ಪಶು ಸಂಗೋಪನಾ ಸಚಿವರು ಓದಿದ್ದೆಷ್ಟು?
ರೈತರ ಕಷ್ಟ ಸುಖಗಳನ್ನು ಆಲಿಸಬೇಕಾದ ಪ್ರಮುಖ ಖಾತೆಗಳೆಂದರೆ ಕೃಷಿ ಹಾಗೂ ಪಶು ಸಂಗೋಪನಾ ಇಲಾಖೆಗಳು. ರೈತರ ಸಮಸ್ಯೆ ಆಲಿಸಿದರೆ ರಾಜಕಾರಣಿಗಳಿಗೆ ಮತ್ತೆ ಗೆದ್ದು ಬರುವುದೂ ಕಷ್ಟವೂ ಅಲ್ಲ. ಇಂಥ ಪಶು ಸಂಗೋಪನಾ ಇಲಾಖೆ ಹೊಣೆ ಹೊತ್ತಿರುವ ವೆಂಕಟ್ರಾವ್ ನಾಡಗೌಡ ಅವರು ಸುವರ್ಣ ನ್ಯೂಸ್ ಫೇಸ್ ಬುಕ್ ಲೈವ್‌ನಲ್ಲಿ ರೈತರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದು ಹೀಗೆ....
ಬೆಂಗಳೂರು (ಆ.4): ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದು ಸುಮಾರು ಎರಡು ತಿಂಗಳುಗಳು ಕಳೆದಿವೆ. ವಿವಿಧ ಇಲಾಖೆಗಳ ಸಚಿವರನ್ನು ಕರೆಯಿಸಿ, ಸಮಸ್ಯೆ ಬಗೆಹರಿಸುವ ಯತ್ನವನ್ನು ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್.ಕಾಮ್ ಮಾಡುತ್ತಿದೆ. ನಮ್ಮ ಇಂದಿನ ಮುಖ್ಯ ಅತಿಥಿ ಪಶು ಸಂಗೋಪನೆ ಹಾಗೂ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ ಅವರು.
ಫೇಸ್‌ಬುಕ್‍ನಲ್ಲಿ ಓದುಗರೊಬ್ಬರು ಸಚಿವರ ಶೈಕ್ಷಣಿಕ ಅರ್ಹತೆ ಬಗ್ಗೆಯೂ ಪ್ರಶ್ನೆ ಕೇಳಿದ್ದರು. ಅದಕ್ಕೆ ಅವರು ಉತ್ತರಿಸಿದ್ದು ಹೇಗೆ?
ಇಲಾಖೆಯಲ್ಲಿರುವ ಹತ್ತು ಹಲವು ಸಮಸ್ಯೆಗಳನ್ನು ಪರಹರಿಸಲು ತೆಗೆದುಕೊಂಡಿರುವ ಪರಿಹಾರಗಳು, ತೆಗೆದುಕೊಂಡಿರುವ ಯೋಜನೆಗಳು...ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಓದುಗರ ಪ್ರಶ್ನೆಗಳಿಗೆ ಸಚಿವರು ಫೇಸ್‌ಬುಕ್ ಲೈವ್ ಮೂಲಕ ಉತ್ತರಿಸಿರುವುದು ಹೀಗೆ....
ಮತ್ಸ್ಯಾಶ್ರಯ ಯೋಜನೆಯಲ್ಲಿ ಮೀನುಗಾರರಿಗೆ ಸೂರು ಕಲ್ಪಿಸಲು ಕೆಲವು ಯೋಜನೆಗಳನ್ನು ರೂಪಿಸಲಾಗಿದೆ. ಸ್ಥಳೀಯ ಶಾಸಕರು ಸಮಿತಿಯ ಅಧ್ಯಕ್ಷರಾಗಲಿದ್ದು, ಅರ್ಹ ಫಲಾನುಭವಿಗಳಿಗೆ ಮನೆ ಕಟ್ಟಿಸಿಕೊಡಲು ವ್ಯವಸ್ಥೆ ಮಾಡಲು ಯೋಜನೆ ರೂಪಿಸಿದ್ದೇವೆ. ಕರಾವಳಿ ಭಾಗದ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಇಲಾಖೆ ಮುಂದಾಗಿದೆ. ರಾಜೀವ್ ಗಾಂಧಿ ಹೌಸಿಂಗ್ ಸ್ಕೀಮ್‌ನೊಂದಿಗೆ ಕೈ ಜೋಡಿಸಿ, ಕಟ್ಟುತ್ತಿರುವ ಮನೆಗಳನ್ನು ಗಮನಿಸಲು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಿಗಧಿತ ಸಮಯದೊಳಗೆ ಮನೆ ಕಟ್ಟಲು ಸೂಕ್ತ ಯೋಜನೆಗಳನ್ನು ಹಾಕಿ ಕೊಂಡಿದ್ದೇವೆ.
- ಕುರಿ ಸಾಕಣೆಯೊಂದು ಇದೀಗ ಒಂದು ಫ್ಯಾಷನ್ ಆಗಿದೆ. ಇಂಥವರನ್ನು ಪ್ರೋತ್ಸಾಹಿಸಲು ಸರಕಾರದ ಯೋಜನೆ ಏನಿದೆ, ಎಂದು ಕೇಳಿರುವ ಪ್ರಶ್ನೆಗೆ ಮಹಿಳೆಯರೆಗೆಂದೇ ಎರಡು ಹಸು ಅಥವಾ ಎರಡು ಎಮ್ಮೆ ಕೊಳ್ಳಬಹುದು. ಒಟ್ಟು 1.20 ಲಕ್ಷ ರೂ. ಮೌಲ್ಯದ ಪಶು ಕೊಳ್ಳಲು ನೆರವು ನೀಡಲಾಗುತ್ತದೆ.