ರಾಜಕೀಯವಾಗಿ ನನಗೆ ಡಿಕೆಶಿ ವಿಷ ಹಾಕಿದ್ರು -ಎಚ್‌ಡಿಕೆ; ಯಾರಿಗೂ ವಿಷ ಹಾಕಿಲ್ಲ ಒಳ್ಳೇದು ಮಾಡಿದ್ದೇವೆ: ಡಿಕೆ ಸುರೇಶ್

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನನ್ನ ರಾಜಕೀಯ ಜೀವನ ಮುಗಿಸಲು ಯತ್ನಿಸಿದ್ದಲ್ಲದೇ ನಮ್ಮ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಅವರ ಜಾತ್ಯತೀತ ನಿಲುವಿಗೆ ಕೊಳ್ಳಿ ಇಟ್ಟರು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Lok sabha election 2024 DK brothers has poisoned me politically says HD Kumaraswamy at bengaluru rav

ಬೆಂಗಳೂರು (ಮಾ.20): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನನ್ನ ರಾಜಕೀಯ ಜೀವನ ಮುಗಿಸಲು ಯತ್ನಿಸಿದ್ದಲ್ಲದೇ ನಮ್ಮ ಪಕ್ಷದ ವರಿಷ್ಠರಾದ ಎಚ್‌.ಡಿ.ದೇವೇಗೌಡ ಅವರ ಜಾತ್ಯತೀತ ನಿಲುವಿಗೆ ಕೊಳ್ಳಿ ಇಟ್ಟರು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಮಂಗಳವಾರ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯವಾಗಿ ಶಿವಕುಮಾರ್‌ ನನಗೆ ವಿಷ ಹಾಕಿದ್ದಾರೆ. ರಾಜಕೀಯವಾಗಿ ಮುಗಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಈಗ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಅವರ ಅನುಕಂಪ ನನಗೆ ಬೇಕಾಗಿಲ್ಲ ಎಂದರು.

 

ಜೆಡಿಎಸ್‌ 2 ಸ್ಥಾನಕ್ಕೆ ಮೈತ್ರಿ ಮಾಡಿಕೊಳ್ಳಬೇಕಾ? ಬಿಜೆಪಿ ಮೈತ್ರಿ ಬಿಟ್ಟುಬಿಡಿ; ಸಿಎಂ ಇಬ್ರಾಹಿಂ ಪುತ್ರ ಫೈಜ್ ಮನವಿ!

ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ಸೇ ಕಾರಣ. ನಮ್ಮನ್ನು ಬಿಜೆಪಿ ಬಿ ಟೀಮ್ ಎಂದು ಕರೆದರು. ರಾಜ್ಯದ ಜನರು ಕಾಂಗ್ರೆಸ್‌ ಅನ್ನು ತಿರಸ್ಕರಿಸಿದಾಗ ನಮ್ಮ ಬಾಗಿಲಿಗೆ ಬಂದರು. ನಮ್ಮ ಜೊತೆ ಮೈತ್ರಿ ಮಾಡಿಕೊಂಡು ನಮ್ಮ ಪಕ್ಷವನ್ನು ನಾಶ ಮಾಡಲು ಹೋಗಿದ್ದರು. ನನ್ನ ಮುಗಿಸಲು ಹಂತ ಹಂತವಾಗಿ ಶಿವಕುಮಾರ್‌ ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಹೊರಗಡೆ ನಮ್ಮನ್ನು ಉಳಿಸುವ ರೀತಿ ನಾಟಕ ಮಾಡಿ, ಟ್ರಬಲ್ ಶೂಟರ್ ಎಂದು ದುಡ್ಡು ಕೊಟ್ಟು ಕರೆಸಿಕೊಂಡರು ಎಂದು ವಾಗ್ದಾಳಿ ನಡೆಸಿದರು.

ನಮ್ಮ ಪಕ್ಷವನ್ನು ನಿರ್ನಾಮ ಮಾಡಲು ಹೋಗಿದ್ದರು. ಈಗಲೂ ನಮ್ಮ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಸಹೋದರನ ಗೆಲುವು ಯಾರಿಂದ ಆಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು. ನಾವು ಇಲ್ಲ ಅಂದಿದ್ದರೆ ಅವರ ಸಹೋದರ ಸೋಲುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟ್ರಬಲ್ ಶೂಟರ್ ನಮಗಾಗಿ ತುಂಬಾ ಶ್ರಮ ಪಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ಪಕ್ಷದ ನಿಖಿಲ್ ಕುಮಾರಸ್ವಾಮಿ ಗೆಲುವಿಗೂ ಟ್ರಬಲ್‌ ಶೂಟರ್‌ ತುಂಬಾ ಶ್ರಮ ವಹಿಸಿದ್ದಾರೆ. ಕಾಂಗ್ರೆಸ್‌ - ಜೆಡಿಎಸ್‌ ನಡುವಿನ ಹೊಂದಾಣಿಕೆಗೆ ಮೂಲ ಕಾರಣ ಅವರೇ. ನಂತರ ನನ್ನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಯಾರಿಗೂ ವಿಷ ಹಾಕಿಲ್ಲ: ಡಿಕೆಸು

ಹಾರೋಹಳ್ಳಿ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಜಾತ್ಯತೀತ ತತ್ವಕ್ಕೆ ಕೊಳ್ಳಿ ಇಟ್ಟಿದ್ದಾರೆ, ರಾಜಕೀಯವಾಗಿ ನನಗೆ ವಿಷವಿಕ್ಕಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಂಸದ ಡಿ.ಕೆ.ಸುರೇಶ್‌ ತಿರುಗೇಟು ನೀಡಿದ್ದಾರೆ. ನಾನು ಯಾರಿಗೂ ವಿಷ ಹಾಕುವವನಲ್ಲ, ನಾನು ಎಲ್ಲರಿಗೂ ಒಳ್ಳೆಯದನ್ನು ಬಯಸುವವನು ಎಂದು ಹೇಳಿದ್ದಾರೆ.

 

ಕರ್ನಾಟಕದಿಂದ ಹೆಚ್ಚು ಸ್ಥಾನ ಗೆದ್ದು ಮೋದಿಗೆ ಗಿಫ್ಟ್ ಕೊಡುತ್ತೇವೆ: ನಿಖಿಲ್ ಕುಮಾರಸ್ವಾಮಿ

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿಯವರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲ ಎಂದು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಆದಷ್ಟು ಬೇಗ ಆಸ್ಪತ್ರೆಯಿಂದ ಗುಣಮುಖರಾಗಿ ಬರಲಿ ಎಂದು ದೇವರಲ್ಲಿ‌ ಪ್ರಾರ್ಥನೆ ಮಾಡುತ್ತೇನೆ. ಕ್ಷೇತ್ರದಲ್ಲಿ ಗಿಫ್ಟ್ ಹಂಚುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಕುಮಾರಸ್ವಾಮಿ ಏನೇನು ಹೇಳುತ್ತಾರೋ ಗೊತ್ತಿಲ್ಲ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ಯಾರಾ ಮಿಲಿಟರಿ ಕರೆಸಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುರೇಶ್, ಯಾರನ್ನು ಬೇಕಾದರು ಕರೆಸಿಕೊಳ್ಳಲಿ. ಪ್ಯಾರಾ ಮಿಲಿಟರಿಯನ್ನೇ ಕರೆಸಲಿ, ಪ್ರಧಾನಿ‌ ಮೋದಿಯನ್ನೇ ಕರೆಸಲಿ. ನಾನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ, ಕೂಲಿ ಕೇಳ್ತಿದ್ದೇನೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios