ಅಪಘಾತ ಸ್ಥಳ ನಿಧನವಾಗಿ ಚಲಿಸಿ, ಮುಂದೆ ತಿರುವು ಇದೆ ನಿಧಾನ, ಅವಸರವೇ ಅಪಘಾತಕ್ಕೆ ಕಾರಣ ಸೇರಿದಂತೆ ರಸ್ತೆ ಬದಿಯಲ್ಲಿ ಸೈನ್ ಬೋರ್ಡ್‌ಗಳನ್ನು ನೀವು ನೋಡಿರುತ್ತೀರಿ. ಆದರೆ ಕೊಡಗಿನಲ್ಲಿ ತುರ್ತು ಅಪಘಾತ ಮಾಡಿ ಅನ್ನೋ ಬೋರ್ಡ್ ಕೂಡ ಹಾಕಲಾಗಿತ್ತು. ಈ ಸೈನ್ ಬೋರ್ಡ್ ವೈರಲ್ ಆದ ಬೆನ್ನಲ್ಲೇ ಬದಲಾಯಿಸಲಾಗಿದೆ.   

ಮಡಿಕೇರಿ(ಜು.10) ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳಲ್ಲಿ ಸೈನ್ ಬೋರ್ಡ್ ಹಾಕಲಾಗುತ್ತದೆ. ತಿರುವು, ಇಳಿಜಾರು, ಕಡಿದಾದ ರಸ್ತೆ ಸೇರಿದಂತೆ ವಾಹನ ಸವಾರರಿಗೆ ಸ್ಪಷ್ಟ ಮಾಹಿತಿ ನೀಡುವ ಮೂಲಕ ಅವಘಡಗಳನ್ನು ತಪ್ಪಿಸಲಾಗುತ್ತದೆ. ಈ ಪೈಕಿ ಅವಸರವೇ ಅಪಘಾತಕ್ಕೆ ಕಾರಣ, ನಿಧಾನವಾಗಿ ಚಲಿಸಿ ಮುಂದೆ ತಿರುವು ಇದೆ, ರಸ್ತೆ ಕಿರಿದಾಗುತ್ತಿದೆ ಸೇರಿದಂತೆ ಹಲವು ಸೂಚನಾ ಫಲಕ ನೀವು ನೋಡಿರುತ್ತೀರಿ. ಆದರೆ ಕೊಡಗಿನಲ್ಲಿ ತುರ್ತು ಅಪಘಾತ ಮಾಡಿ ಅನ್ನೋ ಸೂಚನಾ ಫಲಕವನ್ನು ಅಳವಡಿಸಲಾಗಿತ್ತು. ಈ ಸೂಚನಾ ಫಲಕ ಭಾರಿ ವೈರಲ್ ಆಗಿ ಮುಖಭಂಗ ಅನುಭವಿಸುತ್ತಿದ್ದಂತೆ ಇಲಾಖೆ ಬದಲಾಯಿಸಿ ಹೊಸ ಫಲಕ ಅಳವಡಿಸಿದೆ.

ಇಂಗ್ಲೀಷ್‌ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲೀಷ್‌ಗೆ ಭಾಷಾಂತರಿಸುವ ವೇಳೆ ನಡೆದಿರುವ ಹಲವು ಎಡವಟ್ಟುಗಳ ಸೂಚನಾ ಫಲಕ, ಹೆಸರು, ವಿಳಾಸಗಳು ನಗೆಪಾಟಲಿಗೀಡಾಗಿದೆ. ಈ ಪೈಕಿ ಕೊಡಗಿನಲ್ಲಿ ಅಳವಡಿಸಿದ್ದ ರಸ್ತೆ ಸೂಚನಾ ಫಲಕ ಭಾರಿ ವೈರಲ್ ಆಗಿತ್ತು. ಮಡಿಕೇರಿ ಕೊಡಗು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಬಳಿ ಈ ಸೂಚನಾ ಫಲಕ ಅಳವಡಿಸಲಾಗಿತ್ತು.

