Asianet Suvarna News Asianet Suvarna News

Breaking news: ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ, ಉರುಳಿಬಿದ್ದ ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ!

ನಿಯಂತ್ರಣ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಬಸ್ ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಡಿಕ್ಕಿಯಾದ ಘಟನೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಡೆದಿದೆ.

KSRTC bus collision veera senani General Thimmaiah statue destroyed at madikeri rav
Author
First Published Aug 21, 2023, 7:47 AM IST

ಕೊಡಗು (ಆ.21) : ನಿಯಂತ್ರಣ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಬಸ್ ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಡಿಕ್ಕಿಯಾದ ಘಟನೆ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ನಡೆದಿದೆ.

ಬಸ್ ಡಿಕ್ಕಿಯಾದ ರಭಸಕ್ಕೆ ನೆಲಕ್ಕೆ ಉರುಳಿಬಿದ್ದ ವೀರ ಸೇನಾನಿ ಪ್ರತಿಮೆ.ಮಡಿಕೇರಿ ಡಿಪೋದಿಂದ ಬಸ್‌ ನಿಲ್ದಾಣದ ಕಡೆ ಹೊರಟಿದ್ದ ಬಸ್. ಈ ಪಿಕಪ್ ವಾಹನ ಅಡ್ಡಿ. ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡಿರುವ ಚಾಲಕ ಜನರಲ್ ತಿಮ್ಮಯ್ಯ ಪ್ರತಿಮೆಗೆ ಡಿಕ್ಕಿ ಹೊಡೆದು ನಿಂತ ಬಸ್. ಅದೃಷ್ಟವಶಾತ್ ಬಸ್ ನಲ್ಲಿ ಪ್ರಯಾಣಿಕರಿಲ್ಲದ್ದರಿಂದ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕ ಹಾಗೂ ಕರ್ಯನಿರ್ವಾಹಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಬಸ್ ಚಾಲಕ ಕೊಟ್ರೇಶ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದ ಪೊಲೀಸರು. ಬಸ್ ಕೂಡ ಸಂಚಾರಿ ಪೊಲೀಸರ ವಶಕ್ಕೆ.

ಅಪಘಾತ: ಮಹಿಳೆ ದುರ್ಮರಣ

ಕಡೂರು: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಮಹೀಂದ್ರ ಪಿಕಪ್‌ ವಾಹನ ಗುದ್ದಿ ಮಹಿಳೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿಯ ಮಾವುತನಳ್ಳಿಯ ಮಹಿಳೆ ಕಲ್ಲಮ್ಮ ಮೃತಪಟ್ಟವರು. ಕಲ್ಲಮ್ಮನ ಮಗ ಚಂದ್ರಶೇಖರ್‌ ಮತ್ತು ಲವ ಬೈಕಿನಲ್ಲಿ ಕಡೂರು ಕಡೆಯಿಂದ ಬಾಣಾವರ ರಸ್ತೆಯಿಂದ ಹೋಗುತ್ತಿರುವಾಗ ಬಿ.ಎಚ್‌ ರಸ್ತೆಯ ಲಿಂಗ್ಲಾಪುರ ಗೇಟಿನ ಬಳಿ ಹಿಂಬದಿಯಿಂದ ಬಂದ ಮಹೀಂದ್ರ ಪಿಕಪ್‌ ವಾಹನ ಬೈಕಿಗೆ ಗುದ್ದಿದ್ದು ಕಲ್ಲಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗ ಚಂದ್ರಶೇಖರ ಮತ್ತು ಕಲ್ಲಮ್ಮನ ತಂಗಿ ಮಗ ಲವ (11) ಗಂಭೀರ ಗಾಯಗೊಂಡಿದ್ದು, ಅವರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಮಹೇಂದ್ರ ಜೀಪಿನ ಚಾಲಕನ ಮೇಲೆ ಕಡೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios