Breaking News: ಬಿಜೆಪಿ ಮುಖಂಡ ಸಿಟಿ ರವಿಗೆ ಮತ್ತೆ ಜೀವ ಬೆದರಿಕೆ, 15 ದಿನ ಗಡುವು ಕೊಟ್ಟ ಪತ್ರದಲ್ಲೇನಿದೆ?
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಅವಹೇಳನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿಗೆ ವಾಟ್ಸಪ್ ಮೂಲಕ ಜೀವ ಬೆದರಿಕೆ ಬಂದಿದೆ. 15 ದಿನಗಳ ಒಳಗೆ ಕ್ಷಮೆ ಕೇಳದಿದ್ದರೆ ಕೈಕಾಲು ಮುರಿದು ಸಾಯಿಸುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೆ, ಅವರ ಮಗನನ್ನೂ ಕೊಲ್ಲುವುದಾಗಿ ಬೆದರಿಕೆ ಬಂದಿದ್ದು, ಸಿಟಿ ರವಿ ಪೊಲೀಸರಿಗೆ ದೂರು ನೀಡಿದ್ದಾರೆ.
ಚಿಕ್ಕಮಗಳೂರು (ಜ.11): ಸಚಿವೆ ಲಕ್ಮ್ಮಿ ಹೆಬ್ಬಾಳ್ಕರ್ ವಿರುದ್ಧ ಅಕ್ಷೇಪಾರ್ಹ ಪದ ಬಳಕೆ ಆರೋಪ ಪ್ರಕರಣದ ಗಲಾಟೆ ಬಳಿಕ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಬಹಿರಂಗವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಹಲ್ಲೆ ಮಾಡಿದವರ ಮೇಲೆ ಪೊಲೀಸರು ಕ್ರಮ ಜರುಗಿಸದ ಕಾರಣ ಬೆದರಿಕೆ ಕರೆಗಳು ನಿರಂತರವಾಗಿ ಬರುತ್ತಿವೆ ಎಂಬ ಸಿಟಿ ರವಿ ಆರೋಪಿಸಿದ್ದ ಬೆನ್ನಲ್ಲೇ ಇದೀಗ ವಾಟ್ಸಪ್ ಮೂಲಕ ಮತ್ತೊಮ್ಮೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆ ಬಂದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆಯಾ ಎಂಬ ಅನುಮಾನ ಮೂಡಿಸಿದೆ.
ಬೆದರಿಕೆ ಪತ್ರದಲ್ಲೇನಿದೆ?
ಮಾಜಿ ಸಚಿವ ಸಿಟಿ ರವಿಗೆ ವಾಟ್ಸಪ್ ನಲ್ಲಿ ಜೀವ ಬೆದರಿಕೆಯೊಡ್ಡಿರುವ ಅನಾಮಧೇಯ ವ್ಯಕ್ತಿಗಳು, ಇನ್ನು 15 ದಿನದೊಳಗೆ ಚಿಕ್ಕಮಗಳೂರಿನಿಂದ ಬಂದು ಬೆಳಗಾವಿ ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ನುಗ್ಗಿ ನಿಮ್ಮ ಕೈಕಾಲು ಮುರಿದು ಸಾಯಿಸುತ್ತೇವೆ. ನಿನ್ನ ಮಗನನ್ನು ಸಾಯಿಸುತ್ತೇವೆ ಹುಷಾರಾಗಿರುವ ಎಂಬ ಬೆದರಿಕೆ ಸಂದೇಶ ಕಳಿಸಿರುವ ದುಷ್ಕರ್ಮಿಗಳು.
Lakshmi hebbalkar Interview: ಸಿಟಿ ರವಿಯನ್ನು ನಾನು ಕ್ಷಮಿಸಿದರೆ ನನ್ನನ್ನಾರೂ ಕ್ಷಮಿಸಲ್ಲ!
ಸಿಟಿ ರವಿಗೆ ಪ್ರಾಣ ಬೆದರಿಕೆ ಅಲ್ಲದೆ ಅವರ ಮಗ ಸೂರ್ಯನನ್ನೂ ಕೊಲ್ಲುತ್ತೇವೆ ಎಂದು ಬೆದರಿಕೆಯೊಡ್ಡಿರುವ ಕಿಡಿಗೇಡಿಗಳು. ಬೆದರಿಕೆ ಸಂದೇಶ ಬಂದ ಬಳಿಕ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಿಟಿ ರವಿ ಅವರು ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.