ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ನೈಋುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು

ಬೆಂಗಳೂರು(ಸೆ.30):  ಕಳೆದ ಕೆಲ ದಿನಗಳಿಂದ ಅಬ್ಬರ ಕಳೆದುಕೊಂಡಿದ್ದ ಮುಂಗಾರು ಮತ್ತೆ ಬಿರುಸು ಪಡೆದುಕೊಳ್ಳುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಕೇಂದ್ರ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು(ಶುಕ್ರವಾರ) ಬೆಳಗ್ಗೆ 8.30ರ ತನಕ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಕಲಬುರಗಿ, ಬೆಳಗಾವಿ, ಬಾಗಲಕೋಟೆ, ರಾಯಚೂರು, ದಾವಣಗೆರೆ, ರಾಮನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ನೀಡಲಾಗಿದೆ. ಇಂದು ಬೆಳಗ್ಗೆ 8.30ರಿಂದ ಶನಿವಾರದವರೆಗೆ ಶಿವಮೊಗ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ, ಕೊಪ್ಪಳ, ಗದಗ, ರಾಯಚೂರು, ಬಾಗಲಕೋಟೆ, ಧಾರವಾಡ ಜಿಲ್ಲೆಗೆ ‘ಯೆಲ್ಲೋ ಅಲರ್ಟ್‌’ ಎಚ್ಚರಿಕೆ ನೀಡಲಾಗಿದೆ.

Chitradurga: ಅಕಾಲಿಕ ಮಳೆಗೆ ಸುಮಾರು 71153 ಹೆಕ್ಟೇರ್ ಬೆಳೆ ನಾಶ: ಕಂಗಾಲಾದ ಅನ್ನದಾತ

ನಿನ್ನೆ(ಗುರುವಾರ) ಬೆಳಗ್ಗೆ 8.30ಕ್ಕೆ ಕೊನೆಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ನೈಋುತ್ಯ ಮುಂಗಾರು ರಾಜ್ಯದಲ್ಲಿ ದುರ್ಬಲವಾಗಿತ್ತು. ಒಳನಾಡಿನ ಕೆಲವೆಡೆ ಮಳೆಯಾಗಿದ್ದರೆ ಕರಾವಳಿಯಲ್ಲಿ ಒಣಹವೆಯಿತ್ತು.

ಯಾದಗಿರಿಯ ಕಕ್ಕೆರಿಯಲ್ಲಿ 3 ಸೆಂ.ಮೀ., ಬೀದರ್‌ನ ಹಲಬರ್ಗ 2, ರಾಯಚೂರಿನ ಮಾನ್ವಿ, ಮುದ್ಗಲ್‌, ಬೀದರ್‌ನ ಹುಮ್ನಾಬಾದ್‌, ಹಳ್ಳಿಖೇಡ್‌, ಕಲಬುರಗಿಯ ಚಿಂಚೋಳಿಯಲ್ಲಿ ತಲಾ ಒಂದು ಸೆಂ. ಮೀ. ಮಳೆಯಾಗಿದೆ.