ಶಕ್ತಿ ಯೋಜನೆಯ ಉಚಿತ ಬಸ್‌ಗಳನ್ನು ಕಿತ್ತುಕೊಂಡ ಗೃಹಲಕ್ಷ್ಮಿ:ನಾಳೆ ಊರಿಗೆ ಹೋಗೋರಿದ್ರೆ ಕ್ಯಾನ್ಸಲ್ ಮಾಡಿ
ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯ 2000 ಬಸ್‌ಗಳನ್ನು ಬುಕಿಂಗ್ ಮಾಡಲಾಗಿದ್ದು, ನಾಳೆ ಸಾರಿಗೆ ಬಸ್‌ಗಳ ಕೊರತೆ ಉಂಟಾಗಲಿದೆ.
ಬೆಂಗಳೂರು (ಆ.29): ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ ಅಧಿಕಾರಕ್ಕೆ ಬಮದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಮೊಟ್ಟ ಮೊದಲ ಯೋಜನೆಯಾದ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ನಾಳೆ (ಆ.30 ಬುಧವಾರ) ನಾಲ್ಕನೇ ಗ್ಯಾರಂಟಿಯಾದ ಗೃಹಲಕ್ಷ್ಮಿ ಯೋಜನೆಯನ್ನು (ಮಹಿಳೆಯರಿಗೆ ಮಾಸಿಕ 2000 ರೂ. ಧನ ಸಹಾಯ) ಜಾರಿಗೊಳಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಬುಕ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರಿಗೆ ಬಸ್‌ಗಳು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಆದ್ದರಿಂದ ನಾಳೆ ಬೇರೆ ಊರುಗಳಿಗೆ ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದರೆ, ಕೂಡಲೇ ಅವುಗಳನ್ನು ಕೂಬಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಾರಣ ನಾಳೆ ನೀವು ಹೋಗಬೇಕಾದ ಜಾಗಕ್ಕೆ ಸರಿಯಾದ ಸಮಯಕ್ಕೆ ಹೋಗೋದು ಡೌಟ್ ಎಂದೇ ಹೇಳಬಹುದು. ನೀವು ಹೋಗೋ ಸಮಯಕ್ಕೆ ಸರಿಯಾಗಿ ನಾಳೆ ಬಸ್ ಗಳು ಸಿಗೋದಿಲ್ಲ. ಇದಕ್ಕೆ ಕಾರಣ ಸರ್ಕಾರದಿಂದ ಗೃಹಲಕ್ಷ್ಮೀ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಜನರನ್ನ ಕರೆದೊಯ್ಯಲು ಸಾವಿರಾರು ಸಾರಿಗೆ ಬಸ್ ಗಳನ್ನ ಬುಕ್ ಮಾಡಲಾಗಿದೆ.
ಗೃಹಲಕ್ಷ್ಮಿಗೆ ಅರ್ಜಿ ಹಾಕಿದ 15 ಲಕ್ಷ ಮಹಿಳೆಯರು 2000 ರೂ. ಪಡೆಯಲು ಅರ್ಹರಲ್ಲ: ತಿದ್ದುಪಡಿಗೆ ಇಲ್ಲಿದೆ ಮಾಹಿತಿ
ರಾತ್ರಿಯಿಂದಲೇ ಬಸ್‌ಗಳು ಲಭ್ಯವಿಲ್ಲ: ಆದ್ದರಿಂದ ರಾಜ್ಯದ ಬೇರೆ ಜಿಲ್ಲೆಗಳಿಂದ ಮೈಸೂರಿನಲ್ಲಿ ನಡೆಯುವ ಗೃಹಲಕ್ಷ್ಮೀ ಯೋಜನೆಗಾಗಿ ಕಾರ್ಯಕ್ರಮಕ್ಕೆ ಸಾವಿರಕ್ಕೂ ಹೆಚ್ಚು ಸಾರಿಗೆ ಬಸ್ ಗಳ ಬಳಕೆ ಮಾಡಲಾಗುತ್ತಿದ್ದು, ಬಸ್‌ಗಳ ಮೂಲಕ ಮಹಿಳಾ ಫಲಾನುಭವಿಗಳನ್ನು ಅಲ್ಲಿಗೆ ಕರೆದೊಯ್ಯಲಾಗುತ್ತಿದೆ. ಸಾರಿಗೆ ಬಸ್‌ಗಳು ಬೆಳಗ್ಗೆಯೇ ಕೆಲವೊಂದು ಜಿಲ್ಲೆಗಳಿಂದ ರಾತ್ರಿ ವೇಳೆಯೇ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಜನರನ್ನ ಕರೆದೊಯ್ಯಲಿವೆ. ಆದ್ದರಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಈಶಾನ್ಯ ಕರ್ನಾಟಕ, ವಾಯುವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ನಿಗಮಗಳಿಂದ 2 ಸಾವಿರಕ್ಕೂ ಹೆಚ್ಚು ಬಸ್ ಗಳ ವ್ಯವಸ್ಥೆ ಮಾಡಲಾಗುತ್ತಿದೆ.
Bengaluru ಅಪ್ಪ ಇಂಜಿನಿಯರ್, ಅಮ್ಮ ಟೀಚರ್: ಮಗಳು ಶಾಲೆಗೆ ಹೋಗದೇ 12ನೇ ಫ್ಲೋರ್‌ನಿಂದ ಬಿದ್ದು ಸತ್ತಳು
ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿನ ಬಸ್ ಸಮಸ್ಯೆ: ಬಿಎಂಟಿಸಿ ಯಿಂದ 200ಕ್ಕೂ ಹೆಚ್ಚು ಬಸ್ ಗಳು, ಕೆಎಸ್‌ಆರ್‌ಟಿಸಿಯ ಎಲ್ಲ ನಿಗಮಗಳಿಂದ 1,800ಕ್ಕೂ ಹೆಚ್ಚು ಬಸ್‌ಗಳು ಮೈಸೂರಿನತ್ತ ಪ್ರಯಾಣ ಮಾಡಲಿದ್ದಾವೆ. ಅದರಲ್ಲಿಯೂ ಎಲ್ಲ ಬಸ್‌ಗಳು ಬುಕಿಂಗ್ ಆಗಿದ್ದು, ಸಾಮಾನ್ಯ ಪ್ರಯಾಣಿಕರಿಗೆ ಈ ಬಸ್‌ಗಳಲ್ಲಿ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ. ಬೆಂಗಳೂರು, ಮಂಡ್ಯ, ತುಮಕೂರು, ಚಾಮರಾಜನಗರ, ಮೈಸೂರು, ಮಡಿಕೇರಿ, ಹಾಸನ, ಕೋಲಾರ, ಸೇರಿದಂತೆ ಅನೇಕ ಜಿಲ್ಲೆಗಳಿಂದ ಹೆಚ್ಚು ಬಸ್ ಗಳು ಮೈಸೂರಿನತ್ತ ಪಯಣ ಬೆಳೆಸಲಿವೆ. ಆದ್ದರಿಂದ ನಾಳೆ, ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳ ಜನರು ದೂರದ ಊರಿಗೆ ಹೋಗಬೇಕು ಎಂದು ಆಲೋಚನೆ ಮಾಡಿದ್ದರೆ ಅದನ್ನು ಮುಂದೂಡಿಕೆ ಮಾಡುವುದು ಅನುಕೂಲ ಆಗಿದೆ. ಇನ್ನು ತುರ್ತು ಕಾರಣದಿಂದ ಹೋಗಬೇಕಾದಲ್ಲಿ ಖಾಸಗಿ ವಾಹನ ಬಳಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.