ಕಳಪೆ ರಸ್ತೆ ಕಾಮಗಾರಿ ವೀಕ್ಷಣೆಗೆ ಬಂದ ಎಂಜಿನಿಯರ್ ಗೆ ಕಲ್ಲು ಹೊಡೆದ ಗ್ರಾಮಸ್ಥರು!
ಕಳಪೆ ರಸ್ತೆ ಕಾಮಗಾರಿ ಆರೋಪ ಮಾಡಿದ್ದ ಗ್ರಾಮಕ್ಕೆ ಪರಿಶೀಲನೆಗೆ ತೆರಳಿದ್ದ ಅಧಿಕಾರಿ ಮೇಲೆಯೇ ಗ್ರಾಮಸ್ಥರು ಹಲ್ಲೆ ನಡೆಸಿರೋ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜು.11): ರಸ್ತೆ ಕಾಮಗಾರಿಗಳು ಅಂದ್ಮೇಲೆ ಕಳಪೆ, ಗುಣಮಟ್ಟದ ಕೆಲಸ ಆಗೋದು ಸರ್ವೆ ಸಾಮಾನ್ಯ. ಆದ್ರೆ ಕಳಪೆ ರಸ್ತೆ ಕಾಮಗಾರಿ ಆರೋಪ ಮಾಡಿದ್ದ ಗ್ರಾಮಕ್ಕೆ ಪರಿಶೀಲನೆಗೆ ತೆರಳಿದ್ದ ಅಧಿಕಾರಿ ಮೇಲೆಯೇ ಗ್ರಾಮಸ್ಥರು ಹಲ್ಲೆ ನಡೆಸಿರೋ ಘಟನೆ ಕಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಅಸಿಸ್ಟೆಂಟ್ ಇಂಜಿನಿಯರ್ ನಾಗರಾಜ್ ಇಂದು ದೊಡ್ಡ ಸಿದ್ದವನಹಳ್ಳಿ ಪಂಚಾಯತಿ ವ್ಯಾಪ್ತಿಯ ಕಸವನಹಳ್ಳಿ ಗ್ರಾಮದ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುದನ್ನು ಪರಿಶೀಲನೆ ಮಾಡುವ ವೇಳೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿ ತಲೆಗೆ ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಗಾಯಳು ನಾಗರಾಜ್, ಕಸವನಹಳ್ಳಿಯ ಮಾಜಿ ಅಧ್ಯಕ್ಷ ವೀರ ಕರಿಯಪ್ಪ ಮತ್ತು ಸಂಗಡಿಗರ ಗುಂಪು ರಸ್ತೆ ಗುಣಮಟ್ಟ ಸರಿ ಇಲ್ಲ ಎಂದು ಪ್ರಶ್ನೆ ಮಾಡಿದರು. ಯೋಜನೆಗೆ ಅನುಗುಣವಾಗಿ ಗುಣಮಟ್ಟದ ರಸ್ತೆ ಮಡುತ್ತೇವೆ ಎಂದು ಹೇಳಿದೆನು, ಗುಂಪಿನಲ್ಲಿ ಯಾರೋ ಒಬ್ಬರು ನನ್ನ ತಲೆಗೆ ಕಲ್ಲಿಂದ ಹೊಡೆದಿದ್ದಾರೆ. ನ್ಯಾಯ ಕೇಳೋದು ತಪ್ಪಲ್ಲ ಆದ್ರೆ ಈ ರೀತಿ ಹಲ್ಲೆ ಮಾಡಿದ್ದು ತಪ್ಪು ಎಂದು ಘಟನೆಯ ಕುರಿತು ತಿಳಿಸಿದ್ದಾರೆ.
ಎರಡನೇ ಮದುವೆ ಕಾನೂನು ಬಾಹಿರವಾಗಿದ್ರೂ ಜೀವನಾಂಶ ಪಡೆಯಲು ಪತ್ನಿ, ಮಕ್ಕಳು ಅರ್ಹ
ಇನ್ನೂ ಈ ಘಟನೆ ನಡೆದ ತಕ್ಷಣ ಅಲರ್ಟ್ ಆಗಿರುವ ಪೊಲೀಸರು ಆಸ್ಪತ್ರೆಗೆ ಧಾವಿಸಿ ಗಾಯಳುವಿನಿಂದ ಮಾಹಿತಿ ಪಡೆದು ಚಿತ್ರದುರ್ಗ ಗ್ರಾಂಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ಕಾರ್ಯ ನಿರತ ಸಿಬ್ಬಂದಿಯ ಹಲ್ಲೆಯನ್ನು ಸರ್ಕಾರಿ ಚಿತ್ರದುರ್ಗ ಜಿಲ್ಲಾ ಸರಕಾರಿ ನೌಕರ ಸಂಘ ಖಂಡಿಸಿದ್ದು ಕೂಡಲೇ ಹಲ್ಲೆ ಮಾಡಿದವರನ್ನು ಖಂಡಿಸಬೇಕು ಎಂದು ಒತ್ತಾಯಿಸಿದೆ. ಅಲ್ಲದೆ ಹಲ್ಲೆಗೊಳಗಾದ ನಾಗರಾಜ್ ಅವರ ಹೆಂಡತಿ, ಡ್ಯೂಟಿ ಮೇಲೆ ಹೊರಗಡೆ ಹೋಗಿರುತ್ತಾರೆ. ಈ ರೀತಿ ಜೀವ ಹೋಗುವ ರೀತಿ ಹಲ್ಲೆ ಮಾಡಿದ್ರೆ ನಮ್ಮ ಕುಟುಂಬಕ್ಕೆ ಯಾರ್ ಗತಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಅಗ್ರಹಿಸಿದರು.
Microsoft Lays Off: ಮತ್ತೆ ಉದ್ಯೋಗ ಕಡಿತಗೊಳಿಸಿದ ಮೈಕ್ರೋಸಾಫ್ಟ್, ಸಿಇಓ ವಿರುದ್ಧ
ಒಟ್ಟಾರೆಯಾಗಿ ಈ ಘಟನೆ ಸರ್ಕಾರಿ ಸಿಬ್ಬಂದಿಗಳಿಗೆ ಭದ್ರತೆ ಇಲ್ಲದಂತಾಗಿದೆ ಎಂಬುದನ್ನು ಸುಚಿಸುತ್ತಿದ್ದು, ಹಲ್ಲೆಗೆ ನಿಜವಾದ ಕಾರಣ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿ ಗಾಯಳು ಎಂಜಿನಿಯರ್ ನಾಗರಾಜ್ ಗೆ ರಕ್ಷಣೆ ಮತ್ತು ನ್ಯಾಯವನ್ನು ಪೊಲೀಸ್ ಇಲಾಖೆ ಒದಗಿಸಬೇಕಿದೆ.