ವೀಕೆಂಡ್ ಕರ್ಫ್ಯೂ: ಬಸ್ ಸಂಚಾರ ಇರುತ್ತೋ? ಇಲ್ವೋ? ಗೊಂದಲಗಳಿಗೆ ತೆರೆ ಎಳೆದ KSRTC

* ವಾರಾಂತ್ಯ ಕರ್ಫ್ಯೂ ಮಧ್ಯೆ ಬಸ್​ಗಳು ಸಂಚಾರ ಮಾಡುತ್ತವೆಯೋ ಇಲ್ಲವೋ?
* ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಕೆಎಸ್‌ಆರ್‌ಟಿಸಿ
* ಬಗ್ಗೆ ಪ್ರಯಾಣಿಕರಿಗೆ ಅಧಿಕೃತ ಮಾಹಿತಿ ತಿಳಿಸಿದ ಕೆಎಸ್‌ಆರ್‌ಟಿಸಿ 

KSRTC buses operate across Karnataka during weekend curfew rbj

ಬೆಂಗಳೂರು, (ಜೂನ್.25): ಇಂದು (ಜೂನ್.25) ಸಂಜೆಯಿಂದ ಸೋಮವಾರ ಅಂದ್ರೆ ಜೂನ್ 27ರ ಬೆಳಗ್ಗೆ 5ಗಂಟೆ ವರೆಗೆ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. 

ಈ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ಮಾಡುತ್ತವೆಯೋ ಇಲ್ಲವೋ ಎನ್ನುವ ಗೊಂದಲದಲ್ಲಿ ಜನರು ಇದ್ದಾರೆ. ಇದೀಗ  ಗೊಂದಲಕ್ಕೆ ಕೆಎಸ್​ಆರ್​ಟಿಸಿ ತೆರೆ ಎಳೆದಿದೆ.

ರಾಜ್ಯದಲ್ಲಿ 2 ಡೆಲ್ಟಾಪ್ಲಸ್‌ ಕೇಸ್‌ ಪತ್ತೆ, ಇಬ್ಬರೂ ಗುಣ

ಶನಿವಾರ ಹಾಗೂ ಭಾನುವಾರ ವಾರಾಂತ್ಯ ಕರ್ಫ್ಯೂ ನಡುವೆಯೂ ಕೆಎಸ್‌ಆರ್‌ಟಿಸಿ ಬಸ್‌  ಸಂಚರಿಸಲಿವೆ. ಈ  ಕುರಿತು ಕೆಎಸ್‌ಆರ್‌ಟಿಸಿ ಸಾಮಾಜಿ ಜಾಲತಾಣಗಳ ಮೂಕ ಪ್ರಯಾಣಿಕರಿಗೆ ತಿಳಿಸಿದೆ.

ನಾಳೆ ಮತ್ತು ನಾಡಿದ್ದು (ಶನಿವಾರ & ಭಾನುವಾರ) ವಾರಾಂತ್ಯ ಕರ್ಫ್ಯೂ ಇದ್ದಾಗ್ಯೂ ಸಹ  ಕೆ ಎಸ್ ಆರ್ ಟಿ ಸಿ ಬಸ್ಸುಗಳ ಕಾರ್ಯಾಚರಣೆಯು ಇರಲಿದೆ‌. ಕರ್ಫ್ಯೂ ಸಮಯದಲ್ಲಿ ಬಹಳಷ್ಟು ಚಟುವಟಿಕೆಗಳು ನಿಷೇದಿಸಿರುವುದರಿಂದ ಅವಶ್ಯಕತೆಗೆ ತಕ್ಕಂತೆ ಮಾತ್ರ ಬಸ್ ಗಳು ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಸ್ಪಷ್ಟಪಡಿಸಿದೆ.

Latest Videos
Follow Us:
Download App:
  • android
  • ios