ಕರ್ನಾಟಕ ಬಂದ್ ಮಾಡಿದ್ರೆ, ನೀರು ಹರಿಯುವುದು ನಿಲ್ಲುತ್ತಾ? ಶಾಸಕ ಲಕ್ಷ್ಮಣ್ ಸವದಿ

ಕರ್ನಾಟಕ ಬಂದ್ ಮಾಡಿದ ಮಾತ್ರಕ್ಕೆ ಕಾವೇರಿ ನೀರು ತಮಿಳನಾಡಿಗೆ ಹರಿಯುವುದು ನಿಲ್ಲುವುದಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

Cauvery water dispute MLA Laxman savadi statement at athani belgum rav

ಚಿಕ್ಕೋಡಿ (ಸೆ.29): ಕರ್ನಾಟಕ ಬಂದ್ ಮಾಡಿದ ಮಾತ್ರಕ್ಕೆ ಕಾವೇರಿ ನೀರು ತಮಿಳನಾಡಿಗೆ ಹರಿಯುವುದು ನಿಲ್ಲುವುದಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಹಕ್ಕಿದೆ. ಕಾವೇರಿ ವಿಚಾರದಲ್ಲಿ ಅನ್ಯಾಯವಾದ್ರೆ ಪ್ರತಿಭಟನೆ ಮಾಡಲಿ ನಾನು ಬೆಂಬಲಿಸುತ್ತೇನೆ. ಆದರೆ ಪ್ರತಿಭಟನೆ ಸಂವಿಧಾನಬದ್ಧವಾಗಿರಬೇಕು. ಈಗ ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್ ಮಾಡುವುದು ಸರಿಯಲ್ಲ. ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಇಂದಿನ ಬಂದ್ ನಾನು ಒಪ್ಪುವುದಿಲ್ಲ ಎಂದು ಕರ್ನಾಟಕ ಬಂದ್ ಮಾಡಿದ ರೈತಪರ, ಕನ್ನಡ ಸಂಘಟನೆಗಳ ನಿರ್ಧಾರವನ್ನು ಖಂಡಿಸಿದರು.

ಡಿಎಂಕೆ ಜೊತೆ ಸಖ್ಯ ಬೆಳೆಸಿ ಕಾವೇರಿ ನೀರು ಬಿಟ್ಟು ಈಗ ಪ್ರಧಾನಿ ಮಧ್ಯ ಪ್ರವೇಶಿಸಲಿ ಎನ್ನುವುದು ಎಷ್ಟು ಸರಿ : ಸೂಲಿಬೆಲೆ

ಬಿಜೆಪಿ-ಜೆಡಿಎಸ್ ನಾಯಕರು ಕಾಂಗ್ರೆಸ್‌ಗೆ?

ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ವಿರೋಧಿಸಿ ಆ ಪಕ್ಷಗಳನ್ನು ತೊರೆಯಲು ಹಲವರು ನಿರ್ಧರಿಸಿದ್ದಾರೆ ಎಂದರು.

ನಂದಗಾಂವ ಗ್ರಾಮದಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ್ ಸವದಿ, ಬಹಳಷ್ಟು ಜನ ಬಿಜೆಪಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಆಸಕ್ತಿ ತೋರಿಸುತ್ತಿದ್ದಾರೆ. ಆದರೆ ಎಲ್ಲದಕ್ಕೂ ಕಾಲ ಕೂಡಿಬರಬೇಕು ಲೋಕಸಭೆ ಸಮೀಪಿಸಿದಾಗ ಹಾಲಿ ಶಾಸಕರು, ಮಾಜಿ ಶಾಸಕರು ಯಾರೇ ಇರಬಹುದು ಆಗ ಪ್ರಕಟ ಮಾಡುತ್ತೇವೆ ಎನ್ನುವ ಮೂಲಕ ಆಪರೇಷನ್ ಹಸ್ತದ ಸುಳಿವು ನೀಡಿದ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ. ಇದೇ ವೇಳೆ ರಮೇಶ್ ಕತ್ತಿ ಕಾಂಗ್ರೆಸ್ ಸೇರ್ತಾರೆ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿರುವ ವಿಚಾರದ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳು, ಇಲ್ಲಿವರೆಗೆ ಆ ಬಗ್ಗೆ ಚರ್ಚೆ ನಡೆದಿಲ್ಲ. ಕಾಲ ಕೂಡಿ ಬಂದಾಗ ಆ ಬಗ್ಗೆ ಆಲೋಚನೆ ಮಾಡ್ತೀವಿ ಎಂದರು.

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಿದ್ದರೆ ರಾಜ್ಯ ಸರ್ಕಾರ ಡಿಸ್ಮಿಸ್‌ ಆಗುತ್ತೆ: ಸಿಎಂ ಸಿದ್ದರಾಮಯ್ಯ

Latest Videos
Follow Us:
Download App:
  • android
  • ios