ಹಿಂದೆಂದಿಗಿಂತ ಹೆಚ್ಚು ಅಂತರದಲ್ಲಿ ಬ್ರಿಜೇಶ್ ಚೌಟರನ್ನು ಗೆಲ್ಲಿಸಿಕೊಂಡು ಬರುತ್ತೇವೆ: ನಳೀನ್ ಕುಮಾರ ಕಟೀಲ್

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಹಿಂದೆಂದಿಗಿಂತಲೂ ಅತೀ ಹೆಚ್ಚು ಅಂತರದಲ್ಲಿ ಬ್ರಿಜೇಶ್ ಚೌಟರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು.

Lok sabja election 2024 BJP will come to power this time too says Nalin kumar at mangaluru rav

ಮಂಗಳೂರು (ಮಾ.17): ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಹಿಂದೆಂದಿಗಿಂತಲೂ ಅತೀ ಹೆಚ್ಚು ಅಂತರದಲ್ಲಿ ಬ್ರಿಜೇಶ್ ಚೌಟರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು.

ಇಂದು ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಸಂಸದ ಕಟೀಲ್, ಒಂದೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಹತ್ತಕ್ಕೂ ಹೆಚ್ಚು ಸಮರ್ಥ ನಾಯಕರಿದ್ದಾರೆ. ಜಿಲ್ಲೆಯಲ್ಲಿ ಒಂದು ರಾಜಕೀಯ ಪಕ್ಷಗಳಲ್ಲಿರೋ ಸಮಸ್ಯೆ ಇದೆ. ನಮ್ಮಲ್ಲಿ ನಾಯಕತ್ವದ ಗೊಂದಲ ಇದೆ. ಆದರೆ ಭಾರತ ಮಾತೆಗಾಗಿ, ನರೇಂದ್ರ ಮೋದಿಯವರಿಗೆ ಇವೆಲ್ಲ ಗೊಂದಲವನ್ನು ಬದಿಗಿಟ್ಟು ಕೆಲಸ ಮಾಡುತ್ತಾರೆ. ಪುತ್ರನಿಗೆ ಟಿಕೆಟ್ ಸಿಗದ ವಿಚಾರವಾಗಿ ಹಿರಿಯ ನಾಯಕ ಈಶ್ವರಪ್ಪ ಮುನಿಸಿಕೊಂಡಿದ್ದಾರೆ. ಈಶ್ವರಪ್ಪ ಜೊತೆ ನಾಯಕರು ಮಾತುಕತೆ ನಡೆಸಿ ಅದೆಲ್ಲಾ ಬಗೆಹರಿಸುತ್ತಾರೆ ಎಂದರು.

ಎಚ್‌ಡಿ ಕುಮಾರಸ್ವಾಮಿಗೆ ಮಾ.21ಕ್ಕೆ ಶಸ್ತ್ರಚಿಕಿತ್ಸೆ: ಚನ್ನಪಟ್ಟಣ ಬಿಜೆಪಿ-ಜೆಡಿಎಸ್ ಸಮ್ಮಿಲನ ಸಮಾವೇಶ ದಿಢೀರ್ ರದ್ದು!

ನನಗೆ ಕೇರಳದ ಚುನಾವಣೆ ಕೂಡ ನೋಡಿಕೊಳ್ಳಿ ಅಂತಾ ವರಿಷ್ಠರು ಹೇಳಿದ್ದಾರೆ. ಆದರೆ ನಾನು ನನ್ನ ಕ್ಷೇತ್ರಕ್ಕೆ ಹೆಚ್ಚು ಸಮಯ ನೀಡುತ್ತೇನೆ ಎಂದರು.

ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ಬರುತ್ತೆ ಈಗಿನಿಂದಲೇ ತಯಾರಾಗಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಲೋಕಸಭೆ ಚುನಾವಣೆ ಮುಗಿದ ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲ್ಲುತ್ತದೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗುತ್ತಾರೆ ಈ ಬಗ್ಗೆ ನಮಗೆ ಅತ್ಯಂತ ಸ್ಪಷ್ಟ ವಿಶ್ವಾಸವಿದೆ ಎಂದರು.

ಸಂವಿಧಾನ ಉಳಿಸಲು ಕೋಮುವಾದಿ ಬಿಜೆಪಿಯನ್ನ ಸೋಲಿಸಿ: ಮುಖ್ಯಮಂತ್ರಿ ಚಂದ್ರು ಕರೆ

Latest Videos
Follow Us:
Download App:
  • android
  • ios