ಲೋಕಸಭಾ ಚುನಾವಣೆ ರಣತಂತ್ರ; ನಾಳೆ ಸಚಿವ ಸಂತೋಷ್ ಲಾಡ್ ದೆಹಲಿಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆ.2ರಂದು ಸಭೆ ಕರೆದಿದ್ದಾರೆ. ಅದರಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಸಂಘಟನೆ, ಲೋಕಸಭೆ ಚುನಾವಣೆ, ಪಾಲಿಸಿ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ಅದಕ್ಕಾಗಿ ಈ ಸಭೆಯನ್ನು ಕರೆಯಲಾಗಿದೆ ಎಂದರು.
ಹುಬ್ಬಳ್ಳಿ (ಆ.1) : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆ.2ರಂದು ಸಭೆ ಕರೆದಿದ್ದಾರೆ. ಅದರಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಸಂಘಟನೆ, ಲೋಕಸಭೆ ಚುನಾವಣೆ, ಪಾಲಿಸಿ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ಅದಕ್ಕಾಗಿ ಈ ಸಭೆಯನ್ನು ಕರೆಯಲಾಗಿದೆ ಎಂದರು.
ಅಸಮಾಧಾನಿತ ಶಾಸಕರ ಬಗ್ಗೆ ಅಲ್ಲಿ ಏನಾದರೂ ಚರ್ಚೆಯಾಗುತ್ತದೆಯೇ ಎಂಬ ಪ್ರಶ್ನಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಎಲ್ಲೂ ಅಸಮಾಧಾನವಿಲ್ಲ ಎಂದಷ್ಟೇ ಹೇಳಿದರು.
ಅಸಮಾಧಾನಿತ ಶಾಸಕರು ನೀಡಿರುವ ಲೆಟರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿದು ಹಾಕಿದ್ದಾರಂತೆ ಎಂಬ ಪ್ರಶ್ನೆಗೆ, ಎಲ್ಲಿ ಹರಿದಿದ್ದಾರೆ. ನನಗೇನು ಆ ಬಗ್ಗೆ ಗೊತ್ತಿಲ್ಲ. ನಾನು ಆ ಸಭೆಯಲ್ಲಿದ್ದೆ. ಸಿದ್ದರಾಮಯ್ಯ ಯಾವ ಲೇಟರ್‌ನ್ನೂ ಹರಿದು ಹಾಕಿಲ್ಲ ಎಂದರು.
ಅಧಿಕಾರಿಗಳೇ ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ ಕೇಳಿ, ಸರಕಾರದ ನೆರವು ತಲುಪಿಸಿ: ಸಚಿವ ಸಂತೋಷ ಲಾಡ್ ಆದೇಶ
ಕಾರ್ಮಿಕ ಕಲ್ಯಾಣ ನಿಧಿಯಡಿ .13 ಸಾವಿರ ಕೋಟಿ ಇದೆ. ಅದರ ಬಳಕೆಗೆ ಹೊಸ ಹೊಸ ಕಾರ್ಯಕ್ರಮಗಳನ್ನು ಇನ್ನೊಂದು ತಿಂಗಳಲ್ಲಿ ಮಾಡಲಾಗುವುದು ಎಂದು ನುಡಿದರು. ಇನ್ನು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡುವ ಉದ್ದೇಶದಿಂದ ಪಾಲಿಸಿ ಮಾಡುತ್ತಿದ್ದೇವೆ. ಅದೇನಾದರೂ ಜಾರಿಯಾದರೆ ಆಟೋ ಚಾಲಕರು, ಗ್ಯಾರೇಜ್ ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದರು.