Asianet Suvarna News Asianet Suvarna News

ಮದ್ಯ ಬೆನ್ನಲ್ಲೇ KSRTC ಬಸ್ ಸಂಚಾರಕ್ಕೂ ಅನುಮತಿ: ಯಾವಾಗಿನಿಂದ..?

ಮೇ.17ರ ವರೆಗೆ ಲಾಕ್‌ಡೌನ್ ವಿಸ್ತರಿಸಿದರೂ ಸಹ ಕೆಲವುಗಳಿಗೆ ಸಡಿಲಿಕೆ ನೀಡಲಾಗಿದೆ. ಮದ್ಯಕ್ಕೆ ಅನುಮತಿ ಸಿಕ್ಕ ಬೆನ್ನಲ್ಲೇ ಇದೀಗ ಸಾರಿಗೆ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಯಾವಾಗಿನಿಂದ..?

Karnataka Govt Permits To Run KSRTC Bus From May 4th
Author
Bengaluru, First Published May 2, 2020, 2:10 PM IST

ಬೆಂಗಳೂರು, (ಮೇ.02) : ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಲಾಕ್ ಡೌನ್ ಇದ್ದು, ಮೇ.4ರ ಬಳಿಕ ಮತ್ತೆ ಕೆಲ ಸಡಿಲಿಕೆಯೊಂದಿಗೆ ಲಾಕ್ ಡೌನ್ ವಿಸ್ತರಣೆಯಾಗಿದೆ. 

"

ಈ ಹಿನ್ನೆಲೆಯಲ್ಲಿ ಮೇ.4 ರ ಬಳಿಕ ಹಾಟ್ ಸ್ಪಾಟ್ ಗಳಲ್ಲದ ಪ್ರದೇಶಗಳಲ್ಲಿ ಕೆಲ ನಿರ್ಬಂಧಗಳೊಂದಿಗೆ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ.

ರೆಡ್ ಝೋನ್ ವಿಂಗಡಣೆಯಲ್ಲಿ ಗೊಂದಲ: ಕೇಂದ್ರದ ಪ್ರಕಾರ 3, ರಾಜ್ಯದ ಪ್ರಕಾರ 14..!

ಮೇ.4ರರಂದ ಬಸ್ ಸಂಚಾರ
ಹೌದು.. ಈ ಕುರಿತಂತೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಹಿತಿ ನೀಡಿದ್ದು, ಹಾಟ್ ಸ್ಪಾಟ್ ಗಳಲ್ಲದ ಪ್ರದೇಶಗಳಲ್ಲಿ ಆಯಾ ತಾಲೂಕುಗಳಲ್ಲಿ ಸಾರಿಗೆ ಸಂಚರಿಸಲಿವೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ನಿಗದಿಪಡಿಸಿರುವ ಚಟುವಟಿಕೆಗಳಿಗೆ ಆಯಾ ಝೋನ್ ಗಳಲ್ಲಿ ಅವಕಾಶ ನೀಡಲಾಗಿದೆ. ಮೇ. 4ರಿಂದ ಕೊರೋನಾ ಹಾಟ್‌ ಸ್ಪಾಟ್ ಹೊರತುಪಡಿಸಿ ಇನ್ನುಳಿದ ಕಡೆಗಳಲ್ಲಿ ಸಾರಿಗೆ ಬಸ್ ಸಂಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಇನ್ನು ಕಳೆದ 40 ದಿನಗಳ ಲಾಕ್ ಡೌನ್ ನಿಂದಾಗಿ ಸಾರಿಗೆ ಸಂಚಾರವಿಲ್ಲದೇ ಸಾರಿಗೆ ನಿಗಮಗಳು ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಸಾರಿಗೆ ನೌಕರರಿಗೆ ಸಂಬಳ ನೀಡಲು ಕಷ್ಟವಾಗುತ್ತಿದೆ. ಅದಕ್ಕಾಗಿ ಕೊರೊನಾ ಸೋಂಕು ಇಲ್ಲದ ಗ್ರೀನ್ ಝೋನ್, ಆರೆಂಜ್ ಜೋನ್ ಗಳಲ್ಲಿ ಸೀಮಿತ ಪ್ರಮಾಣದಲ್ಲಿ ಸಾರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Follow Us:
Download App:
  • android
  • ios