ರಾಜ್ಯದ ಚಿಲ್ಲರೆ ಮದ್ಯ ವ್ಯಾಪಾರಿಗಳು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಲಾಭಾಂಶ ಹೆಚ್ಚಳ, ತೆರಿಗೆ ರದ್ದತಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಅಬಕಾರಿ ಡಿಸಿ ನಾಗಶಯನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನೂ ಮಾಡಿದ್ದಾರೆ.
ಬೆಂಗಳೂರು: ರಾಜ್ಯದ ಚಿಲ್ಲರೆ ಮದ್ಯ ವ್ಯಾಪಾರಿಗಳು ಇದೀಗ ತಮ್ಮ ಅಸ್ತಿತ್ವಕ್ಕಾಗಿ ಹೋರಾಟದ ಹಾದಿ ಹಿಡಿದಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರು ನಗರ ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘ ಮತ್ತು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಸಹಯೋಗದಲ್ಲಿ, ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಆಯೋಜನೆಗೊಂಡಿದ್ದು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸರಕಾರ ಚಿಲ್ಲರೆ ಮದ್ಯ ವ್ಯಾಪಾರದ ಮೇಲಿನ ವಿವಿಧ ಬೇಡಿಕೆಗಳಿಗೆ ಸ್ಪಂದಿಸದೇ, ನಿರಂತರ ಹಿಮ್ಮೆಟ್ಟಿಸುತ್ತಿದ್ದು, ಇದರ ಪರಿಣಾಮವಾಗಿ ವ್ಯಾಪಾರಿಗಳಿಗೆ ಅತಿದೊಡ್ಡ ಆರ್ಥಿಕ ಹಿನ್ನಡೆ ಉಂಟಾಗಿದೆ. ಹೀಗಾಗಿ, “ಅಳಿವು–ಉಳಿವಿನ” ಹೋರಾಟ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಮುಖ ಬೇಡಿಕೆಗಳು
ಚಿಲ್ಲರೆ ಮದ್ಯ ಮಾರಾಟದ ಮೇಲೆಲಿನ ಲಾಭಾಂಶವನ್ನು ಶೇ.20 ನೀಡಬೇಕು
ಸನ್ನದು ಶುಲ್ಕದ ಮೇಲಿನ ಹೆಚ್ಚುವರಿ ತೆರಿಗೆಯನ್ನು ರದ್ದುಪಡಿಸಬೇಕು.
AROEDಯನ್ನ ಕೈಬಿಡುವಂತೆ ಒತ್ತಾಯ
ಕೊವಿಡ್ ಸಮಯದಲ್ಲಿ ನೀಡಿದಂತೆಯೇ ಸನ್ನದು ಶುಲ್ಕ ಪಾವತಿಗೆ ಎರಡು ಕಂತು ಅವಕಾಶ ನೀಡಬೇಕು.
ಡಿಸಿ ನಾಗಶಯನ್ ವಿರುದ್ಧ ವ್ಯಾಪಾರಿಗಳ ಗಂಭೀರ ಆರೋಪ
ಪ್ರತಿಭಟನಾ ವೇದಿಕೆಯಲ್ಲಿ ಅಬಕಾರಿ ಡಿಸಿ ನಾಗಶಯನ್ ವಿರುದ್ಧ ಭ್ರಷ್ಟಾಚಾರದ ತೀವ್ರ ಆರೋಪಗಳು ಕೇಳಿಬಂದಿವೆ. "ಇಂತಹ ಅಧಿಕಾರಿಯನ್ನ ನಾವು ಎಲ್ಲೂ ನೋಡಿಲ್ಲ. ನಾಗಶಯನ ಎಲ್ಲೇಲ್ಲಿಗೆ ಹೋಗ್ತಾರೆ ಅಲ್ಲೆಲ್ಲ ಸನ್ನದ್ದುದಾರರಿಗೆ ತೊಂದರೆ ಕೊಡುತ್ತಾರೆ" ಎಂದು ಅಸೋಸಿಯೇಷನ್ ನಾಯಕರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಅಲ್ಲದೆ, ಮಂಡ್ಯ, ಚಾಮರಾಜಪೇಟೆ ಮತ್ತು ಇತರ ಜಿಲ್ಲೆಗಳ ಸನ್ನದ್ದುದಾರರಿಗೆ ಪ್ರತಿಭಟನಾ ಸಭೆಗೆ ಹೋಗಬಾರದು ಎಂದು ದೂರವಾಣಿ ಕರೆಗಳ ಮೂಲಕ ಬೆದರಿಕೆ ನೀಡಲಾಗಿದೆ. ಆತ ಕಡು ಭ್ರಷ್ಟ ಆತನ ವಿರುದ್ದವು ನಾವು ಹೋರಾಟ ಮಾಡುತ್ತೇವೆ ಎಂಬ ಗಂಭೀರ ಆರೋಪ ಮಾಡಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ,ಕೋಶಾಧಿಕಾರಿ ಮೆಹರ್ ವಾಡೆ,ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗ್ಡೆ, ರಾಜ್ಯದ ವಿವಿಧ ಜಿಲ್ಲೆಗಳ ಮದ್ಯ ವ್ಯಾಪಾರಿಗಳ ಪ್ರತಿನಿಧಿಗಳು ಪ್ರಮುಖ ನಾಯಕರು ವೇದಿಕೆಯಲ್ಲಿ ಹಾಜರಿದ್ದರು.
ಮುಂದಿನ ಹಾದಿ
ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸದ ಹಿಂಗೆಯೇ, ವ್ಯಾಪಾರಿಗಳು ಮುಂದಿನ ಹಂತದ ಹೋರಾಟವನ್ನು ಉಲೇಕಿಸಿದ್ದಾರೆ. ಕೆಲವು ಸಂಘಟನೆಗಳು ನ್ಯಾಯಾಂಗ ಹಾದಿಯನ್ನೂ ಅನ್ವಯಿಸಲಿದೆ ಎಂದು ಮಾಧ್ಯಮಗಳಿಗೆ ತಿಳಿದಿದೆ.
