KPSC ಮರು ಪರೀಕ್ಷೆಯಲ್ಲೂ ಮತ್ತೆ ಯಡವಟ್ಟು: ಪರೀಕ್ಷಾರ್ಥಿಗಳು ಆಕ್ರೋಶ

ವಿಜಯಪುರದಲ್ಲಿ ನಡೆದ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಓಎಂಆರ್ ಶೀಟ್ ಮತ್ತು ನೋಂದಣಿ ಸಂಖ್ಯೆಯಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಾರೆ. ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಉಂಟಾದ ಈ ಲೋಪದಿಂದಾಗಿ ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮರು ಪರೀಕ್ಷೆಗೆ ಒತ್ತಾಯಿಸಿದ್ದಾರೆ.

KPSC Exam Blunder KAS OMR Sheets Registration Number Mismatch candidates outraged at vijayapur rav

-ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಡಿ.29)
: ಕಳೆದ ಅಗಷ್ಟ 27 ರಂದು ನಡೆದ ಕೆಪಿಎಸ್ ಸಿ ಪರಿಕ್ಷೆಯಲ್ಲಿ ಕನ್ನಡ ಭಾಷ್ಯಾಂತರದ ಪ್ರಶ್ನೆಗಳಿಗೆ ಲೋಪ‌ದೋಷದ ಕಾರಣ ಪರಿಕ್ಷಾಥಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದರು. ಸರ್ಕಾರ ಇದನ್ನು ಮನಗಂಡು ಇಂದು ಮತ್ತೊಮ್ಮೆ ಪರಿಕ್ಷೆ ನಡೆಸಲು ಕೆ ಪಿ ಎಸ್ ಸಿ ಮುಂದಾಗಿತ್ತು. ಇದರ ಮಧ್ಯೆ ಇಂದು ನಡೆದ ಪೂರ್ವ ಭಾವಿ ಪರಿಕ್ಷೆಯಲ್ಲಿ ಮತ್ತೊಮ್ಮೆ ಯಡವಟ್ಟು ಆದ ಕಾರಣ ಕೆಲ ವಿದ್ಯಾರ್ಥಿಗಳು ಪರಿಕ್ಷೆ ಬಹಿಷ್ಕರಿಸಿ ಮನೆಗೆ ಹೋಗಿದ್ದಾರೆ. 

ಪರೀಕ್ಷೆ ಓಎಂಆರ್ ಸಂಖ್ಯೆಯೆ ಅದಲು ಬದಲು!

ಹೌದು ಇಂದು ವಿಜಯಪುರ ಜಿಲ್ಲೆಯ ಒಟ್ಟು 32 ಪರಿಕ್ಷಾ ಕೇಂದ್ರದಲ್ಲಿ 12,741 ವಿದ್ಯಾರ್ಥಿಗಳು ಇಂದು ಕೆಪಿಎಸ್ಸಿ  ಪರಿಕ್ಷೆಗೆ ಹಾಜರಾಗಿದ್ದರು. ಆದರೆ ಜಿಲ್ಲೆಯ ನಾಲ್ಕು ಪರಿಕ್ಷಾ ಕೇಂದ್ರದಲ್ಲಿ ಯಡವಟ್ಟು ಉಂಟಾಯಿತು. ನಗರದ ಸಿಕ್ಯಾಬ್ ಸಂಸ್ಥೆಯ ಎರಡು ಪರಿಕ್ಷಾ ಕೇಂದ್ರ, ಮರಾಠಾ ವಿದ್ಯಾಲಯ ಪರಿಕ್ಷಾ ಕೇಂದ್ರ ಹಾಗೂ ವಿಕಾಸ ವಿದ್ಯಾಲಯದ ಪರಿಕ್ಷಾ ಕೇಂದ್ರದಲ್ಲಿ ಯಡವಟ್ಟು ಉಂಟಾಗಿದೆ. ವಿದ್ಯಾರ್ಥಿಗಳ ಒಎಂಅರ್ ಸೀಟು ಹಾಗೂ ನೊಂದಣಿ ಸಂಖ್ಯೆ ಅದಲು ಬದಲಾಗಿ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕಾರ ಹಾಕಿ ಹೊರ ನಡೆದರು. 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಸಂಪೂರ್ಣ ಅರಾಜಕತೆ ಉಂಟಾಗಿದೆ: ಸಂಸದ ಜಗದೀಶ್ ಶೆಟ್ಟರ್

ಸ್ಥಳಕ್ಕೆ ಸಿಇಓ, ಅಪರ ಜಿಲ್ಲಾಧಿಕಾರಿ ಭೇಟಿ!

ವಿಜಯಪುರ ನಗರದ ಸಿಕ್ಯಾಬ್  ಶಾಲೆಯಲ್ಲಿ ಪರಿಕ್ಷೆ ಸಮಸ್ಯೆ ಆದ ಕಾರಣ ವಿದ್ಯಾರ್ಥಿಗಳು ಹೊರ ಬಂದು ಪ್ರತಿಭಟನೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಹಾಗೂ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪರಿಕ್ಷಾರ್ಥಿಗಳಿಗೆ ಮನ ಒಲಿಸಿ ಪರಿಕ್ಷೆ ಬರೆಯುವಂತೆ ಸೂಚಿಸಿದರು.  ಅಧಿಕಾರಿಗಳ ಮಾತಿಗೆ ಒಪ್ಪಿದ ಪರಿಕ್ಷಾರ್ಥಿಗಳು ನಗರದ ಸಿಕ್ಯಾಬ್ ಹಾಗೂ ಮರಾಠಾ ವಿದ್ಯಾಲಯದ ಪರಿಕ್ಷಾ ಕೇಂದ್ರ ವಿದ್ಯಾರ್ಥಿಗಳು ಪರಿಕ್ಷೆ ಬರೆದರು...

ಪರೀಕ್ಷೆ ಬಹಿಷ್ಕಾರಿಸಿದ ಪರೀಕ್ಷಾರ್ಥಿಗಳು!

ಇನ್ನೂ ವಿಜಯಪುರ ನಗರದ ವಿಕಾಸ ಪ್ರೌಢ ಶಾಲೆಯಲ್ಲಿ 240 ಪರಿಕ್ಷಾರ್ಥಿಗಳು ಪರಿಕ್ಷೆ ಬರೆಯುತ್ತಿದ್ದರು ಆದರೆ ಇದರಲ್ಲಿ 10 ರಿಂದ 15 ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಹೊರ ನಡೆದ ಘಟನೆಯೂ ನಡೆದಿದೆ..

ಕೆಪಿಎಸ್‌ಸಿ ಸದಸ್ಯರ ಭೇಟಿ ; ಪರೀಕ್ಷಾರ್ಥಿಗಳಿಂದ ತರಾಟೆ!

ಈ ಸಂದರ್ಭದಲ್ಲಿ ನಗರದ ವಿಕಾಸ ಪ್ರೌಡಶಾಲೆಯ ಪರಿಕ್ಷಾ ಕೇಂದ್ರಕ್ಕೆ ಕೆಪಿಎಸ್ ಸಿ ಸದಸ್ಯ ಎಂ ಬಿ ಹೆಗ್ಗಣ್ಣನವರ ಅವರು ಭೇಟಿ ನೀಡಿ ಪರಿಕ್ಷಾರ್ಥಿಗಳ ಮನ ಒಲಕೆಗೆ ಯತ್ನ ನಡೆಸಿದರು. ಆದರೆ ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕಾರ ಮಾಡಿ ಹೊರ ನಡೆದು ಕೆಪಿಎಸ್ ಸಿ ವಿರುದ್ದ ಪರಿಕ್ಷಾರ್ಥಿಗಳು ಆಕ್ರೋಶ ಹೊರ ಹಾಕಿದರು. ಈ ವೇಳೆ ಪದೇ ಪದೇ ಕೆಪಿಎಸ್‌ಸಿ ಯಡವಟ್ಟಿಗೆ ಸದಸ್ಯ ಎಂ ಬಿ ಹೆಗ್ಗಣ್ಣವರ್ ರಿಗೆ ಪರೀಕ್ಷಾರ್ಥಿಗಳು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು.

ದಲಿತರಿಗೆ ಕಾಂಗ್ರೆಸ್ ಕೊಟ್ಟ ಕೊಡಗೆ ಎಂದರೆ ಅಂಬೇಡ್ಕರ್‌ಗೆ ಅವಮಾನಿಸಿದ್ದು ಚುನಾವಣೇಲಿ ಕುತಂತ್ರದಿಂದ ಸೋಲಿಸಿದ್ದು: ಸಂಸದ ಜಿಗಜಿಣಗಿ

ಮತ್ತೆ ಮರು ಪರೀಕ್ಷೆಗೆ ಒತ್ತಾಯ!

ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪರಿಕ್ಷಾರ್ಥಿಗಳು ಮರು ಪರಿಕ್ಷೆ ನಡೆಸಿ ನಮಗೆ ನ್ಯಾಯ ಕೊಡಿಸಿ ಎಂದರು. ಆದರೆ ಕೆಲವರು ಕಾನೂನು ಹೋರಾಟ ಮಾಡುವದಾಗಿ ಹೇಳಿದರು. ಒಟ್ಟಿನಲ್ಲಿ ಕೆಪಿಎಸ್ ಸಿ ಯಲ್ಲಿ ಯಡವಟ್ಟುಗಳು, ಹಗರಣ ಮೇಲಿಂದ ಮೇಲೆ ನಡೆಯುತ್ತಿದ್ದರು ಸರ್ಕಾರ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಮೌನ ವಹಿಸಿರುವದು ನಿಜಕ್ಕೂ ಸೋಚನೀಯ ಸಂಗತಿಯಾಗಿದೆ. ಇಂದಿನ‌ ಯಡವಟ್ಟಿನ ಕುರಿತು ಮುಂಬರುವ ದಿನಗಳಲ್ಲಿ ಕೆ ಎಸ್ ಎಸ್ ಸಿ ಯಿಂದ ಯಾವ ಕ್ರಮ ಕೈಗೊಳ್ಳತ್ತಾರಾ ಕಾದುನೋಡಬೇಕಿದೆ..

Latest Videos
Follow Us:
Download App:
  • android
  • ios