ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಲ್ಲರೆ ಸಮಸ್ಯೆಗೆ ಮುಕ್ತಿ: ಯುಪಿಐ ಸ್ಕ್ಯಾನ್ ಮಾಡಿ ಟಿಕೆಟ್ ತಗೊಳ್ಳಿ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೂ ಇನ್ನುಮುಂದೆ ಯುಪಿಐ ಸ್ಕ್ಯಾನ್‌ಕೋಡ್ ಅಳವಡಿಕೆ. ನಗದು ಹಾಗೂ ಚಿಲ್ಲರೆ ಸಮಸ್ಯೆ ಇಲ್ಲದೇ ಪ್ರಯಾಣ ಮಾಡಬಹುದು.
ಬೆಂಗಳೂರು (ಸೆ.03): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಕಂಡಕ್ಟರ್‌ಗಳು ಚಿಲ್ಲರೆ ಕೊಡದಿದ್ದಾಗ ಅನೇಕ ಬಾರಿ ಜಗಳ ಮಾಡಿದ ಉದಾಹರಣೆಗಳೂ ಇವೆ. ಆದರೆ, ಈಗ ಸಾರಿಗೆ ಇಲಾಖೆಯಿಂದ ಬಸ್‌ಗಳಲ್ಲಿ ಯುಪಿಐ ಸ್ಕ್ಯಾನ್ ಕೋಡ್ ಮೂಲಕ ಟಿಕೆಟ್ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ, ಇನ್ನುಮುಂದೆ ಟಿಕೆಟ್‌ಗಾಗಿ ನಗದು ಹಣ, ಚಿಲ್ಲರೆ ಇಟ್ಟುಕೊಂಡು ಹೋಗುವ ಅಗತ್ಯವೇ ಇಲ್ಲ. ಆದರೆ, ನಗದು ಹಣವಿಲ್ಲದವರು ಆನ್‌ಲೈನ್ ಪೇಮೆಂಟ್ ಆಪ್ ಹೊಂದಿರಬೇಕು.
ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಟಿಕೆಟ್ ಪಡೆಯಲು ಸಾರಿಗೆ ಇಲಾಖೆ ಇನ್ನಷ್ಟು ಅನುಕೂಲ ಮಾಡಿಕೊಡಲಾಗಿದೆ. ಇನ್ಮುಂದೆ ನಿಮ್ಮ ಮೊಬೈಲ್ ನಲ್ಲಿ UPI ಪೇಮೆಂಟ್ ಅವಕಾಶ ಇದ್ದರೆ ಸಾಕು ಬಸ್‌ನಲ್ಲಿ ಟಿಕೆಟ್ ಪಡೆಯಬಹುದು. UPI ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯಲು ಅವಕಾಶ ನೀಡಲಾಗಿದೆ. ಪ್ರಯೋಗಿಕವಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಆರಂಭ ಮಾಡಲಾಗಿದೆ. ಪೋನ್ ಪೇ, ಗೂಗಲ್ ಪೇ ಸೇರಿದಂತೆ UPI ಮೂಲಕ ಪೇಮೆಂಟ್ ಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೂ ವಿಸ್ತರಿಸಲು ಚಿಂತನೆ ಮಾಡಲಾಗಿದೆ.
ಶಕ್ತಿ ಯೋಜನೆಯ ಉಚಿತ ಬಸ್‌ಗಳನ್ನು ಕಿತ್ತುಕೊಂಡ ಗೃಹಲಕ್ಷ್ಮಿ:ನಾಳೆ ಊರಿಗೆ ಹೋಗೋರಿದ್ರೆ ಕ್ಯಾನ್ಸಲ್ ಮಾಡಿ
- UPI ಪೇಮೆಂಟ್ ನಿಂದಾಗುವ ಅನುಕೂಲಗಳು
- ನಗದು ರಹಿತ ಪಾವತಿ
- ಮೊಬೈಲ್ ನಲ್ಲಿ UPI ಆ್ಯಪ್ ಇದ್ರೆ ಸಾಕು ಬಸ್ ನಲ್ಲಿ ಸಂಚರಿಸಬಹುದು
- ಮೊಬೈಲ್ UPI ಮೂಲಕ ಪೇಮೆಂಟ್ ಮಾಡಿ ಟಿಕೆಟ್ ಪಡೆಯಬಹುದು
- ಚಿಲ್ಲರೆ ಸಮಸ್ಯೆಯಿಂದ ಮುಕ್ತಿ
- ಚಿಲ್ಲರೆ ಇಲ್ಲ ಅನ್ನೋ ಪ್ರಯಾಣಿಕರು ಮತ್ತು ಕಂಡಕ್ಟರ್ ಸಮಸ್ಯೆ ದೂರ
- ಸ್ಟೇಜ್ ಬಂತು ಕಂಡಕ್ಟರ್ ಟಿಕೆಟ್ ನೀಡಿಲ್ಲ ಅನ್ನೋ ಭಯವಿರಲ್ಲ
- ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರಿಗೂ ಸಮಯ ಉಳಿತಾಯ
- ಆದಾಯ ಸೋರಿಕೆ ತಡೆಯುವ ಪ್ಲಾನ್
ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆಗೆ ನಷ್ಟವಾಗಿರುವುದು ನಿಜ:
'ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕೆ ತೊಂದರೆಯಾಗಿರುವುದು ನಿಜ. ಅವರಿಗೆ ಏನಾದರೂ ಪರಿಹಾರ ಕಂಡು ಹಿಡಿಯಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತನಾಡುತ್ತೇನೆ' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್‌ಗೆ ಕರೆ ನೀಡಿರುವ ಬಗ್ಗೆ ಮಾತನಾಡಿದರು.
ರಾಜ್ಯ ಸರ್ಕಾರಕ್ಕೆ ತಲೆನೋವಾದ ಖಾಸಗಿ ಸಾರಿಗೆ ಒಕ್ಕೂಟ; ಸೆಪ್ಟೆಂಬರ್ 11ಕ್ಕೆ ಬೆಂಗಳೂರು ಬಂದ್‌ಗೆ ಕರೆ!
ಖಾಸಗಿ ಬಸ್‌ಗಳಿಗೆ ಯಾರೊಬ್ಬರೂ ಹೋಗುತ್ತಿಲ್ಲ: ಪಾಪ ಖಾಸಗಿ ಸಾರಿಗೆಯವರಿಗೆ ತೊಂದರೆಯಾಗಿರುವುದು ನಿಜ. ಈ ಕುರಿತು ನಮಗೆ ತಿಳಿದಿದೆ. ಶಕ್ತಿ ಯೋಜನೆ ಜಾರಿಯಿಂದ ಖಾಸಗಿ ಬಸ್ಸುಗಳಿಗೆ ಯಾರೂ ಹೋಗುತ್ತಿಲ್ಲ. ಅವರ ಸಮಸ್ಯೆಗೆ ಪರಿಹಾರ ನೀಡಲು ಉಪಾಯ ಹುಡುಕಬೇಕಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಮಟ್ಟದಲ್ಲಿ ಚರ್ಚಿಸುತ್ತೇನೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಸುಗಳೇ ಇಲ್ಲ. ಕೇವಲ ಖಾಸಗಿ ಬಸ್ಸುಗಳು ಮಾತ್ರ ಇವೆ. ಅಂತಹ ಕಡೆ ಜನರಿಗೆ ಸಮಸ್ಯೆಯಾಗಬಾರದು. ಜತೆ ಖಾಸಗಿಯವರಿಗೂ ಸಮಸ್ಯೆಯಾಗಬಹುದು. ಆ ರೀತಿ ಏನಾದರೂ ಉಪಾಯ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.