Asianet Suvarna News Asianet Suvarna News

ಪ್ರಧಾನಿ ಮೋದಿಗೆ 28 ಕ್ಷೇತ್ರ ಗೆಲ್ಲಿಸಿಕೊಡುವ ಭರವಸೆ ನೀಡಿದ ಬಿಎಸ್ ಯಡಿಯೂರಪ್ಪ!

ಶಿವಮೊಗ್ಗದ ಪ್ರಧಾನಿ ಮೋದಿ ಸಮಾವೇಶದಲ್ಲಿ ಬಿಎಸ್ ಯಡಿಯೂರಪ್ಪ ಭಾಷಣ ಮಾಡಿದ್ದಾರೆ. ಪ್ರಧಾನಿ ಮೋದಿ 28 ಕ್ಷೇತ್ರಗಳನ್ನೂ ಗೆಲ್ಲಿಸುವ ಭರವಸೆ ನೀಡಿದ್ದಾರೆ. ಯಡಿಯೂರಪ್ಪ ಭಾಷಣದ ವಿವರ ಇಲ್ಲಿದೆ. 

Lok sabha Election 2024 BS Yeddyurappa assured PM modi to win 28 constituency of Karnataka ckm
Author
First Published Mar 18, 2024, 3:52 PM IST

ಶಿವಮೊಗ್ಗ(ಮಾ.18) ಕರ್ನಾಟಕದಲ್ಲಿ ಪ್ರಧಾನಿ ಮೋದಿ ಚುನಾವಣಾ ರಣಕಹಳೆ ಮೊಳಗಿಸಿದ್ದಾರೆ. ಮೋದಿ ನೇತೃತ್ವದ ಸರ್ಕಾರ ಕೇವಲ ಚುನಾವಣೆಗೆ ಕೆಲಸ ಮಾಡುವ ಸರ್ಕಾರವಲ್ಲ, ದಿನದ 24 ಗಂಟೆ, ವರ್ಷದ 365 ದಿನಗಳ ಕಾಲ ಗಡಿಯನ್ನು ಸುರಕ್ಷಿತವಾಗಿಡಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿ ಅವರ ಖಾತೆಗೆ ಜಮೆ ಮಾಡುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರಿಗೆ 4 ಸಾವಿರ ರೂಪಾಯಿ ಸೇರಿಸಿದ್ದ. ಆದರೆ ಈಗಿನ ಸರ್ಕಾರ ರಾಜ್ಯ ನೀಡುವ 4,000 ರೂಪಾಯಿ  ಅನುದಾನ ಕಡಿತಗೊಳಿಸಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶ್ರೀರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ, ದೇಶವನ್ನು 5ನೇ ಆರ್ಥಿಶಕ್ತಿಯಾಗಿ ಮಾಡಿದ್ದಾರೆ. ಶೀಘ್ರದಲ್ಲೇ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಕಳೆದ ಬಾರಿ ಶಿವಮೊಗ್ಗಕ್ಕೆ ಬಂದಾಗ, ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಿದ್ದರು. ಇದರಿಂದ ಮಲೆನಾಡಿನ ಅಭಿವೃದ್ಧಿಯ ವೇಗ ಹೆಚ್ಚಾಗಿದೆ 

ಶಿವಮೊಗ್ಗದಲ್ಲಿ ಕುವೆಂಪು ಕವನ ಉಲ್ಲೇಖಿಸಿ ಕಾಂಗ್ರೆಸ್- ಇಂಡಿಯಾ ಒಕ್ಕೂಟಕ್ಕೆ ತಿರುಗೇಟು ನೀಡಿದ ಮೋದಿ!

ಮೋದಿ ತಮ್ಮ ಭಾಷಣವನ್ನು ಆನ್‌ಲೈನ್ ಮೂಲಕ ಕನ್ನಡ ಸೇರಿದಂತೆ ಇತರ ಭಾಷೆಗಳಿಗೆ ಅನುವಾದಿಸಿ ನೀಡುತ್ತಾರೆ. ಆರ್ಟಿಪೀಶಿಯಲ್ ಇಂಟಲಿಜೆನ್ಸ್ ಸಹಾಯದ ಮೂಲಕ ನರೇಂದ್ರ ಮೋದಿ ಇನ್ ಕನ್ನಡ ಅನ್ನೋ ಆ್ಯಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಕನ್ನಡದ ಮೇಲೆ ಪ್ರೀತಿಯಿಂದ ಪ್ರಧಾನಿ ಮೋದಿ, ಪ್ರತಿ ಭಾರಿ ಕರ್ನಾಟಕಕ್ಕೆ ಆಗಮಿಸಿದಾಗ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಕರ್ನಾಟಕದ 28 ಕ್ಷೇತ್ರಗಳನ್ನು ಗೆಲ್ಲುತ್ತೇವ ಎಂದು ಪ್ರಧಾನಿ ನರೇಂದ್ರ ಮೋದಿಗೆ ಭರವಸೆ ನೀಡಿದ ಬಿಎಸ್ ಯಡಿಯೂರಪ್ಪ, ಮತದಾರರಿಗೆ ಮಹತ್ವದ ಸಂದೇಶ ರವಾನಿಸಿದ್ದಾರೆ. 

ತೆರೆದ ವಾಹನದ ಮೂಲಕ ಶಿವಮೊಗ್ಗ ಸಮಾವೇಶಕ್ಕೆ ಎಂಟ್ರಿಕೊಟ್ಟ ಮೋದಿಗೆ ಅದ್ಧೂರಿ ಸ್ವಾಗತ!

ಲೋಕಸಭಾ ಚುನಾವಣೆ ಕಣ ರಂಗೇರಿದೆ. ಮೊನ್ನೆಯಷ್ಟೇ ಕಲಬುರಗಿಯಲ್ಲಿ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಮೋದಿ, ಇದೀಗ ಶಿವಮೊಗ್ಗದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ಸುಳ್ಳುಗಳನ್ನೇ ಹೇಳುತ್ತಾ ಸಾಗುತ್ತಿದೆ. ದಿನ ಬೆಳಗ್ಗೆ ಎದ್ದರೆ ಸುಳ್ಳು ಹೇಳುತ್ತಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರು ಸಿಎಂ, ಮತ್ತೊಬ್ಬರು ಸಿಎಂ ಕುರ್ಚಿಗಾಗಿ ಕಾಯುತ್ತಿದ್ದಾರೆ. ಇನ್ನೊಬ್ಬರು  ಸೂಪರ್ ಸಿಎಂ , ಮತ್ತೊಬ್ಬರು ಶ್ಯಾಡೋ ಸಿಎಂ ಎಂದು ಮೋದಿ ರಾಜ್ಯ ಕಾಂಗ್ರೆಸ್ ವಿರುದ್ದವೂ ಹರಿಹಾಯ್ದಿದಾರೆ.  

Follow Us:
Download App:
  • android
  • ios