ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿದ್ರು ಬಂಧನ ಯಾಕಿಲ್ಲ: ಶ್ರೀರಾಮಸೇನೆ ಪ್ರಶ್ನೆ
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹುಲಿ ಉಗುರು, ಚರ್ಮ ಸಾಕಷ್ಟು ಸದ್ದು ಮಾಡಿತ್ತು. ವ್ಯಾಘ್ರನ ಉಗುರು ಧರಿಸಿದ್ದ ಅರ್ಚಕರು, ಡಿ.ಆರ್.ಎಫ್.ಓ ಅಂದರ್ ಆದ್ರು. ಆದ್ರೆ, ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿದ್ರು ಬಂಧನ ಯಾಕಿಲ್ಲ ಅಂತ ಶ್ರೀರಾಮಸೇನೆ ಪ್ರಶ್ನೆ ಮಾಡಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.28): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಹುಲಿ ಉಗುರು, ಚರ್ಮ ಸಾಕಷ್ಟು ಸದ್ದು ಮಾಡಿತ್ತು. ವ್ಯಾಘ್ರನ ಉಗುರು ಧರಿಸಿದ್ದ ಅರ್ಚಕರು, ಡಿ.ಆರ್.ಎಫ್.ಓ ಅಂದರ್ ಆದ್ರು. ಆದ್ರೆ, ದತ್ತಪೀಠದ ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿದ್ರು ಬಂಧನ ಯಾಕಿಲ್ಲ ಅಂತ ಶ್ರೀರಾಮಸೇನೆ ಪ್ರಶ್ನೆ ಮಾಡಿದೆ. ಈ ಮಧ್ಯೆ, ಹುಲಿ ಉಗುರಿನ ಡಾಲರ್ ಹಾಕಿ ಫೇಸ್ಬುಕ್ ನಲ್ಲಿ ಫೋಸ್ ಕೊಟ್ಟಿದ್ದ ಡಿ.ಆರ್.ಎಫ್.ಓ.ಗೆ ಅಧಿಕಾರಿಗಳೇ ಡ್ರಿಲ್ ಮಾಡಿಸುತ್ತಿದ್ದಾರೆ. ಇತ್ತ ಹುಲಿ ಚರ್ಮದ ಮೇಲೆ ಕೂತ ಪೋಟೋದಿಂದ ವಿವಾದಕ್ಕೆ ಗುರಿಯಾಗಿದ್ದ ವಿನಯ್ ಗುರೂಜಿ ಸಂಬಂಧಿಸಿದ ವರದಿಯನ್ನ ಅರಣ್ಯ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ.
ವಿನಯ್ ಗುರೂಜಿ ವ್ಯಾಘ್ರನ ಉರುಳಿನಿಂದ ಸೇಫ್?: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅರಣ್ಯ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ಹುಲಿ ಉಗ್ರು-ಚರ್ಮ ಅಂತ ಕಿವಿಗೆ ಬೀಳ್ತಿದ್ದಂತೆ ಎದ್ವೋ-ಬಿದ್ವೋ ಅಂತ ಓಡೋಡಿ ಹೋಗ್ತಿದ್ದಾರೆ. ಹುಲಿ ಚರ್ಮದ ಮೇಲೆ ಕುಳಿತ ವಿನಯ್ ಗುರೂಜಿ ಪೋಟೋ ವೈರಲ್ ಆದ ಬೆನ್ನಲ್ಲೇ ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮಕ್ಕ ಭೇಟಿ ನೀಡಿದ್ದ ಕೊಪ್ಪ ಡಿ.ಎಫ್.ಓ. ನಂದೀಶ್ ನೇತೃತ್ವದ ತಂಡ ವಿನಯ್ ಗುರೂಜಿ ನೀಡಿದ ದಾಖಲೆಗಳನ್ನ ಪಡೆದು ಆಶ್ರಮ ಪರಿಶೀಲನೆ ನಡೆಸಿದ್ರು.
ಚಿಕ್ಕಮಗಳೂರು: ಬಾಬಾ ಬುಡಾನ್ ದರ್ಗಾದ ಶಾಖಾದ್ರಿ ನಿವಾಸದಲ್ಲಿ ಜಿಂಕೆ, ಚಿರತೆ ಚರ್ಮ ಪತ್ತೆ!
ಇದೀಗ ಡಿಎಫ್‍ಓ ನಂದೀಶ್ ವರದಿಯನ್ನು ಸಿಸಿಎಫ್ ಉಮೇಶ್ ಪ್ರತಾಪ್ ಸಿಂಗ್‍ಗೆ ಸಲ್ಲಿಕೆ ಮಾಡಿದ್ದು, ವಿನಯ್ ಗುರೂಜಿ ವ್ಯಾಘ್ರನ ಉರುಳಿನಿಂದ ಸೇಫ್ ಆಗಿದ್ದಾರೆ. ಇತ್ತ ಚಿಕ್ಕಮಗಳೂರು ತಾಲೂಕಿನ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಗೌಸ್ ಮೊಹಿದ್ದೀನ್ ಅವರ ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆಯಲ್ಲಿರುವ ಮನೆಯಲ್ಲೂ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿದ್ದು ಅರಣ್ಯ ಇಲಾಖೆಯ ಸಿಬ್ಬಂದಿಗಳು ವಶಕ್ಕೆ ಪಡೆದು ಶಾಖಾದ್ರಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು. ಶಾಖಾದ್ರಿಗೆ ಬಂಧನದ ಭೀತಿ ಎದುರಾಗಿದೆ.
ಶಾಖಾದ್ರಿಗೆ ಬಂಧನದ ಭೀತಿ: ಇನ್ನು ವಿವಾದಿತ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಮನೆಯಲ್ಲಿ ಚಿರತೆ-ಜಿಂಕೆ ಚರ್ಮ ಪತ್ತೆಯಾಗಿ ಚಿಕ್ಕಮಗಳೂರು ಅರಣ್ಯ ವಲಯ ಅಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದ್ರು ಬಂಧನ ಮಾಡದೇ ಇರುವುದಕ್ಕೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿ ಉಗುರು ಧರಿಸಿದ್ದ ಡಿ.ಆರ್.ಎಫ್.ಓ. ಅಮಾನತ್ತಾಗಿ, ಬಂಧನವಾಗಿದ್ದಾರೆ. ಇಬ್ಬರು ಅರ್ಚಕರು ಸೇರಿದಂತೆ ಇಬ್ಬರು ಪ್ಲಾಂಟರ್‍ಗಳ ಬಂಧನವಾಗಿದೆ. ಆದ್ರೆ, ವನ್ಯ ಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ರು ಶಾಖಾದ್ರಿ ಬಂಧನ ಯಾಕಿಲ್ಲ ಅಂತ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಅರಣ್ಯ ಇಲಾಖೆಗೆ ಪ್ರಶ್ನಿಸಿದ್ದಾರೆ. ಶಾಖಾದ್ರಿಯನ್ನ ಬಂಧಿಸಿ ಪುರಾತನ ಕಾಲದಿಂದಲೂ ಇದ್ದ ಹುಲಿ ಚರ್ಮದ ಬಗ್ಗೆ ಮಾಹಿತಿ ಜೊತೆಗೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.
ನಟಿ ಶುಭಾ ಪೂಂಜಾರ ಜೊತೆ ಅಸಭ್ಯ ವರ್ತನೆ ಎನ್ನುವುದು ಸತ್ಯಕ್ಕೆ ದೂರ: ಸ್ಥಳೀಯರ ವಾದ
ಒಂದು ವೇಳೆ ಬಂಧನ ಮಾಡದಿದ್ರೆ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆ, ಹುಲಿ ಉಗುರಿನ ಉರುಳು ಅರ್ಚಕರು, ಕಾಫಿ ಪ್ಲಾಂಟರ್‍ಗಳು, ಡಿ.ಆರ್.ಎಫ್.ಓ.ಗೆ ಬಿದ್ದಿತ್ತು. ಎಲ್ಲರಿಗೂ ಒಂದೊಂದು ರೀತಿಯ ಶಿಕ್ಷೆಯಾಗಿದೆ. ಆದ್ರೆ, ಚಿಂಕೆ-ಹುಲಿ ಚರ್ಮ ಸಿಕ್ಕರೂ ಮುಸ್ಲಿಂ ಧರ್ಮಗುರುವಿಗೆ ಏಕೆ ಶಿಕ್ಷೆ ಇಲ್ಲ. ಅರಣ್ಯ ಇಲಾಕೆ ಒಬ್ಬರಿಗೊಂದು-ಮತ್ತೊಬ್ಬರಿಗೊಂದು ಮಾಡ್ತಿದ್ಯಾ ಎಂಬ ಪ್ರಶ್ನೆ ಮೂಡಿದೆ. ಆತ್ತ ಅರ್ಚಕರು-ಪ್ಲಾಂಟರ್‍ಗಳು ಜೈಲಲಿದ್ದಾರೆ. ಇತ್ತ ಡಿ.ಆರ್.ಎಫ್.ಓ.ಗೆ ಹೈಯರ್ ಆಫಿಸರ್ಸ್ ಡ್ರಿಲ್ ಮಾಡಿಸ್ತಿದ್ದಾರೆ. ಆದ್ರೆ, ಶಾಖಾದ್ರಿಗೇಕೆ ನೋಟಿಸ್. ಬಂಧನ ಯಾಕಿಲ್ಲ ಅನ್ನೋ ಪ್ರಶ್ನೆ ಮೂಡಿದೆ. ಆದ್ರೆ, ವ್ಯಾಘ್ರನ ಉರುಳು ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಹಿಂದೂ ಗುರೂಜಿ, ಮುಸ್ಲಿಂ ಧರ್ಮ ಗುರುವಿಗೂ ಸುತ್ತಿಕೊಂಡಿದ್ದು. ಮುಂದಿನ ದಿನಗಳಲ್ಲಿ ಮತ್ಯಾರ್ಯಾರಿಗೆ ಕಂಟಕವಾಗುತ್ತೋ ಕಾದುನೋಡ್ಬೇಕು.