ಮುಡಾ ಹಗರಣ: ಸಿಎಂ ಸಿದ್ದರಾಮಯ್ಯಗೆ ಸಂಕಷ್ಟದ ಮೇಲೆ ಸಂಕಷ್ಟ, ಎರಡೆರಡು ಕಡೆ ತನಿಖೆ!
ಈಗಿನ ರಾಯಚೂರು ಸಂಸದ ಜಿ. ಕುಮಾರನಾಯ್ಕ ಅವರು ಅಂದು ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದರು. ಕೆಸರೆಯ ವಿವಾದಿತ ಜಮೀನು ಭೂ ಪರಿವರ್ತನೆ ಮಾಡಿದ ವೇಳೆ ಜಿ.ಕುಮಾರನಾಯ್ಕ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಸುಮಾರು ಮೂರು ತಾಸು ಮೈಸೂರು ಲೋಕಾಯುಕ್ತದಲ್ಲಿ ಜಿ. ಕುಮಾರನಾಯ್ಕ ಅವರ ವಿಚಾರಣೆ ನಡೆದಿದೆ.
ಮೈಸೂರು(ಅ.19): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟದ ಮೇಲೆ ಸಂಕಷ್ಟಗಳು ಎದುರಾಗುತ್ತಿವೆ. ಹೌದು, ಏಕಕಾಲಕ್ಕೆ ಎರಡೆರಡು ಕಡೆ ವಿಚಾರಣೆ ತೀವ್ರಗೊಂಡಿದೆ. ಲೋಕಾಯುಕ್ತದಲ್ಲೂ ಮುಡಾ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಇಂದು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದ ಜಿ. ಕುಮಾರನಾಯ್ಕ ಅವರ ವಿಚಾರಣೆ ನಡೆದಿದೆ. ಮುಡಾದಲ್ಲಿ 50:50 ಅನುಪಾತದಡಿ ನಿವೇಶನ ಹಂಚಿಕೆ ಮಾಡುವಾಗ ನಡೆದ ಹಗರಣ ಇದಾಗಿದೆ. ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಅವರು ತನಿಖೆಯನ್ನ ಮುಂದುವರಿಸಿದ್ದಾರೆ.
ಸಿದ್ದರಾಮಯ್ಯ ಬುಡಕ್ಕೆ ಮತ್ತೊಂದು ಬಾಂಬ್ ಎಸೆದ ಕುಮಾರಸ್ವಾಮಿ; HDK ಹೇಳಿದ ಸಾಕಮ್ಮನ ಆ ಸ್ಟೋರಿಯೇನು?
ಈಗಿನ ರಾಯಚೂರು ಸಂಸದ ಜಿ. ಕುಮಾರನಾಯ್ಕ ಅವರು ಅಂದು ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದರು. ಕೆಸರೆಯ ವಿವಾದಿತ ಜಮೀನು ಭೂ ಪರಿವರ್ತನೆ ಮಾಡಿದ ವೇಳೆ ಜಿ.ಕುಮಾರನಾಯ್ಕ ಮೈಸೂರು ಜಿಲ್ಲಾಧಿಕಾರಿಯಾಗಿದ್ದರು. ಸುಮಾರು ಮೂರು ತಾಸು ಮೈಸೂರು ಲೋಕಾಯುಕ್ತದಲ್ಲಿ ಜಿ. ಕುಮಾರನಾಯ್ಕ ಅವರ ವಿಚಾರಣೆ ನಡೆದಿದೆ.
ಮತ್ತೊಂದೆಡೆ ಇಡಿ ಅಧಿಕಾರಿಗಳಿಂದಲೂ ತನಿಖೆ ತೀವ್ರಗೊಂಡಿದೆ. ಕುಮಾರನಾಯ್ಕ ಅವರು 2005ರಲ್ಲಿ ಕೃಷಿ ಭೂಮಿಯಿಂದ ವಸತಿ ಭೂಮಿಗೆ ಭೂ ಪತಿವರ್ತನೆ ಮಾಡಿಕೊಟ್ಟಿದ್ದರು. ಖುದ್ದು ಸ್ಥಳ ಪರಿಶೀಲನೆ ಮಾಡಿ ಪರಿವರ್ತನೆ. ಮಾಡಿಕೊಟ್ಟಿರುವುದಾಗಿ ಕುಮಾರನಾಯ್ಕ ಟಿಪ್ಪಣಿ ಬರೆದಿದ್ದರು. ಕೆಸರೆ ಗ್ರಾಮದ ಸರ್ವೇ ನಂ 464ರ 3 ಎಕರೆ 16 ಗುಂಟೆ ಜಮೀನನ್ನು 2002ರಲ್ಲೇ ಮುಡಾ ನಿವೇಶನ ಮಾಡಿ ಹಂಚಿಕೆ ಮಾಡಲಾಗಿತ್ತು. ಒಟ್ಟು 19 ಜನರಿಗೆ ಮುಡಾ ಇಲ್ಲಿ ನಿವೇಶನ ನೀಡಿದೆ. ಅಂದಿನ ಮೈಸೂರು ಡಿಸಿ ಕುಮಾರನಾಯ್ಕ ಬಡಾವಣೆಯಾಗಿದ್ದ ಜಾಗವನ್ನು ಕೃಷಿ ಭೂಮಿ ಅಂತ ಮತ್ತೆ ಭೂಪರಿವರ್ತನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕುಮಾರನಾಯ್ಕ ಅವರ ವಿಚಾರಣೆ ನಡೆದಿದೆ.