ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್
- ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್ ನೀಡಿದೆ
- ಕೆಎಸ್ ಆರ್ ಟಿಸಿಯಿಂದ ತಿರುಪತಿ ಪ್ಯಾಕೇಜ್ ಟೂರ್ ಪುನರಾರಂಭ
- ಕೊರೊನಾ ಹಿನ್ನೆಲೆ ಎರಡು ತಿಂಗಳಿಂದ ಸ್ಥಗಿತಗೊಂಡಿದ ತಿರುಪತಿ ಪ್ಯಾಕೇಜ್ ಟೂರ್
ಬೆಂಗಳೂರು (ಜು.13): ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೆಎಸ್ ಆರ್ ಟಿಸಿ ಗುಡ್ ನ್ಯೂಸ್ ನೀಡಿದೆ. ಕೆಎಸ್ ಆರ್ ಟಿಸಿಯಿಂದ ತಿರುಪತಿ ಪ್ಯಾಕೇಜ್ ಟೂರ್ ಪುನರಾರಂಭ ಮಾಡಲಾಗಿದೆ.
ಕೊರೊನಾ ಹಿನ್ನೆಲೆ ಎರಡು ತಿಂಗಳಿಂದ ಸ್ಥಗಿತಗೊಂಡಿದ ತಿರುಪತಿ ಪ್ಯಾಕೇಜ್ ಟೂರ್ ಜುಲೈ 16 ರಿಂದ ಆರಂಭವಾಗಲಿದೆ. ಐರಾವತ ಕ್ಲಬ್ ಕ್ಲಾಸ್ ಬಸ್ ನಲ್ಲಿ ಪ್ರಯಾಣ ಹಾಗೂ ತಿಮ್ಮಪ್ಪನ ದರ್ಶನಕ್ಕೆ ತೆರಳಬಹುದಾಗಿದೆ.
ಕರ್ನಾಟಕದಿಂದ ಕೇರಳಕ್ಕೆ ಬಸ್ ಸೇವೆ ಪುನಾರಂಭ
ವಾರದ ದಿನಗಳಲ್ಲಿ 2,200 ರೂಪಾಯಿ ಹಾಗೂ ವಾರಾಂತ್ಯದ ದಿನಗಳಲ್ಲಿ 2,600 ರೂಪಾಯಿ ಪ್ರಯಾಣ ದರದಲ್ಲಿ ತಿಮ್ಮಪ್ಪನ ದರ್ಶನ ಮಾಡಬಹುದಾಗಿದೆ.
ಕೆಎಸ್ ಆರ್ ಟಿಸಿ ವೆಬ್ ಸೈಟ್ ಮೂಲಕ ತಿರುಪತಿಗೆ ಹೋಗುವವರು ಸೀಟ್ ಬುಕಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
https://ksrtc.in/oprs-web/ ಮೂಲಕ ಪ್ರಯಾಣಿಕರು ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.