Asianet Suvarna News Asianet Suvarna News

ಕೆಎಂಎಫ್‌ ಹೊಸ ಮೈಲಿಗಲ್ಲು! ಭೀಕರ ಬರದ ನಡುವೆಯೂ ಹಾಲು ಉತ್ಪಾದನೆಯಲ್ಲಿ ನಂ.1

ಬರದ ನಡುವೆಯೂ ರಾಜ್ಯದಲ್ಲಿ ಹಾಲಿನ ಹೊಳೆಯೇ ಹರಿದಿದೆ. ಹೌದು,  ರಾಜ್ಯದಲ್ಲಿ ಬರಗಾಲ ನಡುವೆಯೂ ಹಾಲಿನ ಉತ್ಪಾದನೆ ಮಾತ್ರ ಕುಗ್ಗಿಲ್ಲ. ಕಳೆದ ಐದು ವರ್ಷದಲ್ಲಿ ಈ ವರ್ಷವೇ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡಿದೆ. 

KMF Number One in Milk Production in Karnataka grg
Author
First Published Feb 17, 2024, 9:44 AM IST

ಬೆಂಗಳೂರು(ಫೆ.17): ರಾಜ್ಯದಲ್ಲಿ ಭೀಕರ ಬರಗಾಲದ ಮಧ್ಯೆಯೂ ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ನಂಬರ್ ಒನ್‌ ಆಗಿ ಹೊರಹೊಮ್ಮಿದೆ. ಈ ಮೂಲಕ ರಾಜ್ಯದಲ್ಲಿ ಹಾಲು ಉತ್ಪಾದನೆಯಲ್ಲಿ ಕೆಎಂಎಫ್ ಹೊಸ ಮೈಲುಗಲ್ಲು ಸ್ಥಾಪಿಸಿದೆ. 

ಬರದ ನಡುವೆಯೂ ರಾಜ್ಯದಲ್ಲಿ ಹಾಲಿನ ಹೊಳೆಯೇ ಹರಿದಿದೆ. ಹೌದು,  ರಾಜ್ಯದಲ್ಲಿ ಬರಗಾಲ ನಡುವೆಯೂ ಹಾಲಿನ ಉತ್ಪಾದನೆ ಮಾತ್ರ ಕುಗ್ಗಿಲ್ಲ. ಕಳೆದ ಐದು ವರ್ಷದಲ್ಲಿ ಈ ವರ್ಷವೇ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡಿದೆ. 
ಕಳೆದ ತಿಂಗಳು ರಾಜ್ಯದಲ್ಲಿ ನಿತ್ಯ 82.09 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು, ಕಳೆದ ವರ್ಷ ನಿತ್ಯ 74.93.ಲಕ್ಷ ಲೀಟರ್ ಉತ್ಪಾದನೆಯಾಗಿತ್ತು.

ರೈತರ ಹಾಲು ಖರೀದಿ ದರ 4 ರೂ. ತಗ್ಗಿಸಿದ ಕೆಎಂಎಫ್: ಬರದ ನಡುವೆಯೂ ರೈತರಿಗೆ ಬರೆ ಎಳೆದ ಸರ್ಕಾರ!

2021-22 ಸಾಲಿನಲ್ಲಿ ನಿತ್ಯ 77.96 ಲಕ್ಷ ಲೀಟರ್ ಹಾಲು, 2019-20 ರ ಸಾಲಿನಲ್ಲಿ 69.03 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿದೆ. ಆದ್ರೆ ಈ ಬಾರಿ ಬರದ ಬವಣೆಯನ್ನ ಹೈನುಗಾರಿಕೆ ನೀಗಿಸಿದೆ. ಮುಂದಿನ ದಿನಗಳಲ್ಲಿ ನಿತ್ಯ ಒಂದು ಕೋಟಿ ಲೀ ಹಾಲು ಉತ್ಪಾದನೆ ಗುರಿಯನ್ನ ಕೆಎಂಎಫ್ ಇಟ್ಟುಕೊಂಡಿದೆ.  

Follow Us:
Download App:
  • android
  • ios