ಬೆಂಗಳೂರು, (ಮೇ.02): ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸಿ ಕೊಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. 

ಮದ್ಯ ಬೆನ್ನಲ್ಲೇ KSRTC ಬಸ್ ಸಂಚಾರಕ್ಕೂ ಅನುಮತಿ: ಯಾವಾಗಿನಿಂದ..?

ಬೆಂಗಳೂರಿನಲ್ಲಿರುವ ವಲಸೆ ಕಾರ್ಮಿಕರಿಗಾಗಿ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ಕೆಎಸ್‌ಆರ್‌ಟಿಸಿ ಬಸ್‌ಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ. ಆದ್ದರಿಂದ ಊರಿಗೆ ಹೋಗಲು ಪರದಾಡುತ್ತಿರುವ ಕಾರ್ಮಿಕರು ಇದರ ಉಪಯೋಗಪಡೆದುಕೊಳ್ಳಬಹುದು.

ಭಾನುವಾರ (ಮೇ.03) ಬೆಳಗ್ಗೆ 6ಗಂಟೆಯಿಂದ ಸಂಜೆ 6ರ ವರೆಗೆ ಮೆಜೆಸ್ಟಿಕ್‌ನಿಂದ ಬಸ್ಸುಗಳು ಸಂಚರಿಸಲಿದ್ದು, ಕಾರ್ಮಿಕರು ಮೊದಲಿದ್ದ ಟಿಕೇಟ್ ದರವನ್ನು ನೀಡಿ ತಮ್ಮ ಊರುಗಳಿಗೆ ತೆರಳಬಹುದು. ಈ ಬಗ್ಗೆ ಕೆಎಸ್‌ಆರ್‌ಟಿಸಿ ಸಂಸ್ಥೆ ಪ್ರಕಟಿಸಿದೆ.

ಶನಿವಾರ ಮೆಜೆಸ್ಟಿಕ್‌ನಲ್ಲಿ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಯಡವಟ್ಟು ಮಾಡಿಕೊಂಡಿದ್ದು, ಕೊರೋನಾ ಸೋಂಕು ಹರಡುತ್ತಿರುವ ಸಮಯಲ್ಲಿ ಭಾರೀ ಲೋಪಕಂಡುಬಂದಿತ್ತು.

ಇದರಿಂದ ಎಚ್ಚೆತ್ತಿರುವ ಕೆಎಸ್‌ಆರ್‌ಟಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಭಾನುವಾರದಿಂದ ಬಿಎಂಟಿಸಿ ಟರ್ಮಿನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಈ ಬಸ್‌ಗಳು ರೆಡ್ ಝೋನ್ ಹೊರತುಪಡಿಸಿ ಇನ್ನುಳಿದ ಪ್ರದೇಶಗಳಿಗೆ ಸಂಚರಿಸಲಿವೆ.

ಆದ ಕಾರಣ ಕಾರ್ಮಿಕರು ಮೆಜೆಸ್ಟಿಕ್‌ ಬಂದು ಅಲ್ಲಿರುವ ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡು ತಮ್ಮೂರಿಗೆ ತೆರಳಬಹುದು. ಆದ್ರೆ, ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಮಾತ್ರ ಮರೆಯಬೇಡಿ.