ಜುಲೈ ತಿಂಗಳ ಆರಂಭದಲ್ಲೇ ತುಂಬಿ ಹರಿದ ಮಿನಿ ನಯಾಗರ ಖ್ಯಾತಿಯ ಚಿಕ್ಲಿಹೊಳೆ ಜಲಾಶಯ

ಕರ್ನಾಟಕ ಸರ್ಕಾರ ರಾಷ್ಟ್ರೀಯ ಹೆದ್ದಾರಿ ವಿಭಾಗ ಮಂಗಳೂರು ಇಲಾಖೆಯ ಈ ಸೂಚನಾ ಫಲಕದಲ್ಲಿ ಕನ್ನಡದಲ್ಲಿ ಅವಸರವೇ ಅಪಘಾತಕ್ಕೆ ಕಾರಣ ಎಂದು ಬರೆಯಲಾಗಿದೆ. ಆದರೆ ಇಂಗ್ಲೀಷ್‌ಗೆ ಭಾಷಾಂತರಿಸುವ ವೇಳೆ ಅರ್ಜೆಂಟ್ ಮೇಕ್ ಆ್ಯನ್ ಆಕ್ಸಿಡೆಂಟ್( ತುರ್ತು ಅಪಘಾತ ಮಾಡಿ) ಎಂದು ಬರೆಯಲಾಗಿದೆ. 

 

Scroll to load tweet…

 

ಈ ಕುರಿತು ಸ್ಥಳೀಯ ಮಾಧ್ಯಮಗಳು, ಕೊಡಗು ಜಿಲ್ಲೆಯ ಸೋಶಿಯಲ್ ಮೀಡಿಯಾ ಖಾತೆಗಳು ಸೂಚನಾ ಫಲಕದ ಫೋಟೋ ಹಂಚಿಕೊಂಡಿತ್ತು. ಈ ಫೋಟೋ ಭಾರಿ ವೈರಲ್ ಆಗಿತ್ತು. ಹಲವರು ಈ ಫೋಟೋಗೆ ಕಮೆಂಟ್ ಮಾಡಿದ್ದರು. ಇದಕ್ಕಿಂತ ಗೂಗಲ್ ಟ್ರಾನ್ಸಲೇಶನ್ ಮಾಡಬಹುದಿತ್ತು ಎಂದು ಸೂಚಿಸಿದ್ದರು. ಈ ರೀತಿ ಭಾಷಾಂತರ ಮಾಡಿ ಆಭಾಸ ಮಾಡಿ ನಗೆಪಾಟಲೀಗಾಡುವುದಕ್ಕಿಂತ ಕನ್ನಡದಲ್ಲೇ ಬರೆದರೆ ಸಾಕು ಎಂದು ಹಲವರು ಸಲಹೆ ನೀಡಿದ್ದರು. 

'ಸೆಕ್ಸ್ ಮಸಾಜ್‌ಗೆ ಕುಶಾಲನಗರದ ಹುಡುಗಿ ಬೇಕಾ?' ಎಂದು ವಂಚಿಸುತ್ತಿದ್ದ ಹಾಸನ ಜಿಲ್ಲೆಯ ಖತರ್ನಾಕ್ ಗ್ಯಾಂಗ್ ಅಂದರ್!

ಈ ಫೋಟೋ ಭಾರಿ ವೈರಲ್ ಆಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಳಿಕ ಈ ಬೋರ್ಡ್ ಬದಲಾಯಿಸಿದ್ದಾರೆ. ಇದೀಗ ಸ್ಪೀಡ್ ಥ್ರಿಲ್ಸ್ ಬಟ್ ಕಿಲ್ಸ್ ಎಂದು ಬರೆದಿರುವ ಬೋರ್ಡ್ ಹಾಕಲಾಗಿದೆ. ಅಧಿಕಾರಿಗಳ ಎಡವಟ್ಟಿನಿಂದ ಜಿಲ್ಲೆಯ ಜನ ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಕೊನೆಗೂ ಎಚ್ಚೆತ್ತ ಇಲಾಖೆ ಸರಿಪಡಿಸಿದೆ.