ಕಾವೇರಿ ಜಲಾಶಯದಲ್ಲಿ ಪ್ರಸ್ತುತ 35 ಟಿಎಂಸಿ ನೀರು ಸಂಗ್ರಹವಾಗಿದ್ದು, ಬೆಂಗಳೂರಿಗೆ ಮುಂದಿನ ವರ್ಷ ಬೇಸಿಗೆಯವರೆಗೂ ಕುಡಿಯುವ ನೀರಿಗೆ ಆತಂಕವಿಲ್ಲ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ಬೆಂಗಳೂರು (ಆ.01): ಕಾವೇರಿ ನದಿಯ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯದಲ್ಲಿ ಪ್ರಸ್ತುತ 35 ಟಿಎಂಸಿ ನೀರು ಸಂಗ್ರಹವಾಗಿದ್ದು, ಬೆಂಗಳೂರಿಗೆ ಮುಂದಿನ ವರ್ಷ ಬೇಸಿಗೆಯವರೆಗೂ ಕುಡಿಯುವ ನೀರಿಗೆ ಆತಂಕವಿಲ್ಲ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 1.3 ಕೋಟಿ ಜನರು ವಾಸವಿದ್ದು, ಕಾವೇರಿ ನದಿಯಿಂದ ಬೆಂಗಳೂರಿನ ಜನತೆಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೆ, ಕಳೆದ ಜುಲೈ ತಿಂಗಳ ಆರಂಭದಲ್ಲಿ ಕೆಆರ್‌ಎಸ್‌ ಜಲಾಶಯದ ನೀರಿನ ಸಾಮರ್ಥ್ಯ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ನೀರಿನ ಕುಡಿಯುವ ನೀರಿನ ಆತಂಕ ಎದುರಾಗಿತ್ತು. ಆದರೆ, ಜುಲೈ ತಿಂಗಳ ಮೂರನೇ ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದ್ದು, ಬೆಂಗಳೂರಿಗೆ ಕುಡಿಯುವ ನೀರಿನ ಆತಂಕವೂ ದೂರವಾಗಿದೆ ಎಂದು ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ತಿಳಿಸಿದೆ.

ಕನ್ನಡ ನಾಡಿನ ಜೀವನದಿ ಕಾವೇರಿ.. ಕೆಆರ್‌ಎಸ್‌ ಜಲಾಶಯ ಬಹುತೇಕ ಭರ್ತಿ

ಬೆಂಗಳೂರು ಜನತೆಗೆ ಬಿಗ್ ರಿಲೀಫ್: ಹೌದು, ಈ ಮೂಲಕ ರಾಜಧಾನಿ ಬೆಂಗಳೂರು ಜನತೆಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನೀರು ಪೂರೈಕೆ ಇನ್ಮೇಲೆ ಬೆಂಗಳೂರು ಜಲಮಂಡಳಿಗೆ ಸುಗಮವಾಗಲಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ದೂರವಾಗಿದ್ದು, ಮುಂದಿನ ಬೇಸಿಗೆಯವರೆಗೂ ಕಾವೇರಿ ಕುಡಿಯುವ ನೀರು ಪೂರೈಕೆಗೆ ಸಮಸ್ಸಯೆ ಆಗುವುದಿಲ್ಲ. ಕಾವೇರಿ ಜಲಾಶಯ ತುಂಬಿದ ಹಿನ್ನಲೆ ಮುಂದಿನ ಬೇಸಿಗೆಯವರೆಗೂ ಸಮಸ್ಯೆ ಇಲ್ಲದೆ ಮನೆ ಮನೆಗೂ ಕಾವೇರಿ ನೀರು ಸಿಗಲಿದೆ ಎಂದು ಜಲಮಂಡಳಿ ತಿಳಿಸಿದೆ.

ಕೆಆರ್ ಎಸ್ ನಲ್ಲಿ 35 ಟಿಎಂಸಿ ನೀರು: ಜೂನ್ ನಲ್ಲಿ ಮಳೆಯಾಗದ ಕಾರಣ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಕುಸಿದಿತ್ತು. ಇದರಿಂದ ಜೂನ್ ನಲ್ಲಿ ಮಳೆಯಾಗದ ಕಾರಣ ಕುಡಿಯುವ ನೀರನ್ನು ಮಿತವ್ಯಯ ವಾಗಿ ಬಳಸುವಂತೆ ಬಿಡಬ್ಲ್ಯೂಎಸ್‌ಎಸ್‌ಬಿ ತನ್ನ ಗ್ರಾಹಕರಿಗೆ ಮನವಿ ಮಾಡಿತ್ತು. ಆದರೆ, ಜುಲೈ ಎರಡನೇ ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಕಾವೇರಿ ನದಿ ತುಂಬಿ ಹರಿದಿದೆ. ಈಗ ಕೆಆರ್ ಎಸ್ ನಲ್ಲಿ 35 ಟಿಎಂಸಿ ನೀರು ಲಭ್ಯವಿದೆ. ಸದ್ಯ ಇರುವ ನೀರು ಮುಂದಿನ ವರ್ಷದವರೆಗೂ ಕುಡಿಯುವ ನೀರು ಪೂರೈಕೆ ಮಾಡುವುದಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ತಿಳಿದುಬಂದಿದೆ.

ಕೆಎಂಎಫ್‌ನ ನಂದಿನಿ ಬ್ರ್ಯಾಂಡ್‌ಗೆ ಪುನೀತ್‌ ಬಳಿಕ ಶಿವ ರಾಜ್‌ಕುಮಾರ್‌ ರಾಯಭಾರಿ

ಬೆಂಗಳೂರಿಗರ ಪ್ರತಿ ತಿಂಗಳು 1.5 ಟಿಎಂಸಿ ನೀರು ಬೇಕು: ಇನ್ನು ಬೆಂಗಳೂರಿಗೆ ಪ್ರತಿ ತಿಂಗಳು 1.5 ಟಿಎಂಸಿ ನೀರು ಅಗತ್ಯವಿದೆ. ಈಗ ಕಾವೇರಿ ನದಿಯ ಕೆಆರ್‌ಎಸ್‌ ಜಲಾಶಯದಲ್ಲಿರುವ ನೀರನ್ನು ಸುಗಮವಾಗಿ ಹಾಗೂ ಸಂಪೂರ್ಣವಾಗಿ ಜನರಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗಲದೆ. ಜೊತೆಗೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಇದೀಗ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಆದ್ದರಿಂದ ಬೆಂಗಳೂರಿನ ಜನ ಆತಂಕ ಪಡೋ ಅಗತ್ಯ ಇಲ್ಲ ಎಂದ ಬೆಂಗಳೂರು ಜಲಮಂಡಳಿ ತಿಳಿಸಿದೆ. ಆದರೆ, ನೀರು ಅತ್ಯಮೂಲ್ಯವಾಗಿದ್ದು, ವೃಥಾ ಪೋಲು ಮಾಡದೇ ಅಗತ್ಯವಿದ್ದಷ್ಟೇ ಬಳಕೆ ಮಾಡುವುದು ಎಲ್ಲರ ಜವಾಬ್ದಾರಿ ಆಗಿದೆ.