆಕರ ಸಲ್ಲಿಸಿದ್ದರು. ದಾಂಡೇಲಿ ಜೆಎಂಎಫ್‌ಸಿ ನ್ಯಾಯಾಧೀಶೆ ರೋಹಿಣಿ ಬಸಾಪುರ ಆರೋಪಿಗೆ .30 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಹುಸೇನಸಾಬ್ ಎಂ. ನದಾಫ ವಾದಿಸಿದ್ದರು.
ಮನೆ ನೀಡದ ಬಿಲ್ಡರ್‌ಗೆ ದಂಡ: ಮನೆ ನಿರ್ಮಿಸಿಕೊಡದ ಬಿಲ್ಡರ್‌ಗೆ ದೂರುದಾರರಿಂದ ಪಡೆದ ಬಡ್ಡಿ ಸಮೇತ ಮುಂಗಡ ಹಣ, ಪರಿಹಾರ ಮತ್ತು ದಂಡ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗದ ಆದೇಶ ನೀಡಿದೆ. ಧಾರವಾಡದ ಮಧು, ಪುಷ್ಪಾ, ಸರೋಜಾ ಕಲವೆಕತಕರ ಎಂಬುವವರು ವೀರಭದ್ರೇಶ್ವರ ಇನ್‌ಪ್ರಾಸ್ಟ್ರಕ್ಚರ್ ಮತ್ತು ಹೌಸಿಂಗ್ ಆಡಳಿತಾತ್ಮಕ ನಿರ್ದೇಶಕ ನಾಗನಗೌಡ ಶಿವನಗೌಡ ನೀರಲಗಿ ಅವರ ಜತೆ ಪೂರ್ಣಿಮಾ ಲೇಔಟ್‌ನಲ್ಲಿ ನ್ಯಾನೊ ಅಪಾರ್ಟ್‌ಮೆಂಟ್‌ನಲ್ಲಿ ಪ್ಲ್ಯಾಟ್‌ಗೆ ಒಪ್ಪಿ ಪ್ರತಿಯೊಬ್ಬರಿಂದ ತಲಾ . 1,02,500 ಪಡೆದು ಒಪ್ಪಂದ ಮಾಡಿಕೊಳ್ಳಲಾಗಿತು. ಈ ಪೈಕಿ ದೂರುದಾರರಿಂದ . 3,07,500 ಮುಂಗಡವಾಗಿ ಪಡೆದುಕೊಂಡಿದ್ದರು.
ಕರ್ನಾಟಕ ಸೇರುತ್ತೇವೆಂದ ಗ್ರಾಮಸ್ಥರಿಗೆ ಮಹಾರಾಷ್ಟ್ರ ಪೊಲೀಸರಿಂದ ನೋಟಿಸ್
ಮುಂಗಡ ಹಣ ಕೊಟ್ಟು ಒಪ್ಪಂದ ಆಗಿದ್ದರೂ ಬಿಲ್ಡರ್ ನೀರಲಗಿ ಅಪಾರ್ಟ್‌ಮೆಂಟ್‌ನಲ್ಲಿ ಮನೆ ನಿರ್ಮಿಸಿ ಕೊಡದೆ ಹಾಗೂ ಖರೀದಿ ಪತ್ರ ಸಹ ನೀಡದೇ ಸೇವಾ ನ್ಯೂನತೆ ಎಸಗಿದ್ದರು. ಬಿಲ್ಡರ್ ಮೇಲೆ ಕ್ರಮಕೈಗೊಳ್ಳುವಂತೆ ಫಿರ್ಯಾದಿದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಪ್ರಭಾರ ಅಧ್ಯಕ್ಷರಾದ ವಿಶಾಲಾಕ್ಷಿ ಬೋಳಶೆಟ್ಟಿಮತ್ತು ಸದಸ್ಯ ಪ್ರಭು ಹಿರೇಮಠ ದೂರುದಾರರಿಂದ ಮುಂಗಡವಾಗಿ ಪಡೆದ ಹಣವನ್ನು ಎನ್.ಎಸ್. ನೀರಲಗಿ ಅವರು . 3,07,500ಕ್ಕೆ ಶೇ. 8ರ ಬಡ್ಡಿ ಲೆಕ್ಕ ಹಾಕಿ ಹಾಗೂ ಮಾನಸಿಕ ತೊಂದರೆಗೆ ಪ್ರತಿಯೊಬ್ಬ ದೂರುದಾರರಿಗೆ . 25,000 ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚ . 10,000 ನೀಡುವಂತೆ ಆದೇಶಿಸಿದೆ.