Asianet Suvarna News Asianet Suvarna News

ನಟಿ ಶುಭಾ ಪೂಂಜಾರ ಜೊತೆ ಅಸಭ್ಯ ವರ್ತನೆ ಎನ್ನುವುದು ಸತ್ಯಕ್ಕೆ ದೂರ: ಸ್ಥಳೀಯರ ವಾದ

ಕೊರಗಜ್ಜದ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಕಿಡಿಗೇಡಿಗಳು ನಟಿ ಶುಭಾ ಪೂಂಜಾರೊಂದಿಗೆ ಅಸಭ್ಯ ವರ್ತನೆ ಮಾಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕು  ಕುದುರೆಮುಖದಲ್ಲಿ ನಡೆದಿದೆ. 

Rude behavior with actress shubha poonja is far from the truth Argument of locals gvd
Author
First Published Oct 28, 2023, 8:14 PM IST | Last Updated Oct 28, 2023, 8:14 PM IST

ವರದಿ: ಆಲ್ದೂರು ಕಿರಣ್, ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಅ.28): ಕೊರಗಜ್ಜದ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಕಿಡಿಗೇಡಿಗಳು ನಟಿ ಶುಭಾ ಪೂಂಜಾರೊಂದಿಗೆ ಅಸಭ್ಯ ವರ್ತನೆ ಮಾಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕು  ಕುದುರೆಮುಖದಲ್ಲಿ ನಡೆದಿದೆ. ಕುದುರೆಮುಖದ ಮೈದಾಡಿ ಗುಡ್ಡದಲ್ಲಿ ಕೊರಗಜ್ಜದ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು ಆ ಹಾಡಿನ ಚಿತ್ರೀಕರಣದ ವೇಳೆ ಕಿಡಿಗೇಡಿಗಳು ಈ  ಕೃತ್ಯ ಎಸಗಿದ್ದಾರೆ. ನಟಿ ಶುಭಾ ಪೂಂಜಾ ಡ್ಯಾನ್ಸ್ ಮಾಡುವ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪು ಕೈ ಹಿಡಿದು ಎಳೆದು ಅಸಭ್ಯ ವರ್ತನೆ ಮಾಡಿದ್ದಾರೆ. 

ಯುವಕರ ಅಸಭ್ಯ ವರ್ತನೆಯಿಂದ ಬೇಸರಗೊಂಡ  ಚಿತ್ರತಂಡ ಹಾಡಿನ ಚಿತ್ರೀಕರಣ ನಿಲ್ಲಿಸಿದ್ದಾರೆ. ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಕೊರಗಜ್ಜ ಚಿತ್ರ ಮೂಡಿಬರುತ್ತಿದೆ.  ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಸುವ ವೇಳೆ ಈ ಘಟನೆ ನಡೆದಿದೆ. ಆದರೆ ಈ ಸಂಬಂಧ ಚಿತ್ರತಂಡ ಈವರೆಗೂ ಪೊಲೀಸರಿಗೆ ದೂರು ನೀಡಿಲ್ಲ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  

ಕೆಲ ಯುವಕರು ಕಿರಿಕ್: ಈ ಕುರಿತು ಪ್ರತಿಕ್ರಿಯಿಸಿರುವ ನಿರ್ದೇಶಕ ಸುಧೀರ್ ಅತ್ತಾವರ ಅವರು ಸಿನಿಮಾ ಚಿತ್ರೀಕರಣದ ವೇಳೆ ಶುಭಾ ಪೂಂಜ ಅವರಿಗೆ ಕೆಲ  ಯುವಕರು ಕಿರಿಕ್ ಮಾಡಿದ್ದು, ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದೆ. ಯಾವುದೋ ಉದ್ದೇಶದಿಂದ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ. ಇದರಿಂದ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು. ಹಾಡಿನ ಚಿತ್ರೀಕರಣಕ್ಕಾಗಿ  50 ಜನ ಕಲಾವಿದರು, ಖ್ಯಾತ ಕೊರಿಯೋಗ್ರಾಫರ್ ಗಣೇಶ ಆಚಾರ್ಯ ಕೂಡ ಇದ್ದರು. ಬಿಜೆಪಿ ಪಕ್ಷದ ಸಾಗರ ಘಟಕವೆಂದು ಹೇಳಿಕೊಂಡು ಕೆಲ ಯುವಕರು ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ತಿಳಿಸಿದರು.

ಮೀನುಬೇಟೆಗೆ ಹೊರಟ ಗೌರಿಶಂಕರ್: ಕುತೂಹಲ ಹೆಚ್ಚಿಸಿದ 'ಕೆರೆಬೇಟೆ' ಮೋಷನ್ ಪೋಸ್ಟರ್

ಸ್ಥಳೀಯರಿಂದ ಕಿರಿಕ್ ಬಗ್ಗೆ ಸ್ಪಷ್ಟನೆ: ಶೂಟಿಂಗ್ ವೇಳೆ ಅಸಭ್ಯ ವರ್ತನೆ ಅರೋಪಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಸ್ಪಷ್ಟನೆ ನೀಡಿದ್ದಾರೆ, ಸ್ಥಳೀಯರಾದ ರವಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಶೂಟಿಂಗ್ ನಡೆಯುತ್ತಿರುವ ಸ್ಥಳಕ್ಕೆ ನಾವು ತೆರೆಳಿದ್ದೆವು. ಆ ಸಮಯದಲ್ಲಿ ನಾವು ಚಿತ್ರ ತಂಡದೊಂದಿಗೆ ಯಾವ ಸಿನಿಮಾ, ಯಾವ ಹಾಡು ಎಂದು ಮಾಹಿತಿ ಕೇಳಿದೆವು. ಅವರು ಆಗ ಕೊರಗಜ್ಜನ ಹಾಡಿನ ಶೂಟಿಂಗ್ ಎಂದರು. ಅಪಾರ ದೈವ ಭಕ್ತಿ ಹೊಂದಿರುವ ನಾವು ಇಲ್ಲಿ ಇಂತಹ ಶೂಟಿಂಗ್ ಮಾಡದಂತೆ ತಿಳಿಸಿದೆವು. ಅವರ ಬಳಿ ಶೂಟಿಂಗ್ ಮಾಡಲು ಅನುಮತಿ ಸಹ ಇರಲ್ಲಿಲ್ಲ. ಶುಭಾ ಪೂಂಜ ಅವರು ಎಲ್ಲಿ ಇದ್ದರು ಎಂಬ ಮಾಹಿತಿಯೇ ನಮಗಿರಲಿಲ್ಲ. ಅವರೊಂದಿಗೆ ಅಸಭ್ಯ ವರ್ತನೆ ಮಾಡಿದ್ದೇವೆ ಎನ್ನುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

Latest Videos
Follow Us:
Download App:
  • android
  • ios