ಕೊರೊನಾ ಗೆದ್ದ ರಾಯಚೂರಿನ ಮುತ್ತಜ್ಜಿಯ ಒಳ್ಳೇ ಕತೆ
ಕೊರೋನಾವನ್ನು ಯಶಸ್ವಿಯಾಗಿ ಎದುರಿಸಿ ಗುಣಮುಖರಾದ ಸಜಿನಿಬಾಯಿ| ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ| ಆತ್ಮವಿಶ್ವಾಸ, ವೈದ್ಯರಿಂದ ನಿರಂತರ ಚಿಕಿತ್ಸೆಯ ಫಲವಾಗಿ ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾದ ಸಜಿನಿಬಾಯಿ|
ರಾಯಚೂರು(ಏ.30): ಆತ್ಮಸ್ಥೈರ್ಯವಿದ್ದರೆ 97ರ ಇಳಿವಯಸ್ಸಿನಲ್ಲೂ ಕೊರೋನಾ ಗೆದ್ದು ಬರಬಹುದೆಂಬುದನ್ನು ಮಹಿಳೆಯೊಬ್ಬರು ತೋರಿಸಿಕೊಟ್ಟಿದ್ದಾರೆ.
ಇಲ್ಲಿನ ಮಹಾವೀರ ವೃತ್ತದ ಸಮೀಪದ ನಿವಾಸಿ ಸಜಿನಿಬಾಯಿ(97) ಕೊರೋನಾವನ್ನು ಯಶಸ್ವಿಯಾಗಿ ಎದುರಿಸಿ ಗುಣಮುಖರಾಗಿರುವ ವೃದ್ಧೆ. ಏ.20ರಂದು ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
92 ವರ್ಷದ ವೃದ್ಧೆಯೂ ಸೇರಿ 11 ಜನರ ಕುಟುಂಬ ಕೊರೋನಾ ಗೆದ್ದಿತು
ಈ ವೇಳೆ ಪರೀಕ್ಷೆಗೊಳಪಡಿಸಿದಾಗ ಕೊರೋನಾ ಸೋಂಕು ದೃಢಪಟ್ಟಿತ್ತು. ಇದರಿಂದಾಗಿ ಕುಟುಂಬಸ್ಥರು, ಆಪ್ತರು ಸಾಕಷ್ಟು ಆತಂಕಕ್ಕೊಳಾಗಿದ್ದರು. ಆದರೆ ವೃದ್ಧೆ ಸಜಿನಿಬಾಯಿ ಆತ್ಮವಿಶ್ವಾಸ, ವೈದ್ಯರಿಂದ ನಿರಂತರ ಚಿಕಿತ್ಸೆಯ ಫಲವಾಗಿ ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ವೈದ್ಯ ಡಾ.ಬಸವರಾಜ ಎಂ.ಪಾಟೀಲ್, ವೃದ್ಧೆಯ ಆತ್ಮಸ್ಥೈರ್ಯವನ್ನು ಶ್ಲಾಘಿಸಿದ್ದಾರೆ.
ಕೊರೋನಾ ಬಗ್ಗೆ ಸಾರ್ವಜನಿಕರು ಅನಗತ್ಯವಾದ ಆತಂಕ ಪಡದೇ, ಸೋಂಕು ತಗುಲಿದಾಗ ದೃತಿಗೆಡದೇ ವೈದ್ಯಕೀಯ ಪರೀಕ್ಷೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
"