ಅಕ್ರಮ ಆಸ್ತಿ ಗಳಿಕೆ ಪ್ರಕರಣ: ತಹಸೀಲ್ದಾರ್ ಅಜಿತ್ ರೈಗೆ ಬೇಲ್!
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದ ಕೆ.ಆರ್.ಪುರ ತಹಶೀಲ್ದಾರ್ ಅಜಿತ್‌ಕುಮಾರ್ ರೈಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರು (ಆ.15) : ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಮೇರೆಗೆ ಬಂಧನಕ್ಕೊಳಗಾಗಿದ್ದ ಕೆ.ಆರ್.ಪುರ ತಹಶೀಲ್ದಾರ್ ಅಜಿತ್‌ಕುಮಾರ್ ರೈ(Ajit kumar rai)ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಲಯ ಸೋಮವಾರ ಷರತ್ತು ಬದ್ಧ ಜಾಮೀನು ನೀಡಿದೆ. ಅಜಿತ್‌ಕುಮಾರ್ ಪರ ಹಿರಿಯ ವಕೀಲ ಶ್ಯಾಮ್‌ಸುಂದರ್ ವಾದ ಮಂಡಿಸಿದರು. 5 ಲಕ್ಷ ರು. ಮೊತ್ತದ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು, ತನಿಖಾಧಿಕಾರಿಗೆ ವಿಚಾರಣೆ ವೇಳೆ ಸಹಕರಿಸಬೇಕು, ಸಾಕ್ಷ್ಯ ನಾಶ ಮಾಡದಿರುವುದು ಸೇರಿದಂತೆ ಇತರೆ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಲಾಗಿದೆ.
Bengaluru: ಭ್ರಷ್ಟ ಅಧಿಕಾರಿ ಅಜಿತ್ ರೈ ಮನೆಯಲ್ಲಿ ಸಿಕ್ಕಿದ್ದೇನು? ನಗ, ನಾಣ್ಯ, ಲಕ್ಸುರಿ ವಸ್ತುಗಳು ನೋಡಿ..
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಜೂ.28ರಂದು ಅಜಿತ್‌ಕುಮಾರ್ ರೈ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಆರೋಪಿಗೆ ಸೇರಿದ 11 ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಂಡಾಗ ನಿವಾಸದಲ್ಲಿ .500 ಮುಖಬೆಲೆಯ .40 ಲಕ್ಷ ನಗದು ಸೇರಿ .1.90 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು.
ಭ್ರಷ್ಟ ಅಧಿಕಾರಿ: ಕರ್ನಾಟಕದ ಮೊದಲ ಫಾರ್ಮುಲಾ 1 ಟ್ರ್ಯಾಕ್ ನಿರ್ಮಿಸ ಹೊರಟಿದ್ದ ಬಂಧಿತ ತಹಶೀಲ್ದಾರ್..!
ಬೇನಾಮಿ ಹೆಸರಲ್ಲಿ ಆಸ್ತಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜೂ.29ರಂದು ಲೋಕಾಯುಕ್ತ ಪೊಲೀಸರು(Lokayukta police) ಬಂಧಿಸಿದ್ದರು. ಅಜಿತ್ ಕುಮಾರ್ ರೈ ಬಳಿ ಐಷಾರಾಮಿ ಕಾರುಗಳು ಇದ್ದು, ಎರಡೂವರೆ ಕೋಟಿ ರು. ಮೌಲ್ಯದ ಲ್ಯಾಂಡ್‌ಕ್ರೂಷರ್, ನಾಲ್ಕು ಫಾರ್ಚೂನರ್ ಮತ್ತು ನಾಲ್ಕು ಥಾರ್ ವಾಹನಗಳು ಪತ್ತೆಯಾಗಿದ್ದವು.