'ಮಠ-ಮಂದಿರ, ಅಭಿವೃದ್ಧಿ ನಿಗಮಗಳಿಗೆ ಕೊಡಲು ಹಣವಿದೆ, ಸಾರಿಗೆ ನೌಕರರಿಗೆ ಹಣವಿಲ್ಲವೇ'?

ಕರ್ನಾಟಕ ರಾಜ್ಯ ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಸುವಂತೆ ಮುಷ್ಕರ ನಡೆಸುತ್ತಿದ್ದಾರೆ. ಇನ್ನು ವಿಚಾರಕ್ಕೆ ಸಂಬಂಧಿಸಿದಂತೆ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

KSRTC Workers Strike Kodihalli chandrashekar Hits out at Karnataka BJP Govt  rbj

ತುಮಕೂರು, (ಏ.07): ಅನ್ಯಾಯ ಪ್ರಶ್ನಿಸಿದ್ದಕ್ಕೆ ಎಸ್ಮಾ ಜಾರಿ ಮಾಡುವುದು ಸರಿಯೇ..? ಎಸ್ಮಾ ಜಾರಿ ಮಾಡಲು ಸಾರಿಗೆ ನೌಕರರು ಯಾವ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬುವುದನ್ನು ಸರ್ಕಾರ ತಿಳಿಸಲಿ ಎಂದು ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.

ಇಂದು (ಬುಧವಾರ) ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಗಳಿಗೆ, ನಿಗಮಗಳನ್ನು ರಚನೆ ಮಾಡಲು, ಅಭಿವೃದ್ಧಿ ಮಂಡಳಿಗಳಿಗೆ ನೀಡಲು ಸರ್ಕಾರದ ಬಳಿ ಹಣವಿದೆ. ಆದರೆ ಬಡ ನೌಕರರಿಗೆ ನಿಡಲು ಹಣವಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

6ನೇ ವೇತನ ಆಯೋಗ ನಿರೀಕ್ಷೆಯಲ್ಲಿದ್ದ ಸಾರಿಗೆ ನೌಕರರಿಗೆ ಬಿಗ್ ಶಾಕ್ ಕೊಟ್ಟ ಸಿಎಂ

6ನೇ ವೇತನ ಆಯೋಗ ಜಾರಿಮಾಡುವಂತೆ ಮೊದಲಿನಿಂದಲೂ ಬೇಡಿಕೆ ಇಟ್ಟಿದ್ದೇವೆ. ಆದರೆ ಸರ್ಕಾರ ಆರ್ಥಿಕ ಸಂಕಷ್ಟದ ನೆಪ ಹೇಳಿ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ. ಈಗ ಮುಷ್ಕರ ನಡೆಸಿದರೆ ಎಸ್ಮಾ ಜಾರಿ ಬೆದರಿಕೆ ಹಾಕಲಾಗುತ್ತಿದೆ. ಈ ರೀತಿ ಹೆದರಿಸಿ ಕಾರ್ಮಿಕರನ್ನು ಅರೆ ಹೊಟ್ಟೆಯಲ್ಲಿ ದುಡಿಸಿಕೊಳ್ಳುವುದು ನ್ಯಾಯವೇ ಎಂದು ಪ್ರಶ್ನಿಸಿದರು.

ಸಾರಿಗೆ ನೌಕರರ ಬೇಡಿಕೆ ಈಡೆರಿಸಲು 700 ಕೋಟಿ ರೂಪಾಯಿ ಬೇಕಾಗುತ್ತದೆ. 700 ಕೋಟಿ ನಷ್ಟವಾಗುತ್ತದೆ ಎಂದು ಮಾತುಕತೆಗೆ ಹೋದಾಗ ಸರ್ಕಾರ ಹೇಳಿದೆ. ಒಂದುವರೆ ಲಕ್ಷ ಬಡ ಕಾರ್ಮಿಕರಿಗೆ ಇಷ್ಟು ಹಣ ನೀಡಿದರೆ ಅದು ನಷ್ಟ ಹೇಗೆ ಆಗುತ್ತದೆ. ನಿಮಗೆ ಬೇಕಾದ ಮಠಗಳಿಗೆ, ಜಾತಿ ಧರ್ಮಗಳಿಗೆ, ನಿಗಮ ಮಂಡಳಿ, ಅಭಿವೃದ್ಧಿ ಮಂಡಳಿಗೆ 500 ಕೊಟಿಗಳಿಗೂ ಹೆಚ್ಚು ಹಣಗಳನ್ನು ಬಿಡುಗಡೆ ಮಾಡುತ್ತಿದ್ದೀರಿ ಅದು ನಿಮಗೆ ನಷ್ಟವೆನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ನೌಕರರ ಮುಷ್ಕರ: ಸರ್ಕಾರಕ್ಕೆ ಮಹತ್ವದ ಸಲಹೆ ಕೊಟ್ಟ ಕುಮಾರಸ್ವಾಮಿ! 

. ದುಡಿಯುವ ಕೈಗಳಿಗೆ, ಸಾರಿಗೆ ನೌಕರರಿಗೆ ಈ ಹಣ ನೀಡಲು ಆಗುವುದಿಲ್ಲ ಎಂದರೆ ಅನ್ಯಾಯವಲ್ಲದೇ ಮತ್ತಿನ್ನೇನು? ನಮಗಾದ ಅನ್ಯಾಯ ಪ್ರಶ್ನಿಸಿದರೆ ಎಸ್ಮಾ ಎಚ್ಚರಿಕೆ ನೀಡುವುದು ಸರಿಯೇ ಎಂದು ತರಾಟೆಗೆ ತೆಗೆದುಕೊಂಡರು.

Latest Videos
Follow Us:
Download App:
  • android
  • ios