ಕಾಂಗ್ರೆಸ್ ಸರ್ಕಾರ ಮಾಡಿದ ಪಾಪದಿಂದಾಗಿ ಜನ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆಯುತ್ತಿದ್ದಾರೆ. ಸರ್ಕಾರವೇ ಸಾಲ ನೀಡಿದ್ದರೆ ಜನ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಮೈಕ್ರೋ ಫೈನಾನ್ಸ್ ನ ಮೀಟರ್ ಬಡ್ಡಿ ದಂಧೆಯಲ್ಲಿ ರೌಡಿಗಳು ಈವರೆಗೆ ಸುಮ್ಮನಿದ್ದರು. ಸರ್ಕಾರದಿಂದಾಗಿ ರೌಡಿಗಳಿಗೆ ಉದ್ಯೋಗ ಸಿಕ್ಕಿದೆ. ಸರ್ಕಾರ ' ಸಾಲ ನೀಡದ ಕಾರಣ ಜನ ಮೈಕ್ರೋ ಫೈನಾನ್ಸ್ ಗಳ ಮೊರೆ ಹೋಗಿದ್ದಾರೆ ಎಂದ ಆರ್.ಅಶೋಕ್
ಬೆಂಗಳೂರು(ಜ.28): ರಾಜ್ಯ ಸರ್ಕಾರ ಸಾಲ ನೀಡದಿರುವುದರಿಂದ ಜನತೆ ಮೈಕ್ರೋ ಫೈನಾನ್ಸ್ ಮೊರೆ ಹೋಗಿದ್ದು, ಸರ್ಕಾರ ಮಾಡಿದ ಪಾಪದಿಂದ ಜನ ಆತ್ಮಹತ್ಯೆಗೆ ಶರಣಾಗುವಂತಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮಾಡಿದ ಪಾಪದಿಂದಾಗಿ ಜನ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆಯುತ್ತಿದ್ದಾರೆ. ಸರ್ಕಾರವೇ ಸಾಲ ನೀಡಿದ್ದರೆ ಜನ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಮೈಕ್ರೋ ಫೈನಾನ್ಸ್ ನ ಮೀಟರ್ ಬಡ್ಡಿ ದಂಧೆಯಲ್ಲಿ ರೌಡಿಗಳು ಈವರೆಗೆ ಸುಮ್ಮನಿದ್ದರು. ಸರ್ಕಾರದಿಂದಾಗಿ ರೌಡಿಗಳಿಗೆ ಉದ್ಯೋಗ ಸಿಕ್ಕಿದೆ. ಸರ್ಕಾರ ' ಸಾಲ ನೀಡದ ಕಾರಣ ಜನ ಮೈಕ್ರೋ ಫೈನಾನ್ಸ್ ಗಳ ಮೊರೆ ಹೋಗಿದ್ದಾರೆ ಎಂದರು.
ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರಹಾಕಿ ಮನೆ ಸೀಜ್ ಮಾಡಿದ ಮೈಕ್ರೊಫೈನಾನ್ಸ್ ಕಂಪನಿ
ಪ್ರತಿ ಬಜೆಟ್‌ನಲ್ಲೂ ಅನುದಾನ ಶೇ.20 ರಷ್ಟು ಹೆಚ್ಚಾಗಬೇಕು. ಬಿಜೆಪಿ ಸರ್ಕಾರ ಪ್ರತಿ ಇಲಾಖೆಗೆ ನೀಡುತ್ತಿದ್ದ ಅನುದಾನಕ್ಕಿಂತ ಕಾಂಗ್ರೆಸ್ ಸರ್ಕಾರ ಕಡಿಮೆ ಅನುದಾನ ನೀಡುತ್ತಿದೆ. ಅಲ್ಲದೆ, ನಿಗಮ-ಮಂಡಳಿ ಅನುದಾನಕ್ಕೂ ಕತ್ತರಿ ಹಾಕಿದೆ. ಇಲಾಖೆ ಮತ್ತು ನಿಗಮಗಳಿಗೆ ಹಣದ ಕೊರತೆಯಾಗಿದೆ. ಈ ಹಣದಲ್ಲಿ ಜನರಿಗೆ ಸಾಲ ನೀಡಬಹುದಿತ್ತು. ಕೊರತೆಯಾದ ಹಣವನ್ನು ಸಾಲವಾಗಿ ಮೈಕ್ರೋ ಫೈನಾನ್ಸ್‌ಗಳು ನೀಡುತ್ತಿವೆ ಎಂದು ಕಿಡಿಕಾರಿದರು.
ಮೈಕ್ರೋಫೈನಾನ್ಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ
ಮೈಸೂರು: ರಿಜಿಸ್ಟರ್‌ಮೈಕ್ರೋ ಫೈನಾನ್ಸ್ ಗಳು ಆರ್‌ಬಿಐ ಗೈಡ್ ಲೈನ್ ಗೆ ಒಳಪಡುತ್ತದೆ. ರಾಜ್ಯ ಸರ್ಕಾರದ ಇದನ್ನು ಗಮನಿಸಬೇಕು. ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ದ ಸಿಎಂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮಗಳನ್ನ ಜಾರಿಗೆ ತರಬೇಕು. ಪೊಲೀಸರಿಗೆ ಅಧಿಕಾರ ಕೊಟ್ಟು ಅದರಲ್ಲಿ ಭ್ರಷ್ಟಾಚಾರ ಆಗಬಾರದು. ಸಮಿತಿಗೆ ಪ್ರಾಮಾಣಿಕ ಅಧಿಕಾರಿಗಳನ್ನ ನೇಮಿಸಿ ಮಾನಿಟರ್‌ಮಾಡಬೇಕು ಎಂದರು. ಆರ್‌ಬಿಐ ಗೈಡ್ ಲೈನ್ ನಲ್ಲಿ ಎಷ್ಟು ಪರ್ಸಟೇಂಜ್ ಬಡ್ಡಿ ಹಾಕಬೇಕು ಎಂಬುದು ಇದೆ. ಅನ್ ರಿಜಿಸ್ಟರ್ ಫೈನಾನ್ಸ್ ಸಾಕಷ್ಟ ಇದೆ. ಎನ್.ಬಿ.ಎಫ್.ಸಿಯಲ್ಲೂ ಇದಕ್ಕೆ ಪವರ್ ಸಿಗ್ತಿಲ್ಲ. ಹೀಗಾಗಿ, ರಾಜ್ಯ ಸರ್ಕಾರ ಕಟ್ಟು ನಿಟ್ಟಾಗಿ ಕಂಟ್ರೋಲ್ ಮಾಡಬೇಕು. ಇದರಲ್ಲಿ ಭ್ರಷ್ಟಾಚಾರ ಆಗ್ತಿದೆ. ಫೈನಾನ್ಸ್ ಕಂಪನಿಗಳು ಪೊಲೀಸರ ರಕ್ಷಣೆ ಪಡೆದು ತೊಂದರೆ ಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರ ಮೇಲೆ ನಾನು ಆರೋಪ ಮಾಡುವುದಿಲ್ಲ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ, ಈ ರೀತಿಯ ಪ್ರಕರಣಗಳು ಹೆಚ್ಚಾಗಿದೆ ಎಂದು ಅವರು ಹೇಳಿದರು.
ಮೈಕ್ರೋ ಫೈನಾನ್ಸ್ ಕಿರುಕುಳ: ಮತ್ತೆ ಮೂವರು ಆತ್ಮಹತ್ಯೆ
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ರಾಜ್ಯದಲ್ಲಿ ಏನೇ ನಡೆದರು ಹಿಂದಿನ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಹಾಕುತ್ತಾರೆ. ಮಳೆ ಹೆಚ್ಚಾದರು, ಕಡಿಮೆಯಾದ್ರು ಕೇಂದ್ರ ಬಿಜೆಪಿ ಹಾಗೂ ರಾಜ್ಯದ ಬಿಜೆಪಿ ಕಾರಣ ಅಂತಾರೇ. ಈ ಬಾಲಿಷ ಹೇಳಿಕೆಗಳನ್ನ ಕೊಡವುದನ್ನ ಬಿಡಬೇಕು. ಜನರು ಅಧಿಕಾರ ಕೊಟ್ಟಿದ್ದಾರೆ. ಒಳ್ಳೆಯ ಕೆಲಸಗಳನ್ನ ಮಾಡಲಿ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಕುರ್ಚಿ ಜಗಳದಲ್ಲಿ ನಿರತರಾಗಿದ್ದಾರೆ ಎಂದು ಅವರು ಆರೋಪಿಸಿದರು.
ತನಿಖೆಯಿಂದ ತಪ್ಪಿಸಿಕೊಳ್ಳಲು ಯತ್ನ
ಅಧಿಕಾರದಲ್ಲಿ ಸಿದ್ದರಾಮಯ್ಯ ಮುಂದುವರೆದಿರುವುದೇ ಒಂದು ಅನೈತಿಕತೆ ಹಗರಣದಲ್ಲಿ ಏನಾದರೂ ಮಾಡಿ ಸಿಎಂ ತನಿಖೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯಪಾಲರ ಆದೇಶದ ವಿರುದ್ಧವಾಗಿ ಹೈಕೋರ್ಟ್ ಗೆ ಹೋದರು. ಆದರೆ, ರಾಜ್ಯಪಾಲರ ನಡೆಯನ್ನ ಹೈಕೋರ್ಟ್ ತೆಗೆದು ಹಾಕಿಲ್ಲ. ಹೈಕೋರ್ಟ್ ಸಿಎಂ ಪ್ರಕರಣದಲ್ಲಿ ನಿಯಮಗಳನ್ನ ಉಲ್ಲಂಘಿಸಿದ್ದಾರೆಂದು ಹೇಳಿದ ಮೇಲೂ ಅಧಿಕಾರದಲ್ಲಿ ಸಿದ್ದರಾಮಯ್ಯ ಮುಂದುವರೆದಿರುವುದೇ ಒಂದು ಅನೈತಿಕತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
