ಬೆಂಗಳೂರು, (ಏ.07): ಎಸ್ಮಾ ಜಾರಿ ಸರ್ಕಾರದ ಕೊನೆಯ ಅಸ್ತ್ರವಾಗಬೇಕು. ಆದ್ದರಿಂದ ಸರ್ಕಾರ ತಾಳ್ಮೆಯಿಂದ ಸಾರಿಗೆ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.

ಈ ಹಿಂದೆ ನಡೆದ ಮುಷ್ಕರದ ವೇಳೆ ಸರ್ಕಾರ ನಾಯಕರೊಂದಿಗೆ ಚರ್ಚೆ ನಡೆಸಿತ್ತು. ಆ ವೇಳೆ 6ನೇ ವೇತನ ಆಯೋಗ ಜಾರಿ ಕುರಿತಂತೆ ಮಾತುಕೊಟ್ಟಿದ್ದರು ಎಂದು ನೌಕರರು ಹೇಳುತ್ತಿದ್ದಾರೆ. ಇದರಿಂದ 700 ಕೋಟಿ ರೂಪಾಯಿ ಇಲಾಖೆ ಮೇಲೆ ಹೊರೆಯಾಗುತ್ತದೆ ಎಂದು ಅಧಿಕಾರಿಗಳು ಹೇಳ್ತಿದ್ದಾರೆ. 

ಸರ್ಕಾರ ಸಂಕಷ್ಟದ ಪರಿಸ್ಥಿತಿ ಅಂತ ಹೇಳಿ 72 ಸಾವಿರ ಕೋಟಿ ಸಾಲ ತೆಗೆದುಕೊಳ್ಳುತ್ತಿದೆ. ಇದರಲ್ಲಿ 700 ಕೋಟಿ ರೂಪಾಯಿ ಕಷ್ಟಪಟ್ಟು ದುಡಿಯುವ ನಮಗೆ ಕೊಟ್ಟರೆ ತಪ್ಪಿಲ್ಲ ಎಂಬುವುದು ನೌಕರರ ಮಾತು. ಇದು ದೊಡ್ಡ ವಿಚಾರವಲ್ಲ ಎಂಬುವುದು ಅವರ ವಾದವಾಗಿದೆ ಎಂದರು.

ಬಂದ್ ನಡುವೆ ಬಸ್ ಓಡಿಸಿದ ಡ್ರೈವರ್ ತ್ಯಾಗರಾಜ್‌ಗೆ ಸನ್ಮಾನ

ನನ್ನ ಮಾಹಿತಿಯ ಅನ್ವಯ 700-800 ಕೋಟಿ ರೂಪಾಯಿ ಹೊರೆಯಾಗಬಹುದು. ನೌಕರರನ್ನು ಹೆದರಿಸಿ ತುಂಬಾ ದಿನ ನಡೆಸಲು ಆಗಲ್ಲ. ಇದರಲ್ಲಿ ಯಾವುದೇ ಕುತಂತ್ರವಿದ್ದರೂ ಸರಿ ಪಡಿಸುವುದು ಸರ್ಕಾರ ಕರ್ತವ್ಯ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಕ್ಷಣ ಅವರನ್ನು ಕರೆದು ಬಗೆಹರಿಸಕೊಳ್ಳಬೇಕು ಎಂದು ಸರ್ಕಾರಕ್ಕೆ ಕುಮಾರಸ್ವಾಮಿ ಸಲಹೆ ನೀಡಿದರು.