Asianet Suvarna News Asianet Suvarna News

ಯಡಿಯೂರಪ್ಪನವರ ಈ ಒಂದು ಮಾತಿಗೆ ಚಂದ್ರಶೇಖರ್ ಕೆಂಡಾಮಂಡಲ

ಧರಣಿ ನಿರತ ಸಾರಿಗೆ ನೌಕರರಿಗೆ ವೇತನ ನೀಡುವುದಿಲ್ಲ ಎನ್ನುವ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Kodihalli chandrashekar Hits out at CM Yediyurappa rbj
Author
Bengaluru, First Published Apr 13, 2021, 6:54 PM IST

ಬೆಂಗಳೂರು, (ಏ.13): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ನೌಕರರು ತಿಂಗಳುಗಳ ಕಾಲ ಸತ್ಯಾಗ್ರಹ ಮಾಡಿದರೂ ನಾವು ಬಗ್ಗುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿರುವುದು ದೌರ್ಜನ್ಯದ ಪರಮಾವಧಿ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ವಾಗ್ದಾಳಿ ನಡೆಸಿದ್ದಾರೆ.

ಇಂದು (ಮಂಗಳವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರಿಗೆ ಯುಗಾದಿ‌ ಹಬ್ಬದ ಸಂಭ್ರಮ ಇಲ್ಲದಂತಾಗಿದೆ. ಸರ್ಕಾರ ನೌಕರರಿಗೆ ವೇತನ ನೀಡದೇ ಸತಾಯಿಸುತ್ತಿದೆ. ವೇತನ ನೀಡುವುದೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದು ಸರಿಯಲ್ಲ ಕಿಡಿಕಾರಿದರು.

ಮುಷ್ಕರ: ಸಾರಿಗೆ ನೌಕರರಿಗೆ ಸಿಎಂ ಬಿಎಸ್ ಯಡಿಯೂರಪ್ಪ ಖಡಕ್ ಮಾತು

ಮಾರ್ಚ್​ ತಿಂಗಳ ವೇತನ ನೀಡಿಲ್ಲ ಎಂದು ಡಿಪೋ ಮ್ಯಾನೇಜರ್​‌ ವಿರುದ್ಧ ಪೊಲೀಸ್​ ಠಾಣೆಗಳಿಗೆ ದೂರು ನೀಡಲಾಗುತ್ತದೆ. ಸಾರಿಗೆ ನೌಕರ ತಿಪ್ಪೇಸ್ವಾಮಿ ಮೊದಲ ದೂರನ್ನ ನೀಡಲಿದ್ದಾರೆ. ಅದೇ ರೀತಿ ರಾಜ್ಯದೆಲ್ಲೆಡೆ ದೂರು ನೀಡಲಾಗುತ್ತದೆ ಎಂದ ಹೇಳಿದರು.

ಸಾರಿಗೆ ಬಸ್​ಗಳನ್ನ ಬಲವಂತದಿಂದ ಓಡಿಸಲಾಗುತ್ತಿದೆ. ಖಾಸಗಿ ವಾಹನ, ಚಾಲಕರ ಮೂಲಕ ಬಸ್​ ಓಡಿಸುವುದು ಸಕ್ಸಸ್​ ಆಗುವುದಿಲ್ಲ. ಈ ರೀತಿ ಎಷ್ಟೇ ಪ್ರಯತ್ನ ಮಾಡಿದ್ರೂ ಅದು ಸಫಲವಾಗುವುದಿಲ್ಲ. ದಂಡಿಸುವ ದಿಕ್ಕಿನಡಿ ಸರ್ಕಾರ ಮುಂದಾಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು,

ಸಿಎಂ ಇನ್ನೊಮ್ಮೆ ಈ ಬಗ್ಗೆ ಪರಿಶೀಲಿಸಲಿ. 6ನೇ ವೇತನ ನಮ್ಮ ಬೇಡಿಕೆಯೇ ಆಗಿದ್ದಲ್ಲ, ಸರ್ಕಾರ ನೀಡಿದ ವಾಗ್ಧಾನವಿದು. ಆಗ ವಾಗ್ಧಾನ ನೀಡಿ ಈಗ ಮೊಂಡುವಾದ ಮಾಡೋದು ಸರಿಯಲ್ಲ. ನ್ಯಾಯವಾದ ದಾರಿಯಲ್ಲಿ‌ ಬರಬೇಕು ಎಂದರು.

Follow Us:
Download App:
  • android
  • ios