KS Eswarappa criticizes priyank kharge: ಹಾಸನಾಂಬ ದೇವಿಯ ದರ್ಶನದ ಬಳಿಕ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಆರ್‌ಎಸ್‌ಎಸ್ ನಿಷೇಧಿಸಲು ಪ್ರಿಯಾಂಕ್‌ ಖರ್ಗೆಯಿಂದ ಸಾಧ್ಯವಿಲ್ಲ.. ಗಾಂಧಿ ಕುಟುಂಬದಿಂದಲೇ ಇದು ಸಾಧ್ಯವಾಗಿಲ್ಲ. ಟೀಕೆ ಮುಂದುವರಿಸಿದರೆ ಜನರು ಬೀದಿಗಿಳಿಯುತ್ತಾರೆ ಎಚ್ಚರ.

ಹಾಸನ (ಅ.21): ಮಾಜಿ ಪ್ರಧಾನಿಗಳಾದ ಜವಹಾರ್‌ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಸೇರಿ ಯಾರಿಂದಲೂ ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಾಗಲಿಲ್ಲ. ಇನ್ನೂ ಸಚಿವ ಪ್ರಿಯಾಂಕ್‌ ಖರ್ಗೆ ಕುನ್ನಿ, ಅವರಿಂದಲೂ ಬ್ಯಾನ್ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಿಯಾಂಕ್‌ ಹಾಗೂ ಹರಿಪ್ರಸಾದ್ ಅವರು ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಿದರೆ ಹೀರೋ ಆಗ್ತೀನಿ ಅಂದುಕೊಂಡಿದ್ದಾರೆ. ಆದರೆ, ವಿಲನ್ ಆಗುತ್ತಿದ್ದಾರೆ. ಆರ್‌ಎಸ್‌ಎಸ್ ಸೂರ್ಯನಂತೆ ಬೆಳಗುತ್ತಿದ್ದು, ಸೂರ್ಯನಿಗೆ ಉಗಿದರೆ ಉಗುಳು ಅವರ ಮೈಮೇಲೆ ಬೀಳುತ್ತದೆ ಎಂದರು.

ಗಾಂಧಿ ಹತ್ಯೆಗೂ ಆರೆಸ್ಸೆಸ್‌ಗೂ ಸಂಬಂಧವಿಲ್ಲ:

ಆರ್‌ಎಸ್‌ಎಸ್ ಯಾರನ್ನೂ ಮತಾಂತರ ಮಾಡಲು ಹೋಗಿಲ್ಲ. ಹಿಂದೂ ಧರ್ಮವನ್ನು ಉಳಿಸಲು ಮತ್ತು ಭಾರತೀಯ ಸಂಸ್ಕೃತಿಯನ್ನು ವಿಶ್ವಮಟ್ಟಕ್ಕೆ ತಲುಪಿಸಲು ಶ್ರಮಿಸುತ್ತಿದೆ. ಗಾಂಧಿ ಹತ್ಯೆಗೂ ಆರ್‌ಎಸ್‌ಎಸ್‌ಗೆ ಯಾವುದೇ ಸಂಬಂಧವಿಲ್ಲ. ಆ ವಿಚಾರವನ್ನು ಕೇವಲ ರಾಜಕೀಯ ಪ್ರಯೋಜನಕ್ಕಾಗಿ ಕೆಲವರು ಎಳೆದುಕೊಂಡು ಬರುತ್ತಿದ್ದಾರೆ. ಇವರು ಇದೇ ರೀತಿ ಟೀಕೆ ಮುಂದುವರಿಸಿದರೆ ಜನರು ಬೀದಿಗಿಳಿದು ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.

ಗಾಂಧಿ ಕುಟುಂಬದಿಂದಲೇ ಆರೆಸ್ಸಸ್ ನಿಷೇಧಿಸಲಾಗಿಲ್ಲ:

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ನೀಡಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಈಶ್ವರಪ್ಪ ಅವರು, ಚಿತ್ತಾಪುರದಲ್ಲಿ ನವೆಂಬರ್‌ 2ರಂದು ಬೃಹತ್‌ ಪಥಸಂಚಲನ ನಡೆಯಲಿದೆ ಎಂದರು.