Asianet Suvarna News Asianet Suvarna News

ಕೆಪಿಟಿಸಿಎಲ್‌ ನೌಕರರ ಇಂದಿನ ಮುಷ್ಕರ ರದ್ದು

  • ವಿದ್ಯುತ್‌ ಉತ್ಪಾದನೆ ಮತ್ತು ವಿತರಣೆ ಪ್ರಕ್ರಿಯೆಯನ್ನು ಖಾಸಗಿಯವರಿಗೆ ನೀಡುವುದಕ್ಕೆ ವಿರೋಧ
  • ವಿದ್ಯುಚ್ಛಕ್ತಿ ಕಾಯಿದೆ 2003ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ ಕರಡು ಮಸೂದೆ ಸಿದ್ದಪಡಿಸಿರುವ ಕ್ರಮ ಖಂಡನೆ
  • ಆಗಸ್ಟ್‌ 10ರಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘ ಕರೆ ನೀಡಿದ್ದ ‘ಕರ್ತವ್ಯ ಬಹಿಷ್ಕಾರ’ ನಿರ್ಧಾರ ವಾಪಸ್
KPTCL employees Strike call off snr
Author
Bengaluru, First Published Aug 10, 2021, 7:12 AM IST
  • Facebook
  • Twitter
  • Whatsapp

 ಬೆಂಗಳೂರು (ಆ.10):  ವಿದ್ಯುತ್‌ ಉತ್ಪಾದನೆ ಮತ್ತು ವಿತರಣೆ ಪ್ರಕ್ರಿಯೆಯನ್ನು ಖಾಸಗಿಯವರಿಗೆ ನೀಡುವ ವಿದ್ಯುಚ್ಛಕ್ತಿ ಕಾಯಿದೆ 2003ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ ಕರಡು ಮಸೂದೆ ಸಿದ್ದಪಡಿಸಿರುವ ಕ್ರಮ ಖಂಡಿಸಿ ಆಗಸ್ಟ್‌ 10ರಂದು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘ ಕರೆ ನೀಡಿದ್ದ ‘ಕರ್ತವ್ಯ ಬಹಿಷ್ಕಾರ’ ನಿರ್ಧಾರವನ್ನು ಹಿಂಪಡೆಯಲಾಗಿದೆ.

ಈ ಸಂಬಂಧ ಕನ್ನಡಪ್ರಭದೊಂದಿಗೆ ಮಾತನಾಡಿದ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನೌಕರರ ಸಂಘದ ಅಧ್ಯಕ್ಷ ಟಿ.ಆರ್‌.ರಾಮಕೃಷ್ಣ, ಕರ್ತವ್ಯ ಬಹಿಷ್ಕರಿಸುವ ನಿಧಾರಕ್ಕೆ ಸಂಬಂಧ ಕೇಂದ್ರ ಸಚಿವರು, ಲೋಕಸಭೆಯ ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಲಾಗಿದೆ. ರೈತರು ಮತ್ತು ವಿದ್ಯುತ್‌ ಪ್ರಸರಣ ನಿಗಮ ನೌಕರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಖಾಸಗೀಕರಣ ಯತ್ನ: ಕೆಪಿಟಿಸಿಎಲ್‌ನಲ್ಲಿ ಎಸ್ಕಾಂಗಳ ವಿಲೀನ ಇಲ್ಲ

ಅಲ್ಲದೆ, ತಿದ್ದುಪಡಿ ಕಾಯಿದೆಯ ಕರಡು ಮಸೂದೆ ಮಂಡನೆಗೆ ಮಂಗಳವಾರ ನಿಗದಿಯಾಗಿತ್ತು. ಆದರೆ, ಮಂಗಳವಾರದ ಕಾರ್ಯಸೂಚಿಯಲ್ಲಿ ಈ ವಿಚಾರ ಪ್ರಸ್ತಾಪವಾಗಿಲ್ಲ. ಹೀಗಾಗಿ ಕರ್ತವ್ಯ ಬಹಿಷ್ಕಾರ ನಿರ್ಧಾರವನ್ನು ಹಿಂಪಡೆಯಲಾಗಿದೆ ಎಂದು ಅವರು ವಿವರಿಸಿದರು.

Follow Us:
Download App:
  • android
  • ios