ಬೆಂಗಳೂರು(ಅ.07): 2015ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಯ ಉತ್ತರ ಪ್ರತಿಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ಅಭ್ಯರ್ಥಿಗಳಿಗೆ ಒದಗಿಸದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಗೆ ಕರ್ನಾಟಕ ಮಾಹಿತಿ ಆಯೋಗ (ಕೆಐಸಿ) ಒಂದು ಲಕ್ಷ ರು.ಗಳ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ದಂಡದ ಮೊತ್ತವನ್ನು ಅರ್ಜಿದಾರರಿಗೆ ಪರಿಹಾರವಾಗಿ ನೀಡಬೇಕು ಎಂದು ಸೂಚಿಸಿದೆ.

ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದ ಬಿ.ಕೆ. ಸುಧನ್ವ ಬಂಡೋಲ್ಕರ್‌ ಎಂಬುವರು 2020ರ ಜ.14ರಂದು ಮೌಲ್ಯಮಾಪನ ಮಾಡಿರುವ ಉತ್ತರ ಪತ್ರಿಕೆಗಳ ದೃಢೀಕೃತ ಪ್ರತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಉತ್ತರ ಪತ್ರಿಕೆ ನೀಡಲು ಕೆಪಿಎಸ್‌ಸಿ ನಿರಾಕರಿಸಿದ ಕಾರಣ ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಕೆಎಎಸ್‌ ಅಧಿಕಾರಿಗಳ 2 ಆಯ್ಕೆ ಪಟ್ಟಿಅಸಿಂಧು

ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತ ಕೆ.ಪಿ. ಮಂಜುನಾಥ್‌, ಕೆಪಿಎಸ್‌ಸಿ ಮಾಹಿತಿ ಅ​ಧಿಕಾರಿ ಶಶಿಕಲಾಗೆ ವಿವರಣೆ ಕೇಳಿ ನೋಟಿಸ್‌ ನೀಡಿದ್ದರು. ವಿಚಾರಣೆಗೂ ಹಾಜರಾಗದೆ ನೋಟಿಸ್‌ಗೆ ವಿವರಣೆಯನ್ನು ಸಲ್ಲಿಸದ ಕಾರಣ ಶಶಿಕಲಾಗೆ 25 ಸಾವಿರ ದಂಡ ವಿ​ಧಿಸಲಾಗಿದೆ.