Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ ಚಿರತೆ ನೈಟ್ ರೌಂಡ್ಸ್; ಸಿಸಿಟಿವಿ ದೃಶ್ಯ ನೋಡಿ ಬೆಚ್ಚಿಬಿದ್ದ ಬೆಂಗಳೂರಿಗರು!

ಸಿಲಿಕಾನ್ ಸಿಟಿ ಜನರಿಗೆ ಇಷ್ಟು ದಿನ ಮಳೆ, ರಸ್ತೆ ಗುಂಡಿ, ,ಟ್ರಾಫಿಕ್ ಜಾಮ್ ಕಿರಿಕಿರಿಯೇ ದೊಡ್ಡ ಸಮಸ್ಯೆಯಾಗಿತ್ತು. ಇದೀಗ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿರೋದು ಬೆಂಗಳೂರಿಗರ ನಿದ್ದೆಗೆಡಿಸಿದೆ.

Leopard sighting near Kudlugate, Bengaluru, locals worried rav
Author
First Published Oct 29, 2023, 2:30 PM IST

ಬೆಂಗಳೂರು ಬೊಮ್ಮನಹಳ್ಳಿ (ಅ.29) ಸಿಲಿಕಾನ್ ಸಿಟಿ ಜನರಿಗೆ ಇಷ್ಟು ದಿನ ಮಳೆ, ರಸ್ತೆ ಗುಂಡಿ, ,ಟ್ರಾಫಿಕ್ ಜಾಮ್ ಕಿರಿಕಿರಿಯೇ ದೊಡ್ಡ ಸಮಸ್ಯೆಯಾಗಿತ್ತು. ಇದೀಗ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿರೋದು ಬೆಂಗಳೂರಿಗರ ನಿದ್ದೆಗೆಡಿಸಿದೆ.

ಬೆಂಗಳೂರಿನ ಜನದಟ್ಟಣೆಯ ವಸತಿ ಪ್ರದೇಶದಲ್ಲೇ ಚಿರತೆ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಹೊಸೂರು ರಸ್ತೆಯ ಕೂಡ್ಲು ಗೇಟ್ ಬಳಿ ಚಿರತೆ ಓಡಾಡುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. 

ಸ್ಥಳೀಯ ನಿವಾಸಿಗಳು ಚಿರತೆ ಓಡಾಟ ಕಂಡು ಬೆಚ್ಚಿಬಿದ್ದಿದ್ದಾರೆ. ಕೂಡ್ಲು ಗೇಟ್ ನ ಹೊಸಪಾಳ್ಯದ ಬಳಿ ದಾಮೊದರ್ ರೆಡ್ಡಿ ಎಂಬುವವರ ಮನೆಯ ಬಳಿ ಕಾಣಿಸಿಕೊಂಡ ಚಿರತೆ. ಬೀದಿನಾಯಿಗಳು ಚಿರತೆಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಕಾಣಿಸಿಕೊಂಡ ಚಿರತೆ.

ಮೈಸೂರು: ತಿ.ನರಸೀಪುರದಲ್ಲಿ ನಿಲ್ಲದ ಚಿರತೆ ಉಪಟಳ, ಆತಂಕದಲ್ಲಿ ಜನತೆ..!

ರಾಜಧಾನಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ಮಾನವ ಪ್ರಾಣಿ ಸಂಘರ್ಷದಿಂದಾಗಿ ವನ್ಯಜೀವಿಗಳು ಆಹಾರ ಹುಡುಕಿಕೊಂಡು ನಗರದೊಳಗೆ ಪ್ರವೇಶಿಸುವುದು ಹಿಂದಿನಿಂದಲೂ ನಡೆಯುತ್ತಿದೆ. ಅದರಲ್ಲೂ ಕಾಡಂಚಿನ ಗ್ರಾಮದಲ್ಲಿ ಇವೆಲ್ಲ ಮಾಮೂಲು ಎನ್ನವಷ್ಟು ಕಾಣಿಸಿಕೊಳ್ಳುತ್ತಿವೆ. ಇದೇ ವರ್ಷ ನೈಸ್‌ ರಸ್ತೆ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂಗಡಿಪುರದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಚಿರತೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದೀಗ ಕೂಡ್ಲುಗೇಟ್ ಬಳಿ ಕಾಣಿಸಿಕೊಂಡಿದೆ.ಚಿರತೆ ಭಯದಿಂದಾಗಿ ಜನರು ರಾತ್ರಿ ವೇಳೆ ಹೊರಗಡೆ ಬರಲು ಹೆದರುವಂತಾಗಿದೆ.

Follow Us:
Download App:
  • android
  • ios