ವಾರದಲ್ಲಿ ಒಂದು ದಿನ ಸಂಪೂರ್ಣ ವಿದ್ಯುತ್ ಕಡಿತ; ರೈತರಿಗೆ ಮತ್ತೊಂದು ಶಾಕ್ ನೀಡಲು ಸರ್ಕಾರ ಸಿದ್ಧತೆ!
ವಾರದಲ್ಲಿ ಒಂದು ದಿನ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲು ಚಿಂತನೆ ನಡೆದಿದೆ. ರೈತರು ಸಹಕರಿಸಬೇಕು ಎಂದು ಹೇಳುವ ಮೂಲಕ ಅಥಣಿ ಶಾಸಕ ಲಕ್ಷ್ಮಣ್ ಸವದಿ ನದಿ ದಂಡೆಯ ರೈತರಿಗೆ ಶಾಕ್ ನೀಡಿದ್ದಾರೆ. ಈಗಾಗಲೇ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಶಾಸಕರ ಈ ಚಿಂತನೆ ಕೇಳಿ ರೈತರನ್ನ ಚಿಂತೆಗೀಡುಮಾಡಿದೆ.
ಚಿಕ್ಕೋಡಿ (ಅ.16) ಜಿಲ್ಲೆಯಲ್ಲಿ ಈ ಬಾರಿ ತೀವ್ರ ಬರಗಾಲದಿಂದ ಬೆಳೆ ನಷ್ಟವಾಗಿ ಮುಂದೇ ಏನು ತೋಚದೇ ಅನ್ನದಾತ ಅಕ್ಷರಶಃ ಕಂಗಾಲಾಗಿ ಕುಳಿತಿದ್ದಾನೆ. ಇತ್ತ ಸರ್ಕಾರವೂ ರೈತರಿಗೆ ಯಾವುದೇ ಪರಿಹಾರ ಧನ ನೀಡುತ್ತಿಲ್ಲ. ಇನ್ನು ಅಳಿದುಳಿದ ಬೆಳೆ ಉಳಿಸಿಕೊಳ್ಳೋಣ ಎಂದರೂ ಲೋಡ್‌ಶೆಡ್ಡಿಂಗ್ ನಿಂದಾಗಿ ರೈತರ ಪಂಪ್‌ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ದೊರೆಯದೇ ಬೆಳೆ ಒಣಗುತ್ತಿವೆ. ಇಂಥ ದುಸ್ಥಿತಿಯಲ್ಲಿ ರಾಜ್ಯಸರ್ಕಾರ ರೈತರಿಗೆ ಮತ್ತೊಂದು ಬರೆ ಎಳೆಯಲು ಸಿದ್ಧತೆ ನೆಡಸಿದೆ.
ವಾರದಲ್ಲಿ ಒಂದು ದಿನ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲು ಚಿಂತನೆ ನಡೆದಿದೆ. ರೈತರು ಸಹಕರಿಸಬೇಕು ಎಂದು ಹೇಳುವ ಮೂಲಕ ಅಥಣಿ ಶಾಸಕ ಲಕ್ಷ್ಮಣ್ ಸವದಿ ನದಿ ದಂಡೆಯ ರೈತರಿಗೆ ಶಾಕ್ ನೀಡಿದ್ದಾರೆ. ಈಗಾಗಲೇ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಶಾಸಕರ ಈ ಚಿಂತನೆ ಕೇಳಿ ರೈತರನ್ನ ಚಿಂತೆಗೀಡುಮಾಡಿದೆ.
ಕರ್ನಾಟಕ ಬಂದ್ ಮಾಡಿದ್ರೆ, ನೀರು ಹರಿಯುವುದು ನಿಲ್ಲುತ್ತಾ? ಶಾಸಕ ಲಕ್ಷ್ಮಣ್ ಸವದಿ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಾಗನೂರು ಪಿಕೆ ಗ್ರಾಮದಲ್ಲಿ ಮಾತನಾಡಿರುವ ಶಾಸಕ ಸವದಿ, ಕೃಷ್ಣಾ ನದಿ ದಂಡೆಯ ವಿದ್ಯುತ್ ಕಡಿತಕ್ಕೆ ಚಿಂತನೆ ನಡೆಸಿರುವ ಶಾಸಕ ಸವದಿ. ಬೇಸಿಗೆ ಸಂದರ್ಭದಲ್ಲಿ ನೀರು ಉಳಿವಿಗಾಗಿ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಿದೆ. ಈ ನಿರ್ಧಾರಕ್ಕೆ ರೈತರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ಬೆಳೆನಷ್ಟವಾಗಿ ರೈತರು ಬದುಕುವುದು ದುಸ್ತರವಾಗಿದೆ. ಇತ್ತ ಪರಿಹಾರ ಧನವೂ ನೀಡುತ್ತಿಲ್ಲ. ಹೀಗಿರುವಾಗ ಮತ್ತೆ ವಿದ್ಯುತ್ ಕಡಿತ ಮಾಡುವ ಚಿಂತನೆ ನಡೆಸಿರುವುದಕ್ಕೆ ರೈತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕನಿಲ್ಲದೆ ಅಧಿವೇಶನ ನಡೆದಿದ್ದು ರಾಜ್ಯದಲ್ಲಿ ಇದೇ ಮೊದಲು: ಬಿಜೆಪಿ ಇತಿಹಾಸ ಬರೆದಿದೆ: ಸವದಿ ಟಾಂಗ್