ಮುಡಾ ಹಗರಣ: ಆಡಿಯೋ ಸೇರಿ ಒಟ್ಟು ಸಾವಿರ ಪುಟದ ದಾಖಲೆ ತನಿಖೆ ವರದಿಯಲ್ಲೇನಿದೆ?, ಭಾರೀ ಕುತೂಹಲ

ಮುಡಾ ಹಗರಣ ಸಂಬಂಧ ವರದಿ ಸಲ್ಲಿಸಲು ನ್ಯಾಯಾಲಯ ಜ.27ರ ಗಡುವು ನೀಡಿದೆ. ಜ.27ಕ್ಕೆ ಒಂದು ದಿನ ಮುಂಚಿತವಾಗಿ ವರದಿ ಸಲ್ಲಿಸಲು ಸೂಚಿಸಿದೆ. ಜ.26 ಭಾನುವಾರವಿದ್ದು, ಲೋಕಾಯುಕ್ತ ಅಧಿಕಾರಿಗಳು ಜ.25 ರಂದೇನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದು, ಜ.27ರಂದು ವಿಚಾರಣೆ ನಡೆಯಲಿದೆ. 

Lokayukta to be Submit  Report to the Court on CM Siddaramaiah's Muda Scam Case

ಮೈಸೂರು(ಜ.25):  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಇತರರ ವಿರುದ್ದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು, ಶನಿವಾರವೇ (ಜ.25 ರಂದು) ನ್ಯಾಯಾಲಯಕ್ಕೆ ವರದಿ ಸಲ್ಲಿಸಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇದು ಅಂತಿಮ ವರದಿಯಲ್ಲ, ಈವರೆಗಿನ ತನಿಖಾ ಪ್ರಗತಿ ವರದಿಯಷ್ಟೇ. ಇನ್ನೂ ತನಿಖೆ ಪೂರ್ಣ ಮುಗಿಯದ ಕಾರಣ ಅಂತಿಮ ವರದಿಗೆ ಮತ್ತಷ್ಟು ಕಾಲಾವಕಾಶ ಕೋರಲು ಅಧಿಕಾರಿಗಳು ಮುಂದಾಗಿದ್ದಾರೆ.

ಮುಡಾ ಹಗರಣ ಸಂಬಂಧ ವರದಿ ಸಲ್ಲಿಸಲು ನ್ಯಾಯಾಲಯ ಜ.27ರ ಗಡುವು ನೀಡಿದೆ. ಜ.27ಕ್ಕೆ ಒಂದು ದಿನ ಮುಂಚಿತವಾಗಿ ವರದಿ ಸಲ್ಲಿಸಲು ಸೂಚಿಸಿದೆ. ಜ.26 ಭಾನುವಾರವಿದ್ದು, ಲೋಕಾಯುಕ್ತ ಅಧಿಕಾರಿಗಳು ಜ.25 ರಂದೇನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದು, ಜ.27ರಂದು ವಿಚಾರಣೆ ನಡೆಯಲಿದೆ. 

ಮುಡಾ ಕೇಸ್: ಲೋಕಾ ಕ್ಲೀನ್‌ ಚಿಟ್‌ ನೀಡಿದ್ರೂ ಸಿಬಿಐನಲ್ಲಿ ನಡೆಯುತ್ತಿದೆ ಕೇಸ್‌, ಜಿಗಜಿಣಗಿ

ಸಾವಿರಕ್ಕೂ ಹೆಚ್ಚಿನ ಪುಟಗಳ ವರದಿ: 

ಈವರೆಗಿನ ತನಿಖಾ ಪ್ರಗತಿಯ 1 ಸಾವಿರಕ್ಕೂ ಹೆಚ್ಚು ಪುಟಗಳ ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಇದರಲ್ಲಿ ಮಹತ್ವದ ದಾಖಲೆಗಳು ಅಡಗಿವೆ. ಈ ವರದಿಯಲ್ಲಿ 25ಕ್ಕೂ ಹೆಚ್ಚು ಮಂದಿಯ ಹೇಳಿಕೆಗಳು, 17ಎ ಅಡಿಯಲ್ಲಿ ಸಂಗ್ರಹಿಸಿರುವ ವರದಿ, ಆಡಿಯೋ, ವಿಡಿಯೋ, ಎಫ್‌ಎಸ್‌ಎಲ್ ವರದಿಗಳು, ದಾಖಲೆಗಳ ಸಂಗ್ರಹದ ಹಾರ್ಡ್ ಡಿಸ್ಕ್, ಸಿಡಿ, ಪೆನ್ ಡ್ರೈವ್ ಗಳು, ವಿಜಯನಗರದ 14 ಸೈಟ್ ಗಳು, ಕೆಸರೆಯ ಸರ್ವೇ ನಂ.464ರ 3.16 ಎಕರೆ ಭೂಮಿಯ ಮಾಹಿತಿ, ಆರ್‌ಟಿಸಿ, ಭೂ ಪರಿವರ್ತನೆ, ಮೂಲ ಮಾಲೀಕರ ಬಳಿಯ ದಾಖಲೆಗಳು, ಕೈ ಬದಲಾವಣೆಯಾದ ದಾಖಲೆಗಳ ಸಂಗ್ರಹಗಳು ಇವೆ. 

ಅಲ್ಲದೆ, ಮುಡಾದಲ್ಲಿ ಯಾವ, ಯಾವ ಹಂತದಲ್ಲಿಪತ್ರ ವ್ಯವಹಾರನಡೆದಿದೆ, ಯಾವ, ಯಾವ ಅಧಿಕಾರಿಗಳು ಸೈಟ್ ಹಂಚಿಕೆಗೆ ಸಹಿ ಹಾಕಿದ್ದರು, 1994ರಿಂದ 2024ರವರೆಗಿನ ಎಲ್ಲಾ ಮಾಹಿತಿಗಳ ಸಂಗ್ರಹ, ಹಿಂದಿನ ಆಯುಕ್ತರುಗಳು, ಅಧ್ಯಕ್ಷರು, ಎಂಜಿನಿಯರ್ ಗಳು, ನಗರ ಯೋಜನಾ ಅಧಿಕಾರಿಗಳು, ಸರ್ವೇ ಅಧಿಕಾರಿಗಳು, ತಹಸೀಲ್ದಾರ್‌ಗಳು, ಸಭೆಯಲ್ಲಿ ಪಾಲ್ಗೊಂಡಿದ್ದ ಹಲವು ಶಾಸಕರು, ವಿಧಾನಪರಿಷತ್ ಸದಸ್ಯರು, ಅಂದಿನ ಎಡಿಸಿ ಅವರ ಹೇಳಿಕೆಗಳು, ದೂರುದಾರ ಸ್ನೇಹಮಯಿ ಕೃಷ್ಣ ಅವರಿಂದ ಸಂಗ್ರಹಿಸಲಾದ ದಾಖಲೆಗಳು, ಆರೋಪಿತರಾದ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾರಾಟ ಮಾಡಿದ್ದ ದೇವರಾಜು ಹೇಳಿಕೆಗಳನ್ನು ಆಧರಿಸಿ ಸಿದ್ದ ಗೊಂಡಿರುವ ತನಿಖಾ ಪ್ರಗತಿ ವರದಿಯನ್ನು ಲೋಕಾಯುಕ್ತ ಕೋರ್ಟ್‌ಗೆ ಸಲ್ಲಿಸಲಿದ್ದಾರೆ. 

ಮುಡಾ ಹಗರಣ: ಇ.ಡಿ ವಿರುದ್ಧ ರಾಷ್ಟ್ರಪತಿಗಳಿಗೆ ದೂರು, ಎಂ.ಲಕ್ಷ್ಮಣ

ಲೋಕಾಯುಕ್ತ ಎಸ್ಪಿ ಬೆಂಗಳೂರಿಗೆ: 

ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಶುಕ್ರವಾರವೇ ಬೆಂಗಳೂರಿಗೆ ತೆರಳಿದ್ದಾರೆ. ಬೆಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಡಿಜಿ ಅವರನ್ನು ಭೇಟಿಯಾಗಿ ವರದಿ ನೀಡಿದ್ದು, ಶನಿವಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಸಿದ್ಧತೆ ಕೈಗೊಂಡಿದ್ದಾರೆ.

ಸಿಎಂ, ಪತ್ನಿಗೆ ಕ್ಲೀನ್‌ಚಿಟ್ ವದಂತಿ 

ಮುಡಾ ಹಗರಣದಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬ ವದಂತಿ ಸಹ ಹಬ್ಬಿದೆ. ಆದರೆ, ಲೋಕಾಯುಕ್ತ ಪೊಲೀಸರು ರಾಜ್ಯ ಹೈಕೋರ್ಟ್‌ ಗೆ ಸಲ್ಲಿಸಲಿರುವ ವರದಿಯಲ್ಲಿ ತಮಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂಬ ಬಗ್ಗೆ ತಮಗೇನು ಗೊತ್ತಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 
ಈ ಮಧ್ಯೆ, ಲೋಕಾಯುಕ್ತ ಪೊಲೀಸರು ಕ್ಲೀನ್ ಚಿಟ್ ನೀಡುವ ಮೂಲಕ ಮುಡಾ ಹಗರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದ್ದು, ಈ ಬಗ್ಗೆ ಮತ್ತೆ ಹೋರಾಟ ನಡೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios