ಕೆಎಸ್ಆರ್ಟಿಸಿಯ ಈ ಬಸ್‌ಗಳ ಪ್ರಯಾಣ ದರ ಇಳಿಕೆ..!
ಇಷ್ಟು ದಿನ ಮಾಮೂಲಿ ದರಕ್ಕಿಂತ ವಾರಾಂತ್ಯದಲ್ಲಿ ಹೆಚ್ಚಿಸುತ್ತಿದ್ದ ಕೆಎಸ್ಆರ್ಟಿಸಿ ಈಗ ಕಡಿಮೆ ಮಾಡಲು ನಿರ್ಧರಿಸಿದೆ.
ಬೆಂಗಳೂರು, (ಜ.09): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ವಿಧಿಸುತ್ತಿದ್ದ ಹೆಚ್ಚುವರಿ ಪ್ರಯಾಣ ದರವನ್ನು ಇಳಿಕೆ ಮಾಡಿದೆ.
ವೀಕೆಂಡ್ನಲ್ಲಿ ವೋಲ್ವೋ, ಸ್ಲೀಪರ್, ಕ್ಲಬ್ ಕ್ಲಾಸ್ ಬಸ್‌ಗಳ ಪ್ರಯಾಣ ದರವನ್ನು ಶೇ.10ರಷ್ಟು ಹೆಚ್ಚು ಮಾಡಲಾಗಿತ್ತು. ಆದ್ರೆ, ಇದೀಗ ಕೆಎಸ್ಆರ್ಟಿಸಿ ಆ ದರದಲ್ಲಿ ಇಳಿಕೆ ಮಾಡಿದೆ.
KSRTC ಡ್ರೈವರ್‌ಗಳಿಗೆ ಹೊಸ ರೀತಿ ಡ್ಯೂಟಿ..!
ವಾರದ ಅಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುತ್ತಿದ್ದ ಕಾರಣ ಈ ಬಸ್‌ಗಳ ಪ್ರಯಾಣ ದರ ಶುಕ್ರವಾರ ಮತ್ತು ಭಾನುವಾರ ಏರಿಕೆಯಾಗುತ್ತಿತ್ತು.
ಕೊವಿಡ್ ಹಿನ್ನೆಲೆಯಲ್ಲಿ ಐಷಾರಾಮಿ ಬಸ್ಗಳಲ್ಲಿ ಓಡಾಟ ಮಾಡುವವರ ಸಂಖ್ಯೆ ಕಡಿಮೆಯಾದ ಕಾರಣ, ಪ್ರಯಾಣಿಕರನ್ನು ಸೆಳೆಯಲು ಈ ತಂತ್ರ ಅನುಸರಿಸುತ್ತಿದೆ. ಮುಂದಿನ ಶುಕ್ರವಾರ (15-01-2021)ದಿಂದ ಜನವರಿ 31ರವರೆಗೂ ಇದೇ ನಿಯಮ ಅನ್ವಯ ಆಗಲಿದೆ. ವಾರದ ಎಲ್ಲ ದಿನದ ದರವೇ ವೀಕೆಂಡ್ಗೂ ಅನ್ವಯ ಆಗಲಿದೆ.