ಕೆಎಸ್ಸಾರ್ಟಿಸಿ ಚಾಲಕರಿಗೆ ಇಲ್ಲಿಗೆ ಭರ್ಜರಿ ಗುಡ್ ನ್ಯೂಸ್

ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಚಾಲನಾ ಸಿಬ್ಬಂದಿಗೆ ಈ ಹಿಂದೆ ಸ್ಥಗಿತಗೊಳಿಸಿದ್ದ ಈ ನೆರವು ಮತ್ತೆ ಸಿಗುತ್ತಿದೆ. ಇದರಿಂದ ಚಾಲನಾ ಸಿಬ್ಬಂದಿಗೆ ಸಾಕಷ್ಟು ಅನುಕೂಲವಾಗಲಿದೆ. 

KSRTC Drivers Gets Allowance From feb 1st snr

  ಬೆಂಗಳೂರು (ಫೆ.27):   ಕೊರೋನಾ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಚಾಲನಾ ಸಿಬ್ಬಂದಿಗೆ ಈ ಹಿಂದೆ ಸ್ಥಗಿತಗೊಳಿಸಿದ್ದ ದಿನ ಭತ್ಯೆ ಹಾಗೂ ಬಾಟಾವನ್ನು ಫೆ.1ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ. 

ಈ ಹಿಂದೆ ಕೊರೋನಾ ಹಿನ್ನೆಲೆಯಲ್ಲಿ ಆದಾಯ ಕುಸಿತವಾಗಿ ನಿಗಮ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಲು ಚಾಲನಾ ಸಿಬ್ಬಂದಿಗೆ ನೀಡುತ್ತಿದ್ದ ದಿನ ಭತ್ಯೆ ಹಾಗೂ ಬಾಟಾವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. 

"ನಮ್ಮ ಕಾರ್ಗೋ” ಸೇವೆ ಲೋಕಾರ್ಪಣೆಗೊಳಿಸಿದ ಸಿಎಂ ಯಡಿಯೂರಪ್ಪ

ಇದಕ್ಕೆ ಸಾರಿಗೆ ನೌಕರರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಆರ್ಥಿಕ ಇಲಾಖೆ ಅಭಿಪ್ರಾಯ ಮೇರೆಗೆ ನಿಗಮದ ಸ್ವಂತ ಸಂಪನ್ಮೂಲದಿಂದ ಈ ಭತ್ಯೆ ಹಾಗೂ ಬಾಟಾ ಭರಿಸಲು ನಿಗಮ ನಿರ್ಧರಿಸಿದೆ.

Latest Videos
Follow Us:
Download App:
  • android
  • ios