ಮಂಡಿನೋವಿನಿಂದ ಬಳಲುತ್ತಿದ್ದ ಮಹಿಳಾ ಕ್ರೀಡಾಪಟುವಿಗೆ ಸ್ವತಃ ಶಸ್ತ್ರಚಿಕಿತ್ಸೆ ನಡೆಸಿ ಮಾನವೀಯತೆ ಮೆರೆದ ಶಾಸಕ ಡಾ.ರಂಗನಾಥ್
ಮಂಡಿನೋವಿನಿಂದ ಬಳಲುತ್ತಿದ್ದ ಮಹಿಳಾ ಕ್ರೀಡಾಪಟುವಿಗೆ ಖುದ್ಧು ತಾವೇ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕುಣಿಗಲ್ ಶಾಸಕ ಡಾ.ರಂಗನಾಥ ಮಾನವೀತೆ ಮೆರೆದಿದ್ದಾರೆ.
ತುಮಕೂರು (ಅ.22): ಮಂಡಿನೋವಿನಿಂದ ಬಳಲುತ್ತಿದ್ದ ಮಹಿಳಾ ಕ್ರೀಡಾಪಟುವಿಗೆ ಖುದ್ಧು ತಾವೇ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಕುಣಿಗಲ್ ಶಾಸಕ ಡಾ.ರಂಗನಾಥ ಮಾನವೀತೆ ಮೆರೆದಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿಯಾಗಿರು ರಗ್ಬಿ ಆಟಗಾರ್ತಿ ಭವ್ಯ ಮಂಡಿನೋವಿನಿಂದ ಬಳಲುತ್ತಿದ್ದಳು. ಬಡತನ ಕುಟುಂಬ ಶಸ್ತ್ರಚಿಕಿತ್ಸೆ ಹಣ ಹೊಂದಿಸಲು ಸಂಕಷ್ಟ ಎದುರಿಸುತ್ತಿದ್ದ ಕುಟುಂಬ. ಈ ವಿಷಯ ಶಾಸಕರ ಗಮನಕ್ಕೆ ಬಂದ ಹಿನ್ನೆಲೆ ಮಂಡಿನೋವಿನಿಂದ ಬಳಲುತ್ತಿದ್ದ ಭವ್ಯ ಶಸ್ತ್ರಚಿಕಿತ್ಸೆ ನೀಡಲು ಮುಂದಾದರು.
ಬೆಳಗಾವಿ: ಕಿಡ್ನಿ ಕೊಟ್ಟು ಮಗನ ಉಳಿಸಿಕೊಂಡ ತಾಯಿಗೆ ಆರ್ಥಿಕ ಸಂಕಷ್ಟ, ಮಹಾದಾನಿಗೆ ಬೇಕಿದೆ ಸಹಾಯಹಸ್ತ
ಸ್ವತಃ ಆರ್ಥೋಪಿಡಿಕ್ ಸರ್ಜನ್ (ಮೂಳೆ ತಜ್ಞ) ಆಗಿರುವ ಡಾ.ರಂಗನಾಥ್(Dr Ranganath Orthopedic Surgeon). ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆ ದಾಖಲು ಆಗಲು ಸೂಚಿಸಿದ್ದರು. ಅದರಂತೆ ಆಸ್ಪತ್ರೆಗೆ ದಾಖಲಾದ ಭವ್ಯ. ಸ್ವತಃ ಶಾಸಕ ಡಾ.ರಂಗನಾಥರಿಂದಲೇ ನಡೆದ ಯಶಸ್ವಿ ಶಸ್ತ್ರಚಿಕಿತ್ಸೆ. ಈ ಹಿಂದೆ ತನ್ನ ಕ್ಷೇತ್ರದ ಮೂವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ಶಾಸಕ ರಂಗನಾಥ. ಶಾಸಕರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ.
ಬಡ ಮಹಿಳೆಗೆ ಸ್ವತಃ ಶಾಸಕನಿಂದಲೇ ಶಸ್ತ್ರಚಿಕಿತ್ಸೆ. ಜರ್ಮನಿಯಿಂದ ಕೃತಕ ಕೀಲು ತರಿಸಿ ಸಹಾಯಹಸ್ತ