ಎಚ್‌ಡಿ ಕುಮಾರಸ್ವಾಮಿಗೆ ಮಾ.21ಕ್ಕೆ ಶಸ್ತ್ರಚಿಕಿತ್ಸೆ: ಚನ್ನಪಟ್ಟಣ ಬಿಜೆಪಿ-ಜೆಡಿಎಸ್ ಸಮ್ಮಿಲನ ಸಮಾವೇಶ ದಿಢೀರ್ ರದ್ದು!
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಮಾ.21 ರಂದು ಹೃದಯ ಶಸ್ತ್ರಚಿಕಿತ್ಸೆ ನಡೆಯಲಿರುವ ಹಿನ್ನೆಲೆ ಚನ್ನಪಟ್ಟಣದಲ್ಲಿ ನಡೆಯಬೇಕಿದ್ದ ಬಿಜೆಪಿ-ಜೆಡಿಎಸ್ ಸಮ್ಮಿಲನ ಸಮಾವೇಶ ರದ್ದುಪಡಿಸಲಾಗಿದೆ.
ಚನ್ನಪಟ್ಟಣ (ಮಾ.17): ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಗೆ ಮಾ.21 ರಂದು ಹೃದಯ ಶಸ್ತ್ರಚಿಕಿತ್ಸೆ ನಡೆಯಲಿರುವ ಹಿನ್ನೆಲೆ ಚನ್ನಪಟ್ಟಣದಲ್ಲಿ ನಡೆಯಬೇಕಿದ್ದ ಬಿಜೆಪಿ-ಜೆಡಿಎಸ್ ಸಮ್ಮಿಲನ ಸಮಾವೇಶ ರದ್ದುಪಡಿಸಲಾಗಿದೆ.
ಪಟ್ಟಣದ ಬಾಲಕರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಮಾವೇಶ. ಇಂದು ಸುದ್ದಿಗೋಷ್ಠಿ ನಡೆಸಿ ಸಮಾವೇಶದ ಬಗ್ಗೆ ಮಾಹಿತಿ ನೀಡಿದ ಸಿಪಿವೈ ಹಾಗೂ ಮಾಜಿ ಶಾಸಕ ಎ.ಮಂಜುನಾಥ್. ಸಂಜೆ ದಿಢೀರ್ ಸಮಾವೇಶದ ರದ್ದುಗೊಳಿರೋ ಬಗ್ಗೆ ಜೆಡಿಎಸ್ ತಾಲೂಕು ಘಟಕ ಮಾಹಿತಿ.
ಬಿಜೆಪಿ- ಜೆಡಿಎಸ್ ಸೀಟು ಹಂಚಿಕೆ: ಅಮಿತ್ ಶಾ, ಕುಮಾರಸ್ವಾಮಿ ಚರ್ಚೆ
ಮಂಗಳವಾರ ಆಸ್ಪತ್ರೆಗೆ ದಾಖಲಾಗಲು ಹೆಚ್ಡಿಕೆಗೆ ವೈದ್ಯರ ಸೂಚನೆ. ಹಾಗಾಗಿ ಮಾ.19 ಮಂಗಳವಾರ ನಡೆಯಬೇಕಿದ್ದ ಸಮ್ಮಿಲಸ ಸಮಾವೇಶ ರದ್ದು. ಎಚ್‌ಡಿಕೆ ಚೆನ್ನೈನಲ್ಲಿ ಹೃದಯ ಶಸ್ತ್ರಚಿಕಿತ್ಸೆ ಹಿನ್ನೆಲೆ ಸಮಾವೇಶ ಮುಂದೂಡಿದ ಜೆಡಿಎಸ್-ಬಿಜೆಪಿ ನಾಯಕರು. ಮುಂದಿನ ದಿನಗಳಲ್ಲಿ ಸಮಾವೇಶದ ದಿನಾಂಕ ತಿಳಿಸುವುದಾಗಿ ಹೇಳಿದ ಸ್ಥಳೀಯ ಮುಖಂಡರು.
ಮೂರನೇ ಸಲ ಹಾರ್ಟ್ ಆಪರೇಷನ್:
ಎಚ್‌ಡಿ ಕುಮಾರಸ್ವಾಮಿಯವರು ಈ ಹಿಂದೆ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಮೂರನೇ ಬಾರಿ ಚನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಆಗಲಿದೆ. ದೆಹಲಿ ಪ್ರವಾಸದ ಬಳಿಕ ಮಾ.19ರಂದು ಆಸ್ಪತ್ರೆಗೆ ಅಡ್ಮಿಟ್ ಆಗಲಿದ್ದಾರೆ. ಮಾ.21ರಂದು ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ. ಡಿಸ್ಚಾರ್ಜ್ ಬಳಿಕ ಒಂದು ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಲಿರುವ ಕುಮಾರಸ್ವಾಮಿ. ಯಾವುದೇ ಸಭೆ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗೊಲ್ಲ.
ಎಚ್‌ಡಿ ಕುಮಾರಸ್ವಾಮಿಯವರಿಗೆ ಹಿಂದಿನಿಂದ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಇತ್ತೀಚೆಗಷ್ಟೇ ಅವರು ಲಘು ಪಾರ್ಶ್ವವಾಯು ಸಮಸ್ಯೆಗೆ ಒಳಗಾಗಿದ್ದರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅಲ್ಲದೇ ಈಗಾಗಲೇ ಅವರಿಗೆ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಇದೀಗ ಮೂರನೇ ಬಾರಿ ಚನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಡೆಯಲಿದೆ. ಲೋಕಸಭಾ ಚುನಾವಣಾ ಹೊತ್ತಲ್ಲಿ ಅವರ ಆರೋಗ್ಯ ಸಮಸ್ಯೆಯಿಂದ ಕಾರ್ಯಕರ್ತರಿಗೆ ಬೇಸರ ಮೂಡಿಸಿರುವುದಂತೂ ನಿಜ. ಅವರಿಲ್ಲ ಚುನಾವಣೆಯೂ ಸಹ ಸಪ್ಪೆ ಎನಿಸುತ್ತದೆ. ಕುಮಾರಸ್ವಾಮಿ ಚುನಾವಣೆ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ ಅದಕ್ಕೊಂದು ಕಳೆ ಇರುತ್ತದೆ ಏನೇ ಆಗಲಿ ಶೀಘ್ರ ಗುಣಮುಖರಾಗಿ ಲವಲವಿಕೆಯಿಂದ ಓಡಾಡುವಂತಾಗಲಿ.
ಕುಮಾರಣ್ಣ ನೀವು ಅರ್ಜಿ ಹಾಕಿ ಸಾಕು, ನಾವು ಗೆಲ್ಲಿಸಿಕೊಂಡು ಬರುತ್ತೇವೆ: ಸಿ.ಎಸ್.ಪುಟ್ಟರಾಜು
ಇತ್ತೀಚೆಗೆ ಅವರು ಲಘು ಪಾಶ್ರ್ವವಾಯು ಸಮಸ್ಯೆಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದರು. ಈಗಾಗಲೇ ಅವರು ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.ಈ ಸಂಬಂಧ ಹಾಸನದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿರುವ ಕುಮಾರಸ್ವಾಮಿಯವರು, ಜನರ ಕೆಲಸದ ವಿಚಾರದಲ್ಲಿ ನಾನು ನನ್ನ ಆರೋಗ್ಯವನ್ನೂ ಲೆಕ್ಕಿಸುತ್ತಿಲ್ಲ. ಎಷ್ಟೇ ಆರೋಗ್ಯ ಸಮಸ್ಯೆ ಇದ್ದರೂ ನಾನು ರಾಜ್ಯಕ್ಕಾಗಿ ದುಡಿಯುತ್ತಿದ್ದೇನೆ.