ಬೆಂಗಳೂರು[ಜ.26]: ರಾಜ್ಯದಲ್ಲಿ ಮೈತ್ರಿ ಪಕ್ಷ ಜೆಡಿಎಸ್ ಜೊತೆಗಿನ ಸೀಟು ಹಂಚಿಕೆ ಇನ್ನೂ ಅಖೈರುಗೊಂಡಿಲ್ಲ ದಿದ್ದರೂ ಲೋಕಸಭಾ ಚುನಾವಣಾ ತಯಾರಿ ಆರಂಭಿಸಿರುವ ಕಾಂಗ್ರೆಸ್, ಚುನಾವಣೆಗಾಗಿ ಐದು ಸಮಿತಿಗಳನ್ನು ರಚಿಸಿದೆ.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ 28 ಸದಸ್ಯರ ಸಮನ್ವಯ ಸಮಿತಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಂದಾಳತ್ವದ ಚುನಾವಣಾ ಸಮಿತಿ, ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ನೇತೃತ್ವದ 26 ಸದಸ್ಯರನ್ನೊಳಗೊಂಡ ಪ್ರಚಾರ ಸಮಿತಿ, 11 ಸದಸ್ಯರ ಮಾಧ್ಯಮ ಸಮನ್ವಯ ಸಮಿತಿ, ಐವರು ಸದಸ್ಯರನ್ನು ಒಳಗೊಂಡ ಚುನಾವಣಾ ಸಮನ್ವಯ ಸಮಿತಿಯನ್ನು ಎಐಸಿಸಿಯು ಘೋಷಿಸಿದೆ

ಸಮನ್ವಯ ಸಮಿತಿಯಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವ ಡಿ.ಕೆ.ಶಿವ ಕುಮಾರ್, ಸಚಿವರಾದ ಎಂ.ಬಿ. ಪಾಟೀಲ್, ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಈಶ್ವರ ಖಂಡ್ರೆ, ಎಸ್.ಆರ್. ಪಾಟೀಲ್, ವಿ.ಎಸ್. ಉಗ್ರಪ್ಪ, ಕಾಗೋಡು ತಿಮ್ಮಪ್ಪ, ಜಯಚಂದ್ರ, ರಮಾ ನಾಥ ರೈ, ವಿ.ಮುನಿಯಪ್ಪ, ಚೆಲುವರಾಯಸ್ವಾಮಿ, ರೋಷನ್ ಬೇಗ್, ಮೋಟಮ್ಮ, ಸಿ.ಎಂ.ಇಬ್ರಾಹಿಂ, ಅಂಜಲಿ ನಿಂಬಾಳ್ಕರ್, ವಿನಯ್ ಕುಮಾರ್ ಸೊರಕೆ, ನರೇಂದ್ರ ಸ್ವಾಮಿ, ಬಲ್ಕೀಷ್ ಭಾನು, ತನ್ವೀರ್ ಸೇಠ್, ಕೆ.ಬಿ. ಕೋಳಿವಾಡ, ಶರಣ ಪ್ರಕಾಶ್ ಪಾಟೀಲ್ ಮುಂತಾ ದವರಿದ್ದಾರೆ

ಚುನಾವಣಾ ಸಮಿತಿಯಲ್ಲಿ ಗುಂಡೂರಾವ್ ಜೊತೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಎಚ್.ಕೆ.ಪಾಟೀಲ, ಡಾ.ಜಿ. ಪರಮೇಶ್ವರ್, ಡಿ.ಕೆ.ಶಿವಕುಮಾರ್, ಈಶ್ವರ ಖಂಡ್ರೆ, ವೀರಪ್ಪ ಮೊಯ್ಲಿ, ಬಿ.ಕೆ.ಹರಿಪ್ರಸಾದ್, ದೇಶಪಾಂಡೆ, ಆಸ್ಕರ್ ಫರ್ನಾಂಡೀಸ್, ಕೆ.ಎಚ್.ಮುನಿಯಪ್ಪ, ಸತೀಶ್ ಜಾರಕಿಹೊಳಿ, ರೆಹಮಾನ್ ಖಾನ್, ಅಮರೇಗೌಡ ಬಯ್ಯಾಪುರ, ಬಿ.ಎಲ್. ಶಂಕರ್, ಶಾಮನೂರು ಶಿವಶಂಕರಪ್ಪ, ರಾಮಲಿಂಗಾ ರೆಡ್ಡಿ, ಎನ್.ಎಸ್.ಬೋಸರಾಜು, ಸಲೀಂ ಅಹ್ಮದ್, ಉಮಾಶ್ರೀ, ಜಲಜಾ ನಾಯ್ಕ್ ಸೇರಿದಂತೆ ರಾಜ್ಯದ ಎಲ್ಲ ಎಐಸಿಸಿ ಕಾರ್ಯದರ್ಶಿಗಳು ಮತ್ತು ಮುಂಚೂಣಿ ದಳಗಳ ಅಧ್ಯಕ್ಷರು ಇರಲಿದ್ದಾರೆ.

ಸಿ.ಎಂ. ಇಬ್ರಾಹಿಂ ನೇತೃತ್ವದ ಪ್ರಚಾರ ಸಮಿತಿಯಲ್ಲಿ ಯು.ಟಿ.ಖಾದರ್, ಪ್ರಿಯಾಂಕ್ ಖರ್ಗೆ, ಎಂ.ಟಿ.ಬಿ. ನಾಗರಾಜ್, ಶಿವಶಂಕರ್ ರೆಡ್ಡಿ, ಶಿವಾನಂದ ಪಾಟೀಲ್, ಐ.ಜಿ. ಸನದಿ, ಜಿ.ಸಿ. ಚಂದ್ರಶೇಖರ್, ಐವನ್ ಡಿ’ಸೋಜಾ, ವಿ.ಆರ್.ಸುದರ್ಶನ್, ಬಿ.ಕೆ. ಚಂದ್ರಶೇಖರ್ ಮತ್ತಿತರರಿದ್ದಾರೆ.