ತಾಯಿಯ ರಕ್ತದ ಗುಂಪು ಮಗನೊಂದಿಗೆ ಹೊಂದಾಣಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಪೀಡಿಯಾಟ್ರಿಕ್‌ ನೆಫ್ರಾಲಜಿಸ್ಟ್‌ ಡಾ.ಮಹಾಂತೇಶ ವಿ. ಪಾಟೀಲ್‌ ಅವರು ಮಾ.9ರಂದು ತಾಯಿಯ ಮೂತ್ರಪಿಂಡ ಪಡೆದು ಬಾಲಕನಿಗೆ ಯಶಸ್ವಿಯಾಗಿ ಕಸಿ ಚಿಕಿತ್ಸೆ ನೆರವೇರಿಸಿದ್ದರು. 

ಬೆಳಗಾವಿ(ಮಾ.17): ತನ್ನ 15 ವರ್ಷದ ಮಗನ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನ ಮಾಡಿದ ತಾಯಿ ಈಗ ಆರ್ಥಿಕ ನೆರವು ನೀಡುವ ದಾನಿಗಳತ್ತ ಮುಖ ಮಾಡಿದ್ದಾರೆ. ದುಡಿದು ಮಗನನ್ನು ಸಲಹುವ ತಾಯಿಯ ಸಂಕಟಪಡುತ್ತಿದ್ದು, ನೆರವಿಗಾಗಿ ಕೈಚಾಚಿದೆ.

Add Asianetnews Kannada as a Preferred SourcegooglePreferred

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಬಾವಿಯ ಪ್ರಜ್ವಲ್‌ ಮಹಾದೇವ ನಿವಾಲಗಿ 9ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾವಂತ ಬಾಲಕ. ಈತ ಶೋಭಾ- ಮಹಾದೇವ ದಂಪತಿಯ ಏಕೈಕ ಪುತ್ರ. ಶೋಭಾ ಅವರು 2 ತಿಂಗಳ ಗರ್ಭಿಣಿಯಾಗಿದ್ದಾಗ ಪತಿ ಮಹಾದೇವ ನಿವಳಗಿ ಇಹಲೋಕ ತ್ಯಜಿಸಿದ್ದರು. ಮಗನನ್ನು ಸಲಹಲು ಶೋಭಾ ಅವರು ರೈತ ಕೂಲಿಕಾರ್ಮಿಕರಾಗಿ ದುಡಿಯುತ್ತ ಬಂದಿದ್ದರು. ಶಾಲೆಯಲ್ಲಿ ಪ್ರತಿಭಾವಂತ ಎನಿಸಿಕೊಂಡ ಪ್ರಜ್ವಲ್‌ಗೆ 2018ರ ಜುಲೈನಲ್ಲಿ ಮಿರಜ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದಾಗ ಎರಡೂ ಕಿಡ್ನಿಗಳು ವಿಫಲವಾಗಿರುವುದು ಪತ್ತೆಯಾಯಿತು.

Bengaluru: ಕಿಡ್ನಿ ಬೇಕೆಂದ್ರೆ ನಾಲ್ಕು ವರ್ಷ ಕಾಯ್ಬೇಕು! ಚಿಂತಾನಕವಾಗಿದೆ ರೋಗಿಗಳ ಸ್ಥಿತಿ

ಇತ್ತೀಚೆಗೆ ಬಾಲಕನನ್ನು ಡಾ.ಪ್ರಭಾಕರ ಕೋರೆ ಚಾರಿಟಬಲ್‌ ಆಸ್ಪತ್ರೆಯ ಪೀಡಿಯಾಟ್ರಿಕ ನೆಫ್ರಾಲಜಿ ವಿಭಾಗದಲ್ಲಿ ಬಾಲಕನನ್ನು ದಾಖಲಿಸಿ ತಪಾಸಣೆ ನಡೆಸಲಾಯಿತು. ತಾಯಿಯ ರಕ್ತದ ಗುಂಪು ಮಗನೊಂದಿಗೆ ಹೊಂದಾಣಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಪೀಡಿಯಾಟ್ರಿಕ್‌ ನೆಫ್ರಾಲಜಿಸ್ಟ್‌ ಡಾ.ಮಹಾಂತೇಶ ವಿ. ಪಾಟೀಲ್‌ ಅವರು ಮಾ.9ರಂದು ತಾಯಿಯ ಮೂತ್ರಪಿಂಡ ಪಡೆದು ಬಾಲಕನಿಗೆ ಯಶಸ್ವಿಯಾಗಿ ಕಸಿ ಚಿಕಿತ್ಸೆ ನೆರವೇರಿಸಿದ್ದಾರೆ.

ಜೆಎನ್‌ಎಂಸಿ ವೈದ್ಯಕೀಯ ಕಾಲೇಜಿನ ಡಾ.ಮಹಾಂತಶೆಟ್ಟಿ ಅವರ ನೆರವಿನೊಂದಿಗೆ ಪ್ರಭಾಕರ ಕೋರೆ ಚಾರಿಟಬಲ್‌ ಆಸ್ಪತ್ರೆಯಲ್ಲಿ ಉಚಿತ ಹಿಮೋಡಯಾಲಿಸಿಸ್‌, ದುಬಾರಿ ಔಷಧಗಳನ್ನು ನೀಡಲಾಗಿದೆ. ಪೀಡಿಯಾಟ್ರಿಕ್‌ ನೆಫ್ರಾಲಜಿಸ್ಟ್‌ ಡಾ.ಮಹಾಂತೇಶ ವಿ. ಪಾಟೀಲ್‌, ಮೂತ್ರಶಾಸ್ತ್ರಜ್ಞ ಡಾ.ಆರ್‌.ಬಿ.ನೇರ್ಲಿ ಮತ್ತು ಡಾ.ವಿಕ್ರಮಪ್ರಭ, ಅರಿವಳಿಕೆ ತಜ್ಞ ಡಾ.ರಾಜೇಶ್‌ ಮಾನೆ, ನಾಳೀಯ ಶಸ್ತ್ರಚಿಕಿತ್ಸಕ ಡಾ.ರಿಚರ್ಡ್‌ ಸಾಲ್ಡಾನಾ ಅವರ ತಂಡ ಯಶಸ್ವಿ ಕಸಿ ನೆರವೇರಿಸಿದೆ. ಸಧ್ಯ ಬಾಲಕನ ಆರೋಗ್ಯ ಸ್ಥಿರವಾಗಿದೆ. ಆದರೆ ಚಿಕಿತ್ಸೆ, ಔಷಧ ಇತ್ಯಾದಿಗಳಿಗೆ ತಗುಲಿದ ಹೆಚ್ಚಿನ ಸುಮಾರು .5ರಿಂದ 7 ಲಕ್ಷ ಭರಿಸಲು ಶೋಭಾ ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ದಾನಿಗಳು ಈ ತಾಯಿ- ಮಗನಿಗೆ ನೆರವಾಗುವ ಅಗತ್ಯವಿದೆ.

ನೆರವು ನೀಡಲು ಬಯಸುವವರು - ಶೋಭಾ ಮಹಾದೇವ ನಿವಳಗಿ ಅವರನ್ನು (ಮೊ.9611467167) ಸಂಪರ್ಕಿಸಬಹುದು.

ಅವರ ಬ್ಯಾಂಕ್‌ ಡಿಟೇಲ್ಸ್‌:

Mrs SHOBHA MADEVNIVALAGI 
KVGB Bank Acc No: 17217089504
IFSC Code: KVGB0002007