ಬೆಂಗಳೂರು(ಜೂ.10): ನೌಕರರರು, ಅಧಿಕಾರಿಗಳಿಗೆ ಅನ್ವಯವಾಗುವಂತೆ ಸ್ವಯಂ ನಿವೃತ್ತಿ ಯೋಜನೆಯನ್ನ  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಜಾರಿಗೆ ತಂದಿದೆ. 

ಸದರಿ ನಿವೃತ್ತಿ ಯೋಜನೆಯ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಸಿಬ್ಬಂದಿಗಳ ಅರ್ಜಿಗಳನ್ನು ಪರಿಶೀಲಿಸಿ ಸ್ವಯಂ ನಿವೃತ್ತಿಗೆ ಶಿಫಾರಸ್ಸು ಮಾಡಲು ಕೇಂದ್ರ ಕಚೇರಿ ಮಟ್ಟದಲ್ಲಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಸುತ್ತೋಲೆ ಅನ್ವಯ ರಚಿಸಿ ಆದೇಶ ಹೊರಡಿಸಿದೆ. 

ಲಾಕ್‌ಡೌನ್‌ ಎಫೆಕ್ಟ್‌: KSRTCಗೆ ಭಾರೀ ನಷ್ಟ, ಸಿಬ್ಬಂದಿ ವೇತನಕ್ಕೂ ಹಣದ ಕೊರತೆ..!

ಮಾಹಾಮಾರಿ ಕೊರೋನಾ ವೈರಸ್‌ ದೇಶಾದ್ಯಂತ ವ್ಯಾಪಕವಾಗಿ ಹರಡಿತ್ತಿದೆ. ಹೀಗಾಗಿ ಸಂಸ್ಥೆಯ ನೌಕರರ ಹಿತದೃಷ್ಟಿಯಿಂದ ಸ್ವಯಂ ನಿವೃತ್ತಿ ಯೋಜನೆಯಡಿ ಅರ್ಜಿಗಳನ್ನ ಪರಿಶೀಲಿಸಿ ಅಂಗೀಕರಿಸಲು ಸಮಿತಿಯನ್ನ ಪುನರ್‌ ರಚಿಸಲಾಗಿದೆ. 

ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಎಲ್ಲ ವರ್ಗದ ನೌಕರರು, ಅಧಿಕಾರಿಗಳಿಗೆ ಅನ್ವಯವಾಗುವಂತೆ ಆಕರ್ಷಣೀಯ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯ ಮೂಲಕ ಸ್ವಯಂ ನಿವೃತ್ತಿ ಪಡೆಯಲು ಇಚ್ಚಿಸಿದ ಸಿಬ್ಬಂದಿ ನಿವೃತ್ತಿ ಪಡೆಯಬಹುದಾಗಿದೆ, ನಿವೃತ್ತಿಗೆ ಅರ್ಜಿವ ಹಾಕುವ ಸಿಬ್ಬಂದಿಯ ಅರ್ಜಿಗಳನ್ನು ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳಲಾಗುತ್ತಿತ್ತು. ಅದರೆ, ಊಗ ಕೊರೋನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಯಲ್ಲಿ ಹಾಗೂ ಆಡಳಿತಾತ್ಮಕ ಹಾಗೂ ಸಿಬ್ಬಂದಿಯ ಅರೋಗ್ಯದ ದೃಷ್ಟಿಯಿಂದ ಸಾರಿಗೆ ನಿಗಮ ಸಮಿತಿಯನ್ನ ಪುನರ್‌ ರಚನೆ ಮಾಡಿದೆ.