ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಲಾಕ್‌ಡೌನ್ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎಂದು ಉಪಮುಖ್ಯಮಂತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಯಚೂರು, (ಮೇ.01): ಕೊರೋನಾ ತಡೆಗೆ ಲಾಕ್​ಡೌನ್​​ ಅಗತ್ಯವಾಗಿದ್ದು, ಇದನ್ನ ಬಿಟ್ಟರೆ ಬೇರೆ ಮಾರ್ಗವೇ ಇಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

ರಾಯಚೂರಿನಲ್ಲಿ ಇಂದು (ಶನಿವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೋನಾದ ಚೈನ್​ ಲಿಂಕ್ ತಪ್ಪಿಸಲು ಸಂಚಾರ ಸ್ತಬ್ಧವಾಗಬೇಕಿದೆ. ಜನರ ಅನಾವಶ್ಯಕ ಓಡಾಟ, ಸಭೆ, ಸಮಾರಂಭಗಳನ್ನ ಬಂದ್ ಮಾಡಬೇಕಿದೆ ಎಂದರು. 

ಕೊರೊನಾ ಗೆದ್ದ ರಾಯಚೂರಿನ ಮುತ್ತಜ್ಜಿಯ ಒಳ್ಳೇ ಕತೆ

ಲಾಕ್​ಡೌನ್​ ಎಂದು ಕರೆಯದಿದ್ದರೂ, ಸರ್ಕಾರ ವಿಧಿಸಿರೋ ನಿಯಮಗಳು ಲಾಕ್​ಡೌನ್ ಸ್ವರೂಪದಲ್ಲಿಯೇ ಇವೆ. ಸಾಮಾಜಿಕ ಅಂತರ ಪಾಲನೆ ಹಾಗೂ ಕಡ್ಡಾಯವಾಗಿ ಮಾಸ್ಕ್​ ಧರಿಸುವುದರೊಂದಿಗೆ ಸರ್ಕಾರಕ್ಕೆ ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.

ಇನ್ನು ಕೊರೋನಾ ವೇಳೆ ಖಾಸಗಿ ವೈದ್ಯರ ಹಣ ವಸೂಲಿ ಆರೋಪದ ಬಗ್ಗೆ ಮಾತನಾಡಿದ ಅವರು, ಇಂತಹ ಸಂದರ್ಭದಲ್ಲಿ ವೈದ್ಯರು ಮಾನವೀಯತೆಯಿಂದ ವರ್ತಿಸಬೇಕು. ವೈದ್ಯರು ಜನರ ಶಾಪಕ್ಕೆ ಗುರಿ ಆಗುವ ಕೆಲಸ ಮಾಡಬಾರದು. ಇಂತಹ ವೇಳೆಯಲ್ಲಿ ವೈದ್ಯರು ನಮ್ಮ ಪಾಲಿನ ದೇವರು. ದೇವರು ನಮಗೆ ಅನ್ಯಾಯ ಮಾಡುವ ಕೆಲಸ ಮಾಡಬಾರದು ಎಂದು ವೈದ್ಯರಲ್ಲಿ ವಿನಂತಿ ಮಾಡಿದರು